ಸುಪ್ರಭಾತ
1 day ago- Shreerama Diwanaಭಾರತೀಯ ಸಮಾಜ ಎಂಬುದು ಮಧ್ಯಮ ವರ್ಗದ ಸಂತೆ ಇದ್ದಂತೆ. ಇಲ್ಲಿ ಬಹುತೇಕ ಮಧ್ಯಮ ವರ್ಗದವರೇ ಅತಿ ಹೆಚ್ಚು ಮಧ್ಯಮ ಮಾರ್ಗದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆರ್ಥಿಕವಾಗಿ ಒಂದಷ್ಟು ಸಣ್ಣಪುಟ್ಟ ವ್ಯತ್ಯಾಸಗಳಿರಬಹುದು. ಕೆಲವೊಮ್ಮೆ ಶ್ರೀಮಂತಿಕೆ ಹೆಚ್ಚಾಗಬಹುದು, ಕೆಲವೊಮ್ಮೆ ಬಡತನವೂ ಹೆಚ್ಚಾಗಬಹುದು. ಮತ್ತೆ ಕೆಲವೊಮ್ಮೆ ಸಾಲಗಾರರು ಆಗಬಹುದು. ಆದರೆ ಅವರ ಮನಸ್ಥಿತಿಗಳಲ್ಲಿ ಮಾತ್ರ ಬಹುತೇಕ ಸಾಮ್ಯತೆ ಇರುತ್ತದೆ.
ಎಲ್ಲರೂ ಸಾಮಾನ್ಯವಾಗಿ ಒಂದೇ ರೀತಿಯಲ್ಲಿ ಯೋಚಿಸುತ್ತಾರೆ. ಅತ್ಯಂತ ಶ್ರೀಮಂತರು, ತೀರಾ ಕಡು ಬಡವರು ಮಾತ್ರ ತಮ್ಮ ಆಲೋಚನೆಯಲ್ಲಿ ಭಿನ್ನತೆಯನ್ನು ಹೊಂದಿರುತ್ತಾರೆ. ವಠಾರ ಸಂಸ್ಕೃತಿಯೇ ಇರಲಿ ಅಥವಾ ಅಪಾರ್ಟ್ಮೆಂಟ್ ಸಂಸ್ಕೃತಿಯೇ ಇರಲಿ ಮನಸ್ಥಿತಿ ಮಾತ್ರ ಅದೇ ಸಂಸ್ಕೃತಿಯಾಗಿರುತ್ತದೆ. ವಿದ್ಯಾಭ್ಯಾಸ ಅಥವಾ ಅಕ್ಷರಸ್ಥರ ಸಂಖ್ಯೆ ಹೆಣ್ಣು ಗಂಡ… ಮುಂದೆ ಓದಿ...