ಬ್ರಹ್ಮನಿಯಮದ ಎದಿರು ಆತ್ಮಶಕ್ತಿ (ಮಾನವ ಪ್ರಯತ್ನ) ಎಷ್ಟು ಸಫಲ? ಎಂಬ ಗಂಭೀರ ಪ್ರಶ್ನೆಯನಿಟ್ಟು ಕೊಂಡು ಸಿನಿಮಾ ಆರಂಭವಾಗುತ್ತದೆ. ಇದಕ್ಕೆ ಉತ್ತರವು ಕೊನೆಯ 2-3 ನಿಮಿಷಗಳಲ್ಲಿ ಸಿಗುತ್ತದೆ. ಈ ಸಿನಿಮಾ ಯೂ ಟ್ಯೂಬಲ್ಲಿ ಇದೆ.
ಇದು ಶ್ರೀ ಶ್ರೀ ಶ್ರೀ ಭಂ ಭಂ ಭಂ ಸ್ವಾಮಿಗಳ ಆಶೀರ್ವಾದದಿಂದ ತಯಾರಾದ ಸಿನಿಮಾ ಎ೦ದು ಟೈಟಲ್ಸ ನಲ್ಲಿದೆ. ಇನ್ನೊಂದು ಕಡೆ ಯಜ್ಞನಾರಾಯಣ ಎಂಬ ಹೆಸರನ್ನು ಎಗ್ನನಾರಾಯಣ ಎಂದು ಬರೆದಿರುವುದನ್ನು ಗಮನಿಸಬಹುದು.
ಸಿನಿಮಾದ ನಾಯಕ ಉದಯ ಕುಮಾರ್. ಆದರೆ ರಾಜಕುಮಾರ್ ಒಂದು ಪ್ರಮುಖ ಪಾತ್ರದಲ್ಲಿದ್ದಾರೆ. ಕೆಳಗಿನ ಡೈಲಾಗುಗಳು ಇಲ್ಲಿನ ವಿಶೇಷ. Alliteration ಗಮನಿಸಿ
ಕಮಂಗಿ ಕೈಯಲ್ಲಿ ತಾಳಿ ಕಟ್ಟಿಸ್ಕೊಳೋಕೆ ಕಾದು ಕೂತಿದ್ದೀನಾ ?