ಎಚ್ ಎಸ್ ವಿ

“ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ…

ಎಲ್ಲುಂಟು ಆಚೆ ತೀರ?”

ಚಳ್ಳಕೆರೆಯಲ್ಲಿ ನಮ್ಮ ತಾತನ ಮನೆಗೆ ಬಂದಾಗ ಒಮ್ಮೆ ಅವರ ಕವನಗಳಿರುವ ಒಂದು ಪುಸ್ತಕವನ್ನು ಕೊಟ್ಟಿದ್ದರಂತೆ. ಅವರು ಮುಂಚಿನಿಂದಲೂ ಕಾವ್ಯದಲ್ಲಿ ಆಸಕ್ತಿ ಇಟ್ಟುಕೊಂಡಿದ್ದರು ಎಂದು ಅಜ್ಜಿಯ ಮನೆಯವರೆಲ್ಲ ಹೇಳುತ್ತಿದ್ದರು. ನಮ್ಮ ಅಜ್ಜಿ ತಾತನ ಬಂಧುಗಳಲ್ಲಿ ಎಲ್ಲರಿಗೂ ಓದುವುದರಲ್ಲಿ ಎಲ್ಲಿಲ್ಲದ ಆಸಕ್ತಿ. ಕಾವ್ಯದಲ್ಲಿ ಇವರೇ ಹೆಚ್ಚು ತೊಡಗಿಸಿಕೊಂಡವರು.

Image

ರಾಜ್ ಎಂಬ ಸರಳತೆಯ ವಿಸ್ಮಯ

ಜಗತ್ತಿನಲ್ಲಿ ಮಹಾಪುರುಷರೆಲ್ಲಾ ತಮ್ಮ ಸರಳತೆಗೆ ಹೆಸರಾದವರೇ. ರಾಜ್ ಕೂಡಾ ಇದೇ ಹಾದಿಯಲ್ಲಿ ನಡೆದು ಬಂದವರು. ಶುಭ್ರ ಬಿಳೀ ಷರ್ಟ್ ಹಾಗೂ ಬಿಳಿ ಪಟ್ಟಿ ಪಂಚೆ, ತಲೆಯನ್ನು ಎಣ್ಣೆ ಹಾಕಿ ಬಾಚುತ್ತಿದ್ದರು, ಕೂದಲು ಉದುರಿದರೂ ವಿಗ್ ಧರಿಸುತ್ತಿರಲ್ಲಿಲ್ಲ. ಕಾಲಿಗೊಂದು ಸರಳವಾದ ಉಂಗುಷ್ಟದ ಚಪ್ಪಲಿ. ಮೊಗದಲ್ಲೊಂದು ಸದಾ ಮಗುವಿನ ಮುಗ್ಧ ನಗು.

Image

ಕಮಲ್ ತಪ್ಪಿದ ತಾಳ

ಕಲೆ, ಕಲಾವಿದ ಒಂದರ್ಥದಲ್ಲಿ ಬಾಂಧವ್ಯ ಬೆಸೆಯುವ ಸೂಜಿದಾರವಿದ್ದಂತೆ. ಭಾವೈಕ್ಯತೆಯ ನೇಯ್ಕೆಗೆ ಕಲಾವಿದನ ಕೊಡುಗೆ ದೊಡ್ಡದು. ನಮ್ಮ ಪರಿಸರದಲ್ಲಿ ಗಡಿ, ಭಾಷೆ, ಜಾತಿ, ಧರ್ಮಗಳ ಹೆಸರಿನಲ್ಲಿ ಮನಸ್ಸುಗಳನ್ನು ದೂರ ಮಾಡುವ ರಾಜಕೀಯ ಉದ್ದೇಶಿತ ಹತಾರಗಳು ಸಾಕಷ್ಟಿರುವಾಗ, ಜನರನ್ನು ಪರಸ್ಪರ ಹತ್ತಿರವಾಗಿಸುವಂಥ ಸಾಮರ್ಥ್ಯ ಕಲೆ, ಕಲಾವಿದನಿಗೂ ಇದೆಯೆಂಬುದು ಮನುಕುಲದ ಬಹುದೊಡ್ಡ ಸಮಾಧಾನ.

Image

ದೇಶ ಮುಖ್ಯವೋ, ದ್ವೇಷ ಮುಖ್ಯವೋ ?

ಮಂಗಳೂರಿನ ಪ್ರತೀಕಾರದ ಕೋಮು ಹತ್ಯೆಗಳಿಗೆ ನಾವೇ ಇತಿಶ್ರೀ ಹಾಡಬೇಕಿದೆ. ದೇಶ ಮುಖ್ಯವೋ ದ್ವೇಷ ಮುಖ್ಯವೋ ದಯವಿಟ್ಟು ಅರ್ಥಮಾಡಿಕೊಳ್ಳಿ. ತುಂಬಾ ಕಷ್ಟದ ಸಮಯ ಕಣ್ರೀ. ತಲೆಗೊಂದು ಮಾತನಾಡಬೇಡಿ. ಕೂಗಾಡಬೇಡಿ, ಕಿರುಚಾಡಬೇಡಿ. ಪೆಟ್ರೋಲ್ ಸುರಿಯಬೇಡಿ, ಬೆಂಕಿ ಹಚ್ಚಬೇಡಿ. ಸ್ವಲ್ಪವೂ ಕಾಮನ್ ಸೆನ್ಸ್ ಇಲ್ಲವಲ್ರೀ.

Image

ಸ್ಟೇಟಸ್ ಕತೆಗಳು (ಭಾಗ ೧೩೩೬) - ಬೇಟೆಗಾರ

ಎಲ್ಲರೂ ಈ ಕತೆಯನ್ನ ಓದುವವರೇ, ತುಂಬಾ ಆಸಕ್ತಿಯಿಂದ, ಉತ್ಸುಕತೆಯಿಂದ ಪುಸ್ತಕ ಸಾವಿರಗಟ್ಟಲೆ ಮಾರಾಟವಾಯಿತು. ಬೇಟೆಗಾರನೊಬ್ಬನ ಸತ್ಯಕತೆ ಆಧಾರಿತ ಪುಸ್ತಕ ಅದಾಗಿತ್ತು. ಪ್ರತೀ ಪುಟದಲ್ಲೂ ಬೇಟೆಗಾರನ ಹೋರಾಟ ಚಾಕಚಕ್ಯತೆ ಎಲ್ಲವನ್ನೂ ವರ್ಣಿಸಲಾಗಿತ್ತು. ಅದನ್ನು ಓದಿದ ಪ್ರತಿಯೊಬ್ಬರು ಬೇಟೆಗಾರನನ್ನು ಅಭಿನಂದಿಸಿದವರೇ. ಹೀಗೆ ಸಮಯಗಳು ಉರುಳಿದವು.

Image

ನಿಷ್ಪಾಪಿ ಸಸ್ಯಗಳು (ಭಾಗ ೧೦೨) - ಹಾವಿನ ಗಿಡ

ನನಗೆ ಈ ತುಂತುರು ಹನಿಗಳೆಂದರೆ ಬಹಳ ಇಷ್ಟ. ಯಾಕೆ ಬಲ್ಲಿರಾ? ಮಳೆಗಾಲದ ಬಿರು ಮಳೆ ನನ್ನ ಆರೋಗ್ಯಕ್ಕೆ ಹಿಡಿಸುವುದೇ ಇಲ್ಲ. ನೀರು ಜಾಸ್ತಿಯಾಯಿತೆಂದರೆ ಸಾಕು. ನನ್ನ ಬೇರುಗಳು ಕೊಳೆಯತೊಡಗುತ್ತವೆ! ಜೀವವೇ ಹೋದಷ್ಟು ನಿತ್ರಾಣಿಯಾಗಿಬಿಡುತ್ತೇನೆ. ಹಾಗಂತ ನನಗೆ ಬಿಸಿಲೂ ಅಷ್ಟೇನು ಇಷ್ಟವಿಲ್ಲ.

Image

ಕರಿಮಾಯಿ ಗುಡ್ಡ

ಪುಸ್ತಕದ ಲೇಖಕ/ಕವಿಯ ಹೆಸರು
ನಾ. ದಾಮೋದರ ಶೆಟ್ಟಿ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ : ೨೦೨೫

ಹಿರಿಯ ಸಾಹಿತಿ ನಾ. ದಾಮೋದರ ಶೆಟ್ಟಿಯವರ 'ಕರಿಮಾಯಿ ಗುಡ್ಡ' ಕಾದಂಬರಿ ಸಾಂಸಾರಿಕ, ಸಂಶೋಧನಾತ್ಮಕ ಹಾಗೂ ಪತ್ತೇದಾರಿಯ ಗುಣಗಳನ್ನು ಹೊಂದಿದೆ. ಆಧುನಿಕ ಬದುಕಿಗೆ ಸಮೀಪವಾದ ಕಥಾವಸ್ತುವನ್ನೊಳಗೊಂಡಿದ್ದು ರೋಚಕ ತಿರುವುಗಳಿಂದ ಕೂಡಿ, ಕುತೂಹಲ ಕೆರಳಿಸುತ್ತ ಸಾಗುವ ಕಾದಂಬರಿ ಚೇತೋಹಾರಿ ಶೈಲಿಯಿಂದ ಕೂಡಿದೆ.