ಕನ್ನಡ ಬೋಧನೆ ಸ್ವಾಗತಾರ್ಹ
1 day 2 hours ago - Ashwin Rao K Pಬಿ ಇ, ಬಿಟೆಕ್ ನಂತಹ ತಾಂತ್ರಿಕ ಕೋರ್ಸ್ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಅವರದ್ದೇ ಮಾತೃಭಾಷೆ ಇಲ್ಲವೇ ಪ್ರಾದೇಶಿಕ ಭಾಷೆಯಲ್ಲಿ ಬೋಧನೆ (ಸಂವಹನ) ಮಾಡಿ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿ ಇ) ಕಾಲೇಜುಗಳಿಗೆ ಮಹತ್ವದ ಸೂಚನೆ ನೀಡಿದೆ. ಮಾತೃಭಾಷೆಯಲ್ಲೆ ಬೋಧನೆ, ಕಲಿಕೆ ವಿಧಾನ ಮತ್ತು ಬೋಧನಾ ವಸ್ತುಗಳನ್ನು ರೂಪಿಸುವುದರಿಂದ ಶಿಕ್ಷಣದಲ್ಲಿ ಕ್ರಾಂತಿಕಾರಕ ಬದಲಾವಣೆ ತರಬಹುದು ಎಂದೂ ಪರಿಷತ್ ಹೇಳಿದೆ. ತಾಯ್ನುಡಿಯಲ್ಲಿ ಶಿಕ್ಷಣ ಪಡೇಯುವ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚುತ್ತದೆ ಎನ್ನುವುದನ್ನು ತಜ್ಞರ ಅನೇಕ ವರದಿಗಳು ಸಾಕ್ಷಿ ಸಮೇತ ಸಾಬೀತು ಪಡಿಸಿವೆ. ಈ ದಿಸೆಯಲ್ಲಿ ಎ ಐ ಸಿ ಟಿ ಇ ಯ ಈ ಸೂಚನೆ ತುಂಬ ಅರ್ಥಪೂರ್ಣ.
ಕಲಿಕೆ ಶಿಕ್ಷೆಯಾಗಬಾರದು. ನಲಿ-ಕಲಿ ಎನ್ನುವುದು ಯುಕ್ತವಾದ ಮಾತು. ಖುಷಿಯೊಂದಿಗೆ ಕಲಿತ ಮಕ್ಕಳು ಹೊಸತನ್ನು ಸೃಷ್ಟಿಸಬಲ್ಲರು. ಕಲಿಕೆಯ ಜತೆ ಖುಷಿ ಮೇಳೈಸಬೇಕೆಂದರೆ ಯುಕ್ತ ಬೋಧನಾ ಮಾಧ್ಯಮವೇ ಮಾರ್ಗ. ಶಿಕ್ಷಕರು ಕಲಿಸುವ ಪಾಠ ಸುಲಭವಾಗಿ ಅರ್ಥವಾದರೆ ಮಾತ್ರ ವಿದ್ಯಾರ್ಥಿಗಳಲ್ಲಿ ಕಲಿಕೆಯ ಖುಷಿ ಮೂಡಲು ಸಾಧ್ಯ. ಅಂಥ ಸುಲಭ ಗ್ರಹಿಕೆ ಸಾಧ್ಯವಾಗುವುದು ಮಾತೃಭಾಷೆ ಒಂದರಿಂದಲೇ ಎನ್ನುವುದು ಸ್ಪಷ್ಟ. ಕನ್ನಡ ಸೇರಿದಂತೆ ಅನೇಕ ಪ್ರಾದೇಶಿಕ ಭಾಷೆಗಳು ತುಂಬ ಸಂಪನ್ನವಾಗಿವೆ. ವಿಜ್ಞಾನ, ತಂತ್ರಜ್ಞಾನವನ್ನೂ ಸರಳವಾಗಿ ಹೇಳಿಕೊಡುವಷ್ಟು ಸಮೃದ್ಧಿ ಇವುಗಳಲ್ಲಿದೆ. ಭಾಷೆಯ ಈ ಸಾಮರ್ಥ್ಯ ಬಳಸಿಕೊಳ್ಳುವುದರಲ್ಲಿ ಸಾರ್ಥಕತೆ ಇರಲಿ. ಕೀಳಿರಿಮೆ ಬೇಕಿಲ್ಲ. ತಂತ್ರಜ್ಞಾನವನ್ನು ಇಂಗ್ಲಿಷ್ ನಲ್ಲಿ ಕಲಿಸಿದರೆ ಮಾತ್ರ ಪರಿಪೂರ್ಣ ಎನ್ನುವುದು ತಪ್ಪು ಗ್ರಹಿಕೆ. ಅಕ್ಷರದ ಜ್ಞಾನವೇ ಇರದ ವ್ಯಕ್ತಿಯೊಬ್ಬ ಮೋಟಾರ್ ಸೈಕಲ್, ಮೋಟಾರ್ ವಾಹನಗಳ ಸಂಕೀರ್ಣ ಯಂತ್ರಗಳನ್ನು ಬಿಚ್ಚಿ ಸುಲಲಿತವಾಗ… ಮುಂದೆ ಓದಿ...