ನಯನ ಮನೋಹರ ಮಾವಿನ ಕುರ್ವೆ ದ್ವೀಪ

ನಯನ ಮನೋಹರ ಶರಾವತಿ ನದಿಯ ದಡದಲ್ಲಿರುವ ಹೊನ್ನಾವರ. ಬ್ರಿಟಿಷರ ಆಳ್ವಿಕೆಯ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿತವಾಗಿರುವ ಕರ್ನಲ್ ಹಿಲ್ ಒಂದೆಡೆಯಾದರೆ, ಶರಾವತಿ ನದಿಗೆ ಹೊಂದಿಕೊಂಡಿರುವ ನಿಸರ್ಗವೇ ನಿರ್ಮಿಸಿಕೊಂಡಿರುವ ಒಂದು ಪುಟ್ಟ ದ್ವೀಪ ಮಾವಿನಕುರ್ವೆ ಇನ್ನೊಂದೆಡೆ. 

Image

ನಿಮ್ಮ ಬಗ್ಗೆ ನೀವೇ ಹೆಮ್ಮೆಪಡಿ, ಆತ್ಮವಿಶ್ವಾಸಕ್ಕೆ ಧಕ್ಕೆ ತರುವ ಈ ಅಭ್ಯಾಸದಿಂದ ದೂರವಿರಿ...

ಆತ್ಮವಿಶ್ವಾಸವು ಪ್ರತಿಯೊಬ್ಬರಲ್ಲೂ ಇರಬೇಕಾದ ಅತಿ ಪ್ರಮುಖ ಗುಣ. ನಮ್ಮ ಮೇಲೆಯೇ ನಮಗೆ ನಂಬಿಕೆ ಹಾಗೂ ವಿಶ್ವಾಸವಿರದ ಮೇಲೆ, ನಾವು ಬೇರೆಯವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಅಥವಾ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಾವು ಮಾಡುವ ಕೆಲಸ ಕಾರ್ಯ ಹಾಗೂ ನಮ್ಮ ನಡವಳಿಕೆಯ ಬಗ್ಗೆ ನಾವು ಎಂದಿಗೂ ಗಟ್ಟಿ ನಿಲುವು ಹೊಂದಿರಬೇಕು. ನಮ್ಮ ನಿರ್ಧಾರಗಳು ಯಾವತ್ತೂ ನೂರು ಪ್ರತಿಶತ ಬಿಗಿಯಾಗಿರಬೇಕು.

ಗತಜನ್ಮ - ಮತ್ತೆರಡು ಕತೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್ ಎಲ್ ಭೈರಪ್ಪ
ಪ್ರಕಾಶಕರು
ಸಾಹಿತ್ಯ ಭಂಡಾರ, ಬಳೇಪೇಟೆ, ಬೆಂಗಳೂರು - ೫೬೦೦೫೩
ಪುಸ್ತಕದ ಬೆಲೆ
ರೂ. ೯೦.೦೦, ಮುದ್ರಣ: ೨೦೨೪

‘ಗತಜನ್ಮ - ಮತ್ತೆರಡು ಕತೆಗಳು’ ಕಥಾ ಸಂಕಲನದಲ್ಲಿರುವ ‘ಗತಜನ್ಮ’ ಕಥೆಯನ್ನು ಎಸ್ ಎಲ್ ಭೈರಪ್ಪನವರು ತಮ್ಮ ಹೈಸ್ಕೂಲ್ ದಿನಗಳಲ್ಲಿ ಬರೆದದ್ದು ಎನ್ನುವುದೇ ಕುತೂಹಲಕಾರಿ ಸಂಗತಿ. ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವಂತೆ ಭೈರಪ್ಪನವರು ಇಂದಿನ ದಿನ ಏನು ಸಾಧಿಸಿದ್ದಾರೋ ಅದರ ಪ್ರಾರಂಭ ಆದದ್ದು ಅವರ ಹೈಸ್ಕೂಲ್ ದಿನಗಳಲ್ಲೇ ಎನ್ನಬಹುದು. ಭೈರಪ್ಪನವರ ಇಂದಿನ ಕಾದಂಬರಿಯ ಕಥಾವಸ್ತುಗಳಿಗೆ ಸರಿಸಾಟಿ ಇಲ್ಲ.

ಮದ್ದೂರು ವಡೆ

Image

ಕಡಲೆ ಕಾಯಿ ಬೀಜವನ್ನು ತರಿತರಿಯಾಗಿ ಹುಡಿ ಮಾಡಿ. ಅಕ್ಕಿ ಹಿಟ್ಟು ಹಾಗೂ ಮೈದಾ ಹಿಟ್ಟಿನೊಂದಿಗೆ ಸೇರಿಸಿ ಕಲಸಿ. ಈ ಮಿಶ್ರಣಕ್ಕೆ ಮೊಸರು, ಈರುಳ್ಳಿ, ಹಸಿ ಮೆಣಸಿನಕಾಯಿ, ಪುದೀನಾ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಶುಂಠಿ ತುರಿ, ಎಳ್ಳು, ಉಪ್ಪು, ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಕಲಸಿ. ನಂತರ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲಸಿಡಿ.

ಬೇಕಿರುವ ಸಾಮಗ್ರಿ

ಅಕ್ಕಿ ಹಿಟ್ಟು ೨ ಕಪ್, ಮೈದಾ ಹಿಟ್ಟು ೧ ಕಪ್, ಕಡಲೆಕಾಯಿ ಬೀಜ - ಅರ್ಧ ಕಪ್, ಮೊಸರು - ೧ ಕಪ್, ಕತ್ತರಿಸಿದ ಈರುಳ್ಳಿ - ೧ ಕಪ್, ಕತ್ತರಿಸಿದ ಹಸಿಮೆಣಸಿನ ಕಾಯಿ - ೭ ತುಂಡುಗಳು, ಕತ್ತರಿಸಿದ ಪುದೀನಾ ಸೊಪ್ಪು - ೨ ಚಮಚ, ಕತ್ತರಿಸಿದ ಕರಿಬೇವಿನ ಸೊಪ್ಪು - ೨ ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು - ೩ ಚಮಚ, ಶುಂಠಿ ತುರಿ - ೧ ಚಮಚ, ಜೀರಿಗೆ - ೩ ಚಮಚ, ಬಿಳಿ ಎಳ್ಳು ೨ ಚಮಚ, ಅಡುಗೆ ಸೋಡಾ - ಅರ್ಧ ಚಮಚ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಸ್ಟೇಟಸ್ ಕತೆಗಳು (ಭಾಗ ೧೩೩೦) - ಸೈಲೆಂಟ್ ಹೋರಾಟ

ನನಗೆ ತುಂಬಾ‌ ನೋವಾಗುತ್ತಿದೆ. ನನಗೆ ಗೌರವ ಇಲ್ಲವೆಂದ ಮೇಲೆ‌ ನನ್ನನ್ನ ಬಳಸುವುದು ಯಾತಕ್ಕೆ. ನಿಮ್ಮ ಉಪಯೋಗಕ್ಕೆ‌ ಬಳಸಿಕೊಂಡು ಆನಂತರ ನನ್ನನ್ನು ಮೌನವಾಗಿಸಿಬಿಡೋದು. ತುಂಬಾ ಒಳ್ಳೆಯದು. ಹಾಗಾಗಿ ನಾನು ನಿಮ್ಮಮೇಲೆ ಕೇಸು ದಾಖಲಿಸುತ್ತೇನೆ.

Image

ದಿವ್ಯ ಅನಂತದೆಡೆಗೆ ಪಯಣ ಬೆಳೆಸಿದ ಕಾಸ್ಮಿಕ್ ಗುರು!

ಸ್ವತಂತ್ರ ಭಾರತ ಕಂಡ ಅತ್ಯಂತ ವಿವೇಕಶಾಲಿ ಖಗೋಳ ವಿಜ್ಞಾನಿಗಳಲ್ಲಿ ಜಯಂತ್ ನಾರ್ಲಿಕರ್ ಅವರು ಒಬ್ಬರು. ಮೇ 20ರಂದು ಅವರ ನಿಧಾನವಾಗಿದೆ; ಅವರ ನಿಧನದಿಂದ ಅವರಿಂದ ಪ್ರೇರಿತಗೊಂಡ ಸಾವಿರಾರು ಖಗೋಳ ಆಸಕ್ತರು ದುಃಖಿತರಾಗಿದ್ದಾರೆ.

Image

ಸಮಯೋಚಿತ ಕ್ರಮಕ್ಕೆ ಕ್ಯಾತೆ ಏಕೆ?

ಭಯೋತ್ಪಾದಕರಿಂದ ಪಹಲ್ಗಾಮ್ ನಲ್ಲಿ ನಡೆದ ಕ್ರೂರ ದಾಳಿ, ಅದರ ಹಿಂದೆ ಇರುವ ಪಾಕಿಸ್ತಾನದ ಕೈವಾಡ, ಪ್ರತೀಕಾರವಾಗಿ ಭಾರತವು ಕೈಗೊಂಡ ಅಪರೇಷನ್ ಸಿಂದೂರ್ ಮತ್ತು ಪಾಕಿಸ್ತಾನವು ಕಳೆದ ೪೦ ವರ್ಷಗಳಿಂದ ಭಯೋತ್ಪಾದನೆಯನ್ನು ಪೋಷಿಸುತ್ತಿರುವ ರೀತಿ ಮೊದಲಾದವುಗಳ ಬಗ್ಗೆ ಜಗತ್ತಿಗೆ ಅರಿವು ಮೂಡಿಸಲು ಕೇಂದ್ರ ಸರಕಾರವು ಸರ್ವಪಕ್ಷಗಳ ಸಂಸತ್ ಸದಸ್ಯರನ್ನು ಒಳಗೊಂಡ ನಿಯೋಗಗಳನ್ನು ರಚಿಸಿ ಅವುಗಳನ್ನು ವಿದೇಶಗಳಿಗೆ ಕಳಿಸಿಕೊಡುತ

Image