ಸೂರ್ಯನ ಬೆಳಕು ನಮಗೆ ಎಷ್ಟು ಮುಖ್ಯ?

ಬೇಸಿಗೆ ಕಾಲದಲ್ಲಿ ಸೂರ್ಯನ ಕಿರಣಗಳು ನಮ್ಮ ಮೈ ಸೋಕಿದೊಡನೆಯೇ ಸೆಖೆಯ ಅನುಭವವಾಗಿ ಮೈ ಬೆವೆತು ಹೋಗುತ್ತದೆ. ಬಹಳಷ್ಟು ಮಂದಿ ಸೂರ್ಯನ ಬಿಸಿಲು ಇರುವ ಸಮಯದಲ್ಲಿ ಮನೆಯಿಂದ ಹೊರಗೆ ಬರುವುದೇ ಇಲ್ಲ. ಆದರೆ ಸೂರ್ಯನೆಂದರೆ ಜೀವನ, ಸೂರ್ಯನ ಬೆಳಕನ್ನು ಸಮರ್ಪಕವಾಗಿ ಪಡೆಯದವರು ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಚಳಿಗಾಲದ ವೇಳೆ ಸೂರ್ಯನ ಬೆಳಕು ಕಡಿಮೆ ಸಿಗುತ್ತದೆ.

Image

ವಚನಭ್ರಷ್ಟ ಪಾಕ್ ಮೇಲೆ ಒತ್ತಡ ಹೆಚ್ಚಿಸಲು ಭಾರತಕ್ಕಿದು ಸಕಾಲ

ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ ೨೬ ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ಬಳಿಕ ಭಾರತ ಮತ್ತು ಪಾಕಿಸ್ಥಾನ ನಡುವಣ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿತ್ತು.

Image

ಸಾಧನೆಯ ಸಮಾವೇಶ....

ಸರ್ಕಾರ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಸಾಧನೆಯ ಸಮಾವೇಶ ಮಾಡುತ್ತಿದೆ. ಈ ಎರಡು ವರ್ಷಗಳ ನಂತರ ನಿಜಕ್ಕೂ ಸಮಾರಂಭವೆಂಬ ಬೃಹತ್ ವಿಜೃಂಭಣೆಯ ಕಾರ್ಯಕ್ರಮ ಮಾಡುವಷ್ಟು ಸಾಧನೆ ಈ ಸರ್ಕಾರದಿಂದಾಗಿದೆಯೇ ?

Image

ಸ್ಟೇಟಸ್ ಕತೆಗಳು (ಭಾಗ ೧೩೨೭) - ಕನಸಿಲ್ಲದವರು

ಮಗಳಿಗೆ ಕನಸಿತ್ತು, ಮದುವೆ ಕಾರ್ಯಕ್ರಮದ ಸಂಭ್ರಮದ ಮೆರುಗಿನ‌ ಬಗ್ಗೆ ಆಸೆ ದೊಡ್ಡದಿತ್ತು. ಅಪ್ಪ ಅಣ್ಣನ ಕಿಸೆಗಳು ಮೌನತಾಳಿದ್ದವು. ಮಗಳಿಗೆ ಅವಳ ಆಸೆಗಳೇ ದೊಡ್ಡದಾಗಿತ್ತು.‌ ನಾಲ್ಕು ಜನರ ಬಾಯಲ್ಲಿ ಗೌಜಿ ಗಮ್ಮತಿನ ಮಾತು‌ ನಡೆಯಬೇಕಿತ್ತು. ಬಣ್ಧದ ಬೆಳಕು ಮಿಂಚಬೇಕು. ಶಬ್ದದ ಅಬ್ಬರ ಪಕ್ಕದೂರಿಗೆ ಕೇಳಬೇಕು.

Image

ಆಡಂಬರ (ಭಾಗ 2)

ಗುರುದೇವ ರಾನಡೆಯವರು ಸಂತರು. ಒಂದು ದಿನ ರಾನಡೆ, ಮಿತ್ರ ಉಪಕುಲಪತಿ ಜೊತೆ ಪಟ್ಟಣದ ಬೀದಿಯಲ್ಲಿ ನಡೆದು ಹೋಗುತ್ತಿದ್ದರು. ಆಗ ಮಿತ್ರ ಒಂದು ಮನೆ ತೋರಿಸಿ, ಆ ಮನೆ ಎಷ್ಟು ಸುಂದರವಾಗಿದೆ? ಅಂದರು. ಅದಕ್ಕೆ ಗುರುದೇವ ರಾನಡೆ ಹೇಳಿದರು "ಅಷ್ಟೇ ಸೌಂದರ್ಯ ಒಳಗೆ ಇದ್ದರೆ, ಆ ಮನೆ ಸೌಂದರ್ಯ ಅಂತ ಒಪ್ಪಿಕೊಳ್ಳಬೇಕು" , ಅಂದರು.

Image

'ಜಗಕೆಲ್ಲಾ ಅವನೇ ಹರಿತಾನೆ'

ಜಗದಲ್ಲೂ ನೀನೇ ಜಗವೆಲ್ಲಾ ನೀನೇ

ನಮ್ಮಲ್ಲೂ ನೀನೇ ಎಲ್ಲೆಲ್ಲೂ ನೀನೇ

ಜಡದಲ್ಲೂ ನೀನೇ ಗಿಡದಲ್ಲೂ ನೀನೇ

ಬುಡವೆಲ್ಲಾ ನೀನೇ ಜಗದಗಲ ನೀನೇ II 1 II

 

ಸಕಲಕೆಲ್ಲವೂ ನೀನೇ ಅಕಳಂಕಕೂ ನೀನೇ

ಹರಿಯೂ ನೀನೇ ಹರಿಯುತಿಹೆ ನೀನೇ

ವಿಶ್ವರೂಪನೂ ನೀನೇ ವಿಶ್ವಭೂಪನೂ ನೀನೇ

ನುಡಿಯಲ್ಲೂ ನೀನೇ ನನ್ನ ಧ್ವನಿಯಲ್ಲೂ ನೀನೇ II 2 II

 

ದಿಕ್ಕೆಲ್ಲಾ ನೀನೇ ದಿಸೆಯೆಲ್ಲಾ ನೀನೇ

ಭುವಿ ಚರಣ ನೀನೇ ಬಾನ ಮುಕುಟ ನೀನೇ

ಈ ಕೃತಿಯೂ ನೀನೇ ಈ ಸ್ತುತಿಯೂ ನೀನೇ

ಕಣ ಕಣವೂ ನೀನೇ ಋಣ ಋಣವೂ ನೀನೇ II 3 II

ಸೋಫಿಯಾ ಭಾರತದ ಸೋದರಿ

ನಾವು ಮಾತನಾಡುವ ಶಬ್ದಗಳು ಕಣ್ಣಿಗೆ ಕಾಣಿಸುವುದಿಲ್ಲ ನಿಜ. ಆದರೆ, ಅವುಗಳಿಗೆ ಮನಸನ್ನು ಅರಳಿಸುವ, ಸಾಂತ್ವನ ಹೇಳುವ, ಸಂತೃಪ್ತಿ ನೀಡುವ, ಸ್ಫೂರ್ತಿ ತುಂಬಬಲ್ಲ ಶಕ್ತಿ ಇರುತ್ತದೆ. ಹಾಗೆಯೇ, ಕೇಳುಗರ ಮನದಲ್ಲಿ ಶಾಶ್ವತ ಗಾಯ ಮಾಡುವ ಅಪಾಯವೂ ಆ ಮಾತುಗಳಲ್ಲಿರುತ್ತದೆ ಎಂಬುದನ್ನು ಮರೆಯಬಾರದು.

Image

ಕಪ್ಪು ಹಲ್ಲಿನ ಕಥೆ

ಪುಸ್ತಕದ ಲೇಖಕ/ಕವಿಯ ಹೆಸರು
ಉಮೇಶ್ ತೆಂಕನಹಳ್ಳಿ
ಪ್ರಕಾಶಕರು
ಪ್ರತಿಮಾ ಟ್ರಸ್ಟ್, ಚೆನ್ನರಾಯಪಟ್ಟಣ, ಹಾಸನ
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ: ೨೦೨೪

`ಕಪ್ಪು ಹಲ್ಲಿನ ಕಥೆ’ ಉಮೇಶ್ ತೆಂಕನಹಳ್ಳಿ ಅವರ ಕಾದಂಬರಿಯಾಗಿದೆ. ಕೃತಿಯಲ್ಲಿ ಲೇಖಕರು ಹೀಗೆ ಹೇಳಿದ್ದಾರೆ; ನಮ್ಮ ಹಿರಿಯರಿಗೆ ಎಲ್ಲಕ್ಕಿಂತ ಮುಖ್ಯವಾಗಿ ಅನುಭವದ ಜ್ಞಾನ ಹೆಚ್ಚಾಗಿತ್ತು. ಅದಕ್ಕೆ ಇಂದಿಗೂ ಜೀವಂತ ನಿದರ್ಶನಗಳು ಕಣ್ಣ ಮುಂದೆ ನಿಲ್ಲುತ್ತವೆ. ಕೆರೆ ಕಟ್ಟೆಗಳ ಪರಿಕಲ್ಪನೆ, ಎಲ್ಲರೂ ಎಲ್ಲರಿಗೋಸ್ಕರ ಎಂಬ ಸಂತೆಯ ಪರಿಕಲ್ಪನೆ. ದೇಶವಾರು, ಪ್ರಾಂತ್ಯವಾರು ಆಹಾರ ಪದ್ಧತಿ ಇರಬಹುದು.