ವ್ಯವಸ್ಥೆಯೆಂಬ ಅವ್ಯವಸ್ಥೆ

ಪುಸ್ತಕದ ಲೇಖಕ/ಕವಿಯ ಹೆಸರು
ಶ್ರೀರಾಮ ದಿವಾಣ
ಪ್ರಕಾಶಕರು
ಅಂಬಾರಿ ಪ್ರಕಾಶನ, ಕುವೆಂಪುನಗರ, ಮೈಸೂರು -೫೭೦ ೦೨೩
ಪುಸ್ತಕದ ಬೆಲೆ
ರೂ.೧೯೦.೦೦, ಮುದ್ರಣ : ೨೦೧೭

ಪತ್ರಕರ್ತ, ಸಂಘಟಕ ಶ್ರೀರಾಮ ದಿವಾಣರದ್ದು ಬಹುಮುಖ ಪ್ರತಿಭೆ. ಅವರೊಬ್ಬ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ. ‘ವ್ಯವಸ್ಥೆಯೆಂಬ ಅವ್ಯವಸ್ಥೆ' ಇದು ಶ್ರೀರಾಮ ದಿವಾಣರ ಎರಡನೇ ಪ್ರಕಟಿತ ಲೇಖನಗಳ ಸಂಕಲನ. ಈಗಾಗಲೇ ೩೧ ಆಯ್ದ ಲೇಖನಗಳನ್ನು ‘ಕೃಷ್ಣಾರ್ಪಣ!’ ಎಂಬ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ.

ಝೆನ್ ಪ್ರಸಂಗ: ಅಂತಿಮ ಅವಕಾಶ: ಮೂರೇ ದಿನ

ಗುರು ಸ್ವಿವೋ ಅವರ ಗುರುಕುಲಕ್ಕೆ ಜಪಾನಿನ ದಕ್ಷಿಣ ದ್ವೀಪದಿಂದ ವಿದ್ಯಾರ್ಥಿಯೊಬ್ಬ ಬಂದ - ಝೆನ್ ತತ್ವಗಳ ಅಧ್ಯಯನಕ್ಕಾಗಿ.

ಆ ವಿದ್ಯಾರ್ಥಿಗೆ ಅಧ್ಯಯನದ ಅಂಗವಾಗಿ ಗುರು ಸ್ವಿವೋ ಈ ಅಧ್ಯಾತ್ಮಿಕ ಒಗಟನ್ನು ನೀಡಿದ: “ಒಂದೇ ಕೈಯ ಚಪ್ಪಾಳೆ ಸದ್ದನ್ನು ಕೇಳು.”

ಅದಾಗಿ ಮೂರು ವರುಷಗಳು ದಾಟಿದವು. ಆದರೆ “ಒಂದೇ ಕೈಯ ಚಪ್ಪಾಳೆ ಸದ್ದಿ"ನ ಅಧ್ಯಯನದ ಪರೀಕ್ಷೆಯಲ್ಲಿ ಆ ವಿದ್ಯಾರ್ಥಿ ಉತ್ತೀರ್ಣನಾಗಲಿಲ್ಲ. ಹತಾಶನಾದ ಆತ ಒಂದು ದಿನ ಗುರುಗಳ ಬಳಿ ಬಂದು ಹೇಳಿದ, "ಜ್ನಾನ ಗಳಿಸದವನಾಗಿ ನಮ್ಮಊರಿಗೆ ಹಿಂತಿರುಗಬೇಕಾದ ಅವಮಾನ ನನ್ನ ಪಾಲಿಗೆ ಕಾದಿದೆ. ನಿಮ್ಮ ಒಗಟನ್ನು ಬಿಡಿಸುವುದು ಹೇಗೆಂದು ನನಗೆ ತಿಳಿಯುತ್ತಿಲ್ಲ.”

Image

ಲಲಿತಾಂಬಿಕಾ ದೇವಸ್ಥಾನ

ತಮಿಳುನಾಡು ರಾಜ್ಯದ ತಿರುವನೂರು ಜಿಲ್ಲೆಯ ತಿರುಮೇಯಚೂರು ಎಂಬ ಊರಿನಲ್ಲಿರುವ ಈ ಲಲಿತಾಂಬಿಕಾ ದೇಗುಲವನ್ನು ಲಲಿತಾಂಬಿಗೈ ದೇವಸ್ಥಾನವೆಂದೂ ಕರೆಯುತ್ತಾರೆ. ಇದರ ವಿಶೇಷತೆಯೆಂದರೆ ಈ ಚಿತ್ರದಲ್ಲಿರುವ ಶಿಲ್ಪ. ಇದೊಂದು ಅಪರೂಪದ ಶಿಲ್ಪ ಕಲೆಗೆ ಸಾಕ್ಷಿ ಎನ್ನಬಹುದು. 

Image

ಒಂದು ನ್ಯಾನೋ ಕಥೆ- ಆತ

ಆತ ಭಾವಜೀವಿ. ಆತನಿಗೆ ಹೆಣ್ಣು ಮಕ್ಕಳೆಂದರೆ ಪ್ರಾಣ, ಆದರೆ ದೇವರು ಆತನಿಗೆ ಬರೀ ಗಂಡು ಮಕ್ಕಳನ್ನೇ ದಯಪಾಲಿಸಿ ಮೋಸ ಮಾಡಿ ಬಿಟ್ಟ!  ಆ ಮಕ್ಕಳನ್ನೇ ತನ್ನ ಯೋಗ್ಯತೆಗೆ ತಕ್ಕಂತೆ ಪ್ರೀತಿಯಿಂದ ಬೆಳೆಸಿದ. ಅವರು

Image

ತುಂಟ ಟೆಡ್ಡಿ ಕರಡಿಗಳು

ಬಿರು ಬೇಸಗೆಯ ಒಂದು ದಿನ ರಾಮು ಮತ್ತು ಶಾಮುಗೆ ಅವರ ಹೆತ್ತವರು ಸಮುದ್ರ ತೀರಕ್ಕೆ ಹೋಗಲು ಬೇಗ ತಯಾರಾಗ ಬೇಕೆಂದು ಹೇಳಿದರು.

"ನಾವು ನಮ್ಮ ಟೆಡ್ಡಿ ಕರಡಿಗಳನ್ನು ಒಯ್ಯಬಹುದೇ?” ಕೇಳಿದ ರಾಮು. “ನೀವು ಅವುಗಳ ಮೇಲೆ ಕಣ್ಣಿಡುತ್ತೀರಿ ಎಂದಾದರೆ ಮಾತ್ರ ಒಯ್ಯಬಹುದು" ಎಂದರು ಅಪ್ಪ. “ಯಾಕೆಂದರೆ, ನೀವೇನಾದರೂ ಅವನ್ನು ಕಳೆದುಕೊಂಡರೆ, ಸಂಜೆಯ ವರೆಗೆ ಹುಡುಕುತ್ತಾ ಇರಲು ನಮ್ಮಿಂದ ಸಾಧ್ಯವಿಲ್ಲ” ಎಂದು ಅವರು ವಿವರಿಸಿದರು.

Image

ಪಾರಿವಾಳಗಳು (ಲಲಿತ ಪ್ರಬಂಧಗಳು)

ಪುಸ್ತಕದ ಲೇಖಕ/ಕವಿಯ ಹೆಸರು
ವಿಠಲ್ ಶೆಣೈ
ಪ್ರಕಾಶಕರು
ಸ್ವ-ಪ್ರಕಾಶನ, ಮಲ್ಲೇಶಪಾಳ್ಯ, ಬೆಂಗಳೂರು- ೫೬೦ ೦೭೫
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ: ೨೦೧೮

‘ಪಾರಿವಾಳಗಳು’ ಎಂಬ ಲಲಿತ ಪ್ರಬಂಧಗಳನ್ನು ಒಳಗೊಂಡಿರುವ ಪುಸ್ತಕವನ್ನು ಕೈಯಲ್ಲಿ ಓದಲು ಹಿಡಿದುಕೊಂಡಾಗ ನನಗೆ ಅದರ ಕಥಾ ವಸ್ತುವಿನ ಮೇಲೆ ಬಹಳವೇನೂ ಅಪೇಕ್ಷೆಯಿರಲಿಲ್ಲ. ಆದರೆ ಸ್ವಲ್ಪ ಕುತೂಹಲ ಖಂಡಿತಾ ಇತ್ತು. ಇದು ಲೇಖಕರಾದ ವಿಠಲ್ ಶೆಣೈ ಅವರ ಮೊದಲ ಪ್ರಕಟಿತ ಪುಸ್ತಕ.