ಕೊರೊನಾ ವೈರಸ್: ಕೆಟ್ಟ ಚಟ ತೊಲಗಿಸಿತೇ?

ಚೀನಾದ ವುಹಾನ್ ಪ್ರಾಂತ್ಯದಲ್ಲಿ ಹುಟ್ಟಿದ ಕೊರೊನಾ ವೈರಸ್ (ಕೊವಿಡ್ ೧೯) ೨೦೨೦ರ ವರುಷದುದ್ದಕ್ಕೂ ಜಗತ್ತಿನಲ್ಲೆಲ್ಲ ಧಾಳಿ ಮಾಡಿದೆ. ಅಮೇರಿಕಾ, ಇಟಲಿ, ಇರಾನ್, ಸ್ಪೇಯ್ನ್ ದೇಶಗಳು ಇದರ ಧಾಳಿಗೆ ತತ್ತರಿಸಿವೆ. ಈ ರಕ್ತಬೀಜಾಸುರ ವೈರಸಿನಿಂದ ಸೋಂಕಿತರ ಸಂಖ್ಯೆ ಭಾರತದಲ್ಲಿ ಒಂದು ಕೋಟಿ ದಾಟಿದೆ (೧೯-೧೨-೨೦೨೦ರಂದು). ಇದಕ್ಕೆ ಬಲಿಯಾದವರ ಸಂಖ್ಯೆ ಇವತ್ತು ೧,೪೮,೦೦೦ ಮೀರಿದೆ.

ಕೊರೊನಾ ವೈರಸ್ ಹುಟ್ಟಿಸಿದ ಭಯ, ಇದರಿಂದಾಗಿರುವ ಅನಾಹುತ, ವಿವಿಧ ದೇಶಗಳ ಆರ್ಥಿಕತೆಗೆ ಬಿದ್ದಿರುವ ಹೊಡೆತ ಇವೆಲ್ಲ ರಂಪಗಳ ನಡುವೆ ಇದರಿಂದಾಗಿ ಕೆಲವು ಕೆಟ್ಟ ಚಟಗಳನ್ನು ಹಲವರು ಬಿಟ್ಟಿರುವುದನ್ನೂ ೨೦೨೦ನೇ ವರುಷಕ್ಕೆ ವಿದಾಯ ಹೇಳುವ ಈ ಸಮಯದಲ್ಲಿ ಗಮನಿಸೋಣ.

Image

ಮುಲ್ಲಘ್ ಮೆಡಲ್ ಎಂದರೇನು?

ಭಾರತ - ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವೆ ಬಾರ್ಡರ್ - ಗಾವಸ್ಕರ್ ಟ್ರೋಫಿಗಾಗಿ ನಡೆಯುತ್ತಿರುವ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಎರಡು ಪಂದ್ಯಗಳು ಈಗಾಗಲೇ ನಡೆದು ಇತ್ತಂಡಗಳೂ ೧-೧ ಸಮಬಲದಲ್ಲಿವೆ. ಮೊದಲ ಪಂದ್ಯವನ್ನು ಹೀನಾಯವಾಗಿ ಸೋತ ಬಳಿಕ ಭಾರತ ‘ಬಾಕ್ಸಿಂಗ್ ಡೇ’ ಪಂದ್ಯದಲ್ಲಿ ಉತ್ತಮವಾಗಿ ಆಟವಾಡಿ ವಿಜಯದ ಮಾಲೆ ಧರಿಸಿದೆ.

Image

ವಿಶ್ವ ಮಾನವ ದಿನದಂದು ರಾಷ್ಟ್ರಕವಿ ಕುವೆಂಪು ನೆನಪು

ಡಿಸೆಂಬರ್ ೨೯ ರಾಷ್ಟ್ರ ಕವಿ ಕುವೆಂಪು ಅವರ ಜನ್ಮದಿನ. ಈ ದಿನವನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸುತ್ತಾರೆ. ಕನ್ನಡ ಭಾಷೆ, ನುಡಿಗಳಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದವರು ಕುವೆಂಪು. ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಎಂಬ ನಾಮಧೇಯದ ವ್ಯಕ್ತಿ ಕುವೆಂಪು ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದುದು ಬಹುತೇಕರಿಗೆ ತಿಳಿದಿರುವಂತದ್ದೇ.

Image

ಆದರ್ಶ ಮತ್ತು ವಾಸ್ತವ...

ಪ್ರಾಥಮಿಕ  ಶಾಲೆಯಲ್ಲಿ ಶಿಕ್ಷಣ ಗುಣಮಟ್ಟದ ಪರೀಕ್ಷೆ ಮಾಡುವ ತನಿಖಾಧಿಕಾರಿಗಳು ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡುತ್ತಾರೆ. ನೀವು ದೊಡ್ಡವರಾದ ಮೇಲೆ ಏನಾಗಲು ಇಷ್ಟ ಪಡುತ್ತೀರ ?

Image

ವಿಶ್ವ ಮಾನವನಿಗೊಂದು ನಮನ

ಎಲ್ಲಾದರೂ ಇರು ; ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು : ಕನ್ನಡವೇ ಸತ್ಯ; ಕನ್ನಡವೇ ನಿತ್ಯ, ಎನ್ನುವ ಕನ್ನಡದೊಲುಮೆಯ ಕಂದ, ಸರ್ವಮಾನ್ಯರಾದ ಶ್ರೀ ಕುವೆಂಪುರವರ ಜನುಮ ದಿನವಿಂದು. ಜಗದಕವಿ, ಯುಗದಕವಿ, ನಮ್ಮೊಲವಿನ ಕವಿ, ಹೇಳಲು ಪದಗಳಾದರೂ ಇದೆಯೇ? ಖಂಡಿತಾ ಇಲ್ಲ.

Image