ತುಂಟ ಟೆಡ್ಡಿ ಕರಡಿಗಳು

ಬಿರು ಬೇಸಗೆಯ ಒಂದು ದಿನ ರಾಮು ಮತ್ತು ಶಾಮುಗೆ ಅವರ ಹೆತ್ತವರು ಸಮುದ್ರ ತೀರಕ್ಕೆ ಹೋಗಲು ಬೇಗ ತಯಾರಾಗ ಬೇಕೆಂದು ಹೇಳಿದರು.

"ನಾವು ನಮ್ಮ ಟೆಡ್ಡಿ ಕರಡಿಗಳನ್ನು ಒಯ್ಯಬಹುದೇ?” ಕೇಳಿದ ರಾಮು. “ನೀವು ಅವುಗಳ ಮೇಲೆ ಕಣ್ಣಿಡುತ್ತೀರಿ ಎಂದಾದರೆ ಮಾತ್ರ ಒಯ್ಯಬಹುದು" ಎಂದರು ಅಪ್ಪ. “ಯಾಕೆಂದರೆ, ನೀವೇನಾದರೂ ಅವನ್ನು ಕಳೆದುಕೊಂಡರೆ, ಸಂಜೆಯ ವರೆಗೆ ಹುಡುಕುತ್ತಾ ಇರಲು ನಮ್ಮಿಂದ ಸಾಧ್ಯವಿಲ್ಲ” ಎಂದು ಅವರು ವಿವರಿಸಿದರು.

Image

ಪಾರಿವಾಳಗಳು (ಲಲಿತ ಪ್ರಬಂಧಗಳು)

ಪುಸ್ತಕದ ಲೇಖಕ/ಕವಿಯ ಹೆಸರು
ವಿಠಲ್ ಶೆಣೈ
ಪ್ರಕಾಶಕರು
ಸ್ವ-ಪ್ರಕಾಶನ, ಮಲ್ಲೇಶಪಾಳ್ಯ, ಬೆಂಗಳೂರು- ೫೬೦ ೦೭೫
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ: ೨೦೧೮

‘ಪಾರಿವಾಳಗಳು’ ಎಂಬ ಲಲಿತ ಪ್ರಬಂಧಗಳನ್ನು ಒಳಗೊಂಡಿರುವ ಪುಸ್ತಕವನ್ನು ಕೈಯಲ್ಲಿ ಓದಲು ಹಿಡಿದುಕೊಂಡಾಗ ನನಗೆ ಅದರ ಕಥಾ ವಸ್ತುವಿನ ಮೇಲೆ ಬಹಳವೇನೂ ಅಪೇಕ್ಷೆಯಿರಲಿಲ್ಲ. ಆದರೆ ಸ್ವಲ್ಪ ಕುತೂಹಲ ಖಂಡಿತಾ ಇತ್ತು. ಇದು ಲೇಖಕರಾದ ವಿಠಲ್ ಶೆಣೈ ಅವರ ಮೊದಲ ಪ್ರಕಟಿತ ಪುಸ್ತಕ.

ವೈಕುಂಠ ಏಕಾದಶಿ ದಿನದ ಮಹಿಮೆ ಗೊತ್ತೇ?

ನಿನ್ನೆ ತಾನೇ ವೈಕುಂಠ ಏಕಾದಶಿ ದಿನವನ್ನು ಆಚರಿಸಿದೆವು. ಈ ದಿನವನ್ನು ಗೀತಾ ಜಯಂತಿ ಎಂದೂ ಕರೆಯುತ್ತಾರೆ. ನಮ್ಮ ಜೀವನದಲ್ಲಿ ಕಷ್ಟ-ಸುಖ ಸಾಮಾನ್ಯ. ಬಾ ಎಂದರೆ ಬಾರದು, ಬರಬೇಡ ಎಂದರೆ ಬಾರದೆ ಇರದು. ಒಂದೇ ನಾಣ್ಯದ ಎರಡು ಮುಖಗಳನ್ನು ನೀಡಿ ಒಂದನ್ನು ಆಯ್ಕೆ ಮಾಡು ಎಂದರೆ ಹೇಗೋ ಹಾಗೆ. ಇಲ್ಲಿ ಯಾವುದೂ ಶಾಶ್ವತವಲ್ಲ. ಹಾಗಾದರೆ ಶಾಶ್ವತವಾದದ್ದು ಯಾವುದು? ಅದೇ ವೈಕುಂಠ. ಭಗವಾನ್ ಮಹಾವಿಷ್ಣುವಿನ ದಿವ್ಯ ಸನ್ನಿಧಿ.

Image

ಯೇಸು ಕ್ರಿಸ್ತರನ್ನು ಕ್ರಿಸ್ ಮಸ್ ಸಮಯದಲ್ಲಿ ನೆನೆಯುತ್ತಾ...

ನಿಮ್ಮ ಶತ್ರುಗಳನ್ನು ಪ್ರೀತಿಸಿ, ನಿಮ್ಮ ನೆರೆಹೊರೆಯವರನ್ನು ಪ್ರೀತಿಸಿ ಎಂದು ಶಾಂತಿಯ ಸಂದೇಶ ನೀಡಿದ ಮತ್ತು ವಿಶ್ವದಲ್ಲೇ ಅತಿಹೆಚ್ಚು ಅಭಿಮಾನಿಗಳನ್ನು, ಬೆಂಬಲಿಗರನ್ನು, ಹಿಂಬಾಲಕರನ್ನು ಹೊಂದಿರುವ ಕ್ರಿಶ್ಚಿಯನ್ ಧರ್ಮದ ಹುಟ್ಟಿಗೆ ಕಾರಣರಾದ ಯೇಸು ಕ್ರಿಸ್ತ ಅನೇಕ ವಿಷಯಗಳಲ್ಲಿ ಇಂದಿಗೂ ಪ್ರಸ್ತುತರಾಗುತ್ತಾರೆ.

Image

ಅಮರ ಚಿತ್ರಕಥೆಯ ಅಂಗುಲಿಮಾಲ ಹಾಗೂ ಏಸುಕ್ರಿಸ್ತ

ನಿಮಗೆ ಅಂಗುಲಿಮಾಲನ  ಬಗೆಗೆ ಗೊತ್ತು , ಅಲ್ಲವೇ? ಅದೇ, ಗೌತಮ ಬುದ್ಧನ ಕತೆಯಲ್ಲಿ ಬರುವವನು .  ಅವನು ದಾರಿಹೋಕರ ಮೇಲೆ ದಾಳಿ ಮಾಡಿ ಅವರನ್ನು ಕೊಲ್ಲುತ್ತಿದ್ದನು, ಅವರ ಹಣವನ್ನು ಲೂಟಿ ಮಾಡುತ್ತಿದ್ದವನು.  ಅವರ ಬೆರಳು (ಅಂಗುಲಿ)ಗಳನ್ನು ಮಾಲೆ ಮಾಡಿ  ಕೊರಳಿಗೆ ಹಾಕಿಕೊಂಡವನು. ಪ್ರಯಾಣಿಕರು ಅವನನ್ನು ನೋಡಿದ ಕೂಡಲೇ ಓಡಿ ಹೋಗುತ್ತಿದ್ದರು. 

ಕವಿ ಮನಸ್ಸಿನ ಅಜಾತಶತ್ರು - ಅಟಲ್ ಬಿಹಾರಿ ವಾಜಪೇಯಿ

ಡಿಸೆಂಬರ್ ೨೫ ಎಂದೊಡನೆ ನಮ್ಮ ಮನಸ್ಸಿಗೆ ಬರುವುದು ಒಂದು ಕ್ರಿಸ್ ಮಸ್ ಹಬ್ಬ ಮತ್ತೊಂದು ಭಾರತ ಕಂಡ ಧೀಮಂತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಹೌದು, ಡಿಸೆಂಬರ್ ೨೫ ವಾಜಪೇಯಿಯವರ ಜನ್ಮದಿನ. ಭಾರತದ ಪ್ರಧಾನಿಯಾಗಿ ಅವರು ಮಾಡಿದ ಕಾರ್ಯಗಳು ಸದಾ ಕಾಲ ನೆನಪಿನಲ್ಲಿ ಉಳಿಯುವಂಥವು. ಅವರನ್ನು ‘ತಪ್ಪು ಪಕ್ಷದಲ್ಲಿರುವ ಉತ್ತಮ ವ್ಯಕ್ತಿ' (Good Man in wrong Party) ಎಂದು ಪ್ರತಿಪಕ್ಷಗಳ ಸದಸ್ಯರು ಸದಾಕಾಲ ಹೇಳುತ್ತಿದ್ದರು.

Image

ಬಾಳಿಗೊಂದು ಚಿಂತನೆ - 20

ನದಿಯನ್ನು ನಾವೆಯ ಮೂಲಕ ದಾಟಿಸಿದ ಅಂಬಿಗನಿಗೆ ನಾವು ಶುಲ್ಕವನ್ನು ಕೊಡುತ್ತೇವೆ. ಅದು ಅವನ ಜೀವನಕ್ಕಾಗಿರುವ ಉದ್ಯೋಗವಾಗಿದೆ. ಇಲ್ಲಿ *ಸದ್ಗುರು*ಎನಿಸಿಕೊಂಡವರು ತಾವು ಭವಸಾಗರವನ್ನು ದಾಟಿದ ಮೇಲೆ, ಮತ್ತೊಬ್ಬರನ್ನು ದಾಟಿಸಲು ಏನನ್ನೂ ಅಪೇಕ್ಷೆ ಪಡಲಾರರು.*ಪರೋಪಕಾರಾಯ ಬಲಂ ಮನಃ*ಎಂಬಂತೆ ಅವರ ಉದ್ದೇಶ ಪರೋಪಕಾರ ಮಾತ್ರ.

Image

‘ನಿಂದನೆ’ ಬದಲಾಗಿ ‘ಸ್ಪಂದನೆ’ ಇರಲಿ

ಒಮ್ಮೆ ಒಬ್ಬಾತ ಮೂರು ದಿನಗಳ ಕಾಲ ಕಷ್ಟಪಟ್ಟು ಒಂದು ಅದ್ಭುತವಾದ ಚಿತ್ರಕಲೆಯನ್ನು ರಚಿಸಿದ. ಆ ಚಿತ್ರಕಲೆ ಹೇಗಿದೆ ಎಂದು ಜನಗಳ ಅಭಿಪ್ರಾಯ ತಿಳಿಯಬೇಕೆಂದು ಆಸೆಪಟ್ಟ.  ನಾಲ್ಕು ರಸ್ತೆ ಸೇರುವ ವೃತ್ತದಲ್ಲಿ ಅದನ್ನು ಪ್ರದರ್ಶನ ಮಾಡಿದ. ಅದರ ಕೆಳಗೆ ಹೀಗೊಂದು ಸಾಲನ್ನು ಬರೆದಿದ್ದ "ನಾನು ಮೊದಲ ಬಾರಿ ಬರೆದ ಚಿತ್ರಕಲೆ ಇದು. ಇದರಲ್ಲಿ  ಲೋಪಗಳು ನಿಮಗೆ ಕಾಣಿಸಬಹುದು.

Image

ನಮ್ಮ ಹೆಮ್ಮೆಯ ಭಾರತ (ಭಾಗ 39 - 40)

೩೯.ಜಗತ್ತಿನ ಆಹಾರ ಮತ್ತು ತರಕಾರಿ ವಹಿವಾಟಿನಲ್ಲಿ ಭಾರತದ ಪ್ರಧಾನ ಪಾತ್ರ
ಭಾರತದಲ್ಲಿ ವಿಭಿನ್ನ ಭೌಗೋಳಿಕ ಮತ್ತು ಹವಾಮಾನ ವಲಯಗಳು ಇರುವ ಕಾರಣ ಇಲ್ಲಿ ಉತ್ಪಾದನೆಯಾಗುವ ಹಣ್ಣು ಮತ್ತು ತರಕಾರಿಗಳ ವೈವಿಧ್ಯತೆ ಬೆರಗು ಹುಟ್ಟುಸುತ್ತದೆ. ಹಣ್ಣು ಉತ್ಪಾದನೆಯಲ್ಲಿ ಭಾರತಕ್ಕೆ ಜಗತ್ತಿನಲ್ಲೇ ಪ್ರಥಮ ಸ್ಥಾನ - ಜಗತ್ತಿನ ಒಟ್ಟು ಹಣ್ಣು ಉತ್ಪಾದನೆಯಲ್ಲಿ ಭಾರತದ ಪಾಲು ಶೇ.೮.

ತರಕಾರಿ ಉತ್ಪಾದನೆಯಲ್ಲಿ ಭಾರತಕ್ಕೆ ಜಗತ್ತಿನಲ್ಲಿ ಚೀನಾದ ನಂತರ ಎರಡನೇ ಸ್ಥಾನ - ಜಗತ್ತಿನ ಒಟ್ಟು ಉತ್ಪಾದನೆಯಲ್ಲಿ ಭಾರತದ ಪಾಲು ಶೇಕಡಾ ೧೫.

Image

ಭೂಮಿಯ ಒಳಗೆ, 2000 ಅಡಿಗಳ ಕೆಳಗೆ..!

ನಾನು ಈಗಾಗಲೇ ಬಸ್ಸಿನಲ್ಲಿ, ವಿಮಾನದಲ್ಲಿ, ಹಡಗಿನಲ್ಲಿ, ಎತ್ತು ಕುದುರೆ ಗಾಡಿಯಲ್ಲಿ, ರೈಲಿನಲ್ಲಿ, ಕಾಲ್ನಡಿಗೆಯಲ್ಲಿ, ಸಮುದ್ರದ ಒಳಗಿನ ಯುರೋ ರೈಲಿನಲ್ಲಿ  ಪ್ರಯಾಣ ಮಾಡಿದ್ದೇನೆ. ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯಲ್ಲಿ ಇದೇ ಮೊದಲ ಬಾರಿಗೆ ಭೂಮಿಯ ಒಳಗೆ 2000 ಅಡಿಗಳ ಕೆಳಕ್ಕೆ ಇಳಿದೆ. ಭಯ ಆತಂಕದ ನಡುವೆ ಒಂದು ರೋಚಕ ಅನುಭವ ದೊರೆಯಿತು.

Image