ಹೃದಯದಲ್ಲಿ ಸದಾ ಗುರುವಿಗೆ ಜಾಗವಿರಲಿ

ಬದುಕಿನಲ್ಲಿ ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಗುರುವಿನ ನೆರಳು ಇದ್ದೇ ಇರುತ್ತದೆ. ಆ ಕಾರಣಕ್ಕಾಗಿ ಗುರುವಿಗೆ ಸಮಾಜದಲ್ಲಿ ಶ್ರೇಷ್ಠ ಗೌರವ ಸಲ್ಲುತ್ತದೆ.

Image

ಸ್ಟೇಟಸ್ ಕತೆಗಳು (ಭಾಗ ೧೩೭೮) - ಬಂಗಾರ

ತುಂಬಾ ಆಸೆ ಮೈಮೇಲೆ ಒಂದು ಸಣ್ಣ ಚಿನ್ನದ ತುಂಡಾದರೂ ಧರಿಸಬೇಕು ಅಂತ. ಅವನ ಆಸೆಗೆ ಜೊತೆಯಾಗಿ ನಿಂತವಳು ಮುದ್ದಿನ ಮಡದಿ, ಇಬ್ಬರೂ ಕಷ್ಟಪಟ್ಟು ಜೀವನವನ್ನು ಕಟ್ಟಿಕೊಂಡು ಜೀವನ ಬೆಳಗುತ್ತಾ ಹೋಯ್ತು. ಪ್ರತಿದಿನವೂ ಒಂದೊಂದು ರುಪಾಯಿ ಶೇಖರಿಸಿ ಹಲವು ವರುಷದ ಉಳಿತಾಯದಿಂದ ಒಂದು ಸಣ್ಣ ಚಿನ್ನದ ತುಂಡನ್ನ ಖರೀದಿಸುವ ಮಟ್ಟಕ್ಕೆ ಅವರು ಬೆಳೆದು ನಿಂತರು.

Image

ನಿಷ್ಪಾಪಿ ಸಸ್ಯಗಳು (ಭಾಗ ೧೦೮) - ಅಂತರಗಂಗೆ

ಪ್ರಕೃತಿಯಲ್ಲಿ ವರ್ಷ ಋತು ಆರಂಭವಾಗಿ ಹಲವಾರು ದಿನಗಳೇ ಸರಿದಿವೆ. ಕಣ್ಮನ ತಣಿಸುವ ಹಸಿರು ನಮ್ಮ ಸುತ್ತಲಿರುವ ಗುಡ್ಡಬೆಟ್ಟ, ಬಯಲು ತಪ್ಪಲಲ್ಲಿ ಹಬ್ಬಿವೆ. ಹಸಿರು ಈ ಸ್ಥಳಗಳನ್ನಲ್ಲದೆ ಕೆಲವೊಮ್ಮೆ ನೀರನ್ನೂ ಬಿಡದೆ ಆವರಿಸಿರುವುದನ್ನು ಕಾಣಬಹುದು.

Image

ಪುಸ್ತಕನಿಧಿ : ಅರ್ಧ ಆದಿ ಪರ್ವದ ಓದು

ಇತ್ತೀಚೆಗೆ ಗೆಳೆಯರೊಬ್ಬರು ವ್ಯಾಸನ ಬಗೆಗೆ ಒಂದು ಪ್ರಶ್ನೆ ಕೇಳಿದರು. ಆಗ ಹಿಂದೆ archive.org ತಾಣದಿಂದ ಇಳಿಸಿಕೊಂಡ ಮಹಾಭಾರತದ ಆದಿಪರ್ವ  ಓದಲಾರಂಭಿಸಿದೆ. ಈ ಆದಿ ಪರ್ವವು ಸುಮಾರು 350+ 350 ಪುಟಗಳ ಎರಡು ಭಾಗಗಳಲ್ಲಿ  ಇದ್ದು ಇದನ್ನು ಪಂಡಿತ ದೇವಶಿಖಾಮಣಿ ಅಳಸಿಂಗಾಚಾರ್ಯರು ಬರೆದಿದ್ದಾರೆ. ಮೊದಲ ಭಾಗವನ್ನು ಓದುವಾಗ ನಾನು ಮಾಡಿಕೊಂಡ ಟಿಪ್ಪಣಿಗಳು ಇಲ್ಲಿವೆ.
ನೈಮಿಷಾರಣ್ಯದಲ್ಲಿ ಶೌನಕನು ಒಂದು ಯಾಗ  ಮಾಡುತ್ತಿದ್ದನು. ಅಲ್ಲಿಗೆ ಸೂತ ಪೌರಾಣಿಕನು  ಹೋದಾಗ ಅವನು ಅಲ್ಲಿನ ಋಷಿಗಳಿಗೆ ಪರೀಕ್ಷಿತನ ಮಗ ಜನಮೇಜಯನು  ಯಾಗ ಮಾಡಿದ ಸಂದರ್ಭದಲ್ಲಿ ವೈಶಂಪಾಯನ ಋಷಿಯು ಹೇಳಿದ ವೇದವ್ಯಾಸ ಪ್ರೋಕ್ತ ಕಥೆಗಳನ್ನು - ಅವು ಮಹಾಭಾರತಕ್ಕೆ ಸಂಬಂಧಿ ಸಿದವು - ಹೇಳಿದನು.

ಜಂಕ್ಷನ್ ಪಾಯಿಂಟ್

ಪುಸ್ತಕದ ಲೇಖಕ/ಕವಿಯ ಹೆಸರು
ದಾದಾಪೀರ್ ಜೈಮನ್
ಪ್ರಕಾಶಕರು
ಹರಿವು ಬುಕ್ಸ್, ಬಸವನಗುಡಿ, ಬೆಂಗಳೂರು -೫೬೦೦೦೪
ಪುಸ್ತಕದ ಬೆಲೆ
ರೂ. ೧೮೦.೦೦, ಮುದ್ರಣ: ೨೦೨೫

ದಾದಾಪೀರ್‌ ಜೈಮನ್‌ ಅವರ “ಜಂಕ್ಷನ್‌ ಪಾಯಿಂಟ್” ಎಂಬ ಅಂಕಣ ಬರಹಗಳ ಸಂಗ್ರಹವು ಒಂದು ಕಾಲದ ಚಿತ್ರಣವಷ್ಟೇ ಅಲ್ಲ, ಒಂದು ಸಮಾಜದ, ವ್ಯಕ್ತಿಗಳ, ಭಾವನೆಗಳ, ಕಷ್ಟ ಕೋಟಲೆಗಳ ಕನ್ನಡಿಯಾಗಿದೆ. ಕೋವಿಡ್‌ ಕಾಲದ ದುಗುಡ ದುಮ್ಮಾನಗಳು, ಅಕಾಲಿಕ ಮಳೆಯಿಂದ ಕವಿದ ಮೋಡದ ವಾತಾವರಣ, ಯುದ್ಧ, ದೌರ್ಜನ್ಯ, ಕೊಲೆ ಸರಣಿಗಳಂತಹ ಸುದ್ದಿಗಳ ನಡುವೆ, ಈ ಬರಹಗಳು ಓದುಗರ ಮನಸ್ಸಿನಲ್ಲಿ ಒಂದು ಭಾವನಾತ್ಮಕ ಜಂಕ್ಷನ್‌ ರಚಿಸುತ್ತವೆ.

ಜ್ಯೋತಿ ಯಾವ ಜಾತಿ?

ಒಂದು ಪ್ಯಾಂಟು ಮತ್ತು ಒಂದು ಶರ್ಟನ್ನು ರಸ್ತೆ ಪಕ್ಕದ ಮರದ ನೆರಳಿನಲ್ಲಿ  ಇದ್ದ ತಳ್ಳುಗಾಡಿಯ  ಇಸ್ತ್ರಿ ಮಾಡುವ ವ್ಯಕ್ತಿಗೆ ಕೊಟ್ಟು ಆತ ತದೇಕ ಚಿತ್ತದಿಂದ, ಸಂಪೂರ್ಣ ಏಕಾಗ್ರತೆಯಿಂದ ಬಟ್ಟೆಯ ಪ್ರತಿ ಸುಕ್ಕುಗಳನ್ನು ತುಂಬಾ ಶ್ರದ್ಧೆಯಿಂದ ಐರನ್ ಮಾಡುವುದನ್ನು ಹಾಗೇ ನೋಡುತ್ತಾ ನಿಂತ ನನಗೆ ಸಿನಿಮಾ ಶೈಲಿಯ ರೀತಿ ಸುರುಳಿ ಸುರುಳಿಯಾಗಿ ನೆನಪುಗಳ ಬುತ್ತಿ ಬಿಚ್ಚಿಕೊಳ್ಳತೊಡಗಿ ನನ್ನ

Image

ಸ್ಟೇಟಸ್ ಕತೆಗಳು (ಭಾಗ ೧೩೭೭) - ಅಯ್ಯೋ!

ಹೋರಾಟದ ಮಾತನಾಡಿದರು. ಸೇರಿದ ಎಲ್ಲರೊಳಗೂ ವಿರೋಧ ಮಾಡಲೇಬೇಕೆನ್ನುವ ಛಲ ತುಂಬಿದರು. ವಿರೋಧಿಗಳನ್ನು ಕೊಲ್ಲುವುದೇ ಸಾಧನೆ ಎಂಬಂತೆ ಪ್ರತಿಯೊಬ್ಬರಿಗೂ ಕರೆ ನೀಡಿದರು. ನಾವೆಲ್ಲರೂ ಒಟ್ಟಾಗಿ ನಿಂತರೆ ಎದುರಾಳಿ ಓಡಿ ಹೋಗುತ್ತಾನೆ ಗೆಲುವು ನಮ್ಮದೆಂದರು. ಇದನ್ನೇ ನಂಬಿದ್ದ ಕೆಲವು ಮನಸ್ಸುಗಳು ಹೋರಾಟಕ್ಕೆ ದುಮುಕಿಯೇ ಬಿಟ್ಟರು.

Image