ಭಾವ-ಸಮರ
ಅಂಜದಿರು ಮನವೇ ನೀ ಯೋಚನೆಗಳ ಸಮರಕ್ಕೆ
ವಜ್ರಕವಚವ ತೊಟ್ಟುಬಿಡು ನೀ ಭಾವನೆಗಳ ಹೊಡೆತಕ್ಕೆ
ನಿಸ್ವಾರ್ಥಿ ನೀನೆಂಬ ಹುಂಬತನ ನಿನಗೇಕೆ
ನಾವು ನಮ್ಮವರೆಂಬುದು ಅವರವರ ಸ್ವಾರ್ಥಕ್ಕೆ
ಅಂದು ಮಾತುಗಳ ರಭಸಕ್ಕೆ ಮನದಲ್ಲಿ ಕಂಪನ
ಇಂದು ನೂರು ಮಾತಿದ್ದರೂ ಆವರಿಸಿದೆ ಮೌನ
ಅಂದು ಸಂತಸದಿ ಮನದೊಳಗೆ ಮೂಡಿದ ಚಿತ್ರ
ಇಂದು ಬಿರುಗಾಳಿಗೆ ಸಿಕ್ಕಿ ಕಣ್ಣ ಕುಕ್ಕಿದೆ ಎಂಥ ವಿಚಿತ್ರ
- Read more about ಭಾವ-ಸಮರ
- Log in or register to post comments