ಮತ್ತೊಂದು ಕನ್ನಡಿಸಿದ ಹಾಡು - ಚಲತೆ ಚಲತೇ - ಪಾಕೀಜಾ ಚಿತ್ರದಿಂದ
ಈ ಹಿಂದಿ ಹಾಡು ನೀವು ಕೇಳಿರಬಹುದು . ತುಂಬ ಪ್ರಸಿದ್ಧ ವಾದದ್ದು. ಯೂಟ್ಯೂಬ್ ನಲ್ಲಿ ಸಿಗುತ್ತದೆ.
ಅದರ ಅನುವಾದವನ್ನುಅದೇ ಧಾಟಿಗೆ ಹೊಂದುವಂತೆ ಮಾಡಿದ್ದೇನೆ. ಹಾಡಲು ಯತ್ನಿಸಿ ಆನಂದಿಸಿ.
ನಡೀತ ನಡೀತ ಅವನು ಸಿಕ್ಕಿ ಬಿಟ್ಟ
ನಡು ಹಾದಿಯಲ್ಲಿ ನನಗೆ
ಅಲ್ಲೇ ತಾನು ನಿಂತು ಬಿಟ್ತು
ನನ್ನ ರಾತ್ರಿ ಅಳೆದೂ ಸುರಿದೂ
ನಾ ಏನ ಹೇಳದಾದೆ
ಅದ ಜಗವೆ ಹೇಳುತಿಹುದು
ಕತೆಯಾಗಿ ಹೋಯಿತಂತೆ
ನನ ಮಾತು ಹಬ್ಬಿ ಹರಡಿ
ಅಗಲಿಕೆಯ ಈ ದೀರ್ಘ ರಾತ್ರಿ
ಆದೀತು ಎಂದು ಕಿರಿದು
ಈ ದೀಪ ಆರುತಿಹುದು
ನನ್ನೊಡನೆ ಉರಿದು ಉರಿದು
- Read more about ಮತ್ತೊಂದು ಕನ್ನಡಿಸಿದ ಹಾಡು - ಚಲತೆ ಚಲತೇ - ಪಾಕೀಜಾ ಚಿತ್ರದಿಂದ
- Log in or register to post comments