ಮಣ್ಣಿನಿಂದ ಮರಳು ತೆಗೆದು ಮಾರುವುದೇ? ಹೌದು, ಬೆಂಗಳೂರಿನ ಆಸುಪಾಸಿನಲ್ಲಿ ಬಿರುಸಿನಿಂದ ನಡೆಯುತ್ತಿದೆ, ಈ ದಂಧೆ.
ಮಣ್ಣು ಅಗೆದು, ತೊಳೆದು, ಜರಡಿ ಹಿಡಿದಾಗ ಸಿಗುವ ಮರಳನ್ನು ಲಾರಿಗಳಲ್ಲಿ ಬೆಂಗಳೂರಿಗೆ ಸಾಗಿಸಿ ಮಾರುತ್ತಿದ್ದಾರೆ ರೈತರು. ಕೃಷಿಯಲ್ಲಿ ಬರುವ ಲಾಭಕ್ಕಿಂತ ಅಧಿಕ ಲಾಭ ಈ ದಂಧೆಯಲ್ಲಿದೆ. ಬೆಂಗಳೂರಿನಲ್ಲಂತೂ ಮರಳಿಗೆ(ಹೊಯಿಗೆ) ಭಾರೀ ಬೇಡಿಕೆ. ಅಲ್ಲಿಯ ಕಟ್ಟಡ ಹಾಗೂ ಕಾಂಕ್ರೀಟ್ ರಸ್ತೆ, ಫ್ಲೈ ಓವರುಗಳ ನಿರ್ಮಾಣ ಕಾಮಗಾರಿಗಳಿಗೆ ನದಿ ತಳದಿಂದ ಲಾರಿಗಳಲ್ಲಿ ತರುವ ಮರಳು ಏನೂ ಸಾಲದು. ಹಾಗಾಗಿ ಮಣ್ಣಿನಿಂದ ತೊಳೆದು ಬೇರ್ಪಡಿಸಿದ ಮರಳಿಗೆ ಭಾರೀ ಬೇಡಿಕೆ.
ಕಳೆದ ಕೆಲವು ವರುಷಗಳಲ್ಲಿ ಜೋರಾಗಿ ಬೆಳೆದಿದೆ ಈ ವ್ಯವಹಾರ. ಕೃಷಿ ಜಮೀನಿನಿಂದ, ಕೆರೆಗಳ ತಳದಿಂದ ಮತ್ತು ಗೋಮಾಳ ಇತ್ಯಾದಿ ಸಮುದಾಯ ಜಾಗದಿಂದ ಮೇಲ್ಮಣ್ಣು ಅಗೆದು, ನೀರಿನಿಂದ ತೊಳೆದು, ಜರಡಿಯಿಂದ ಜಾಲಿಸಿ ಮರಳು ತೆಗೆಯುತ್ತಿದ್ದಾರೆ ರೈತರು. ಬೆಂಗಳೂರಿನ ದಿನದಿನದ ಒಟ್ಟು ಬೇಡಿಕೆಯ ಮರಳಿನಲ್ಲಿ ಶೇಕಡಾ 75 ನದಿತಳದಿಂದ ಸರಬರಾಜು, ಉಳಿದ ಶೇಕಡಾ 25 ಮಣ್ಣಿನಿಂದ ಬೇರ್ಪಡಿಸಿದ ಮರಳಿನ ಸರಬರಾಜು. ಪ್ರತಿ ದಿನ ಮಹಾನಗರ ಬೆಂಗಳೂರಿನ ಕಾಮಗಾರಿಗಳಿಗೆ ಸರಬರಾಜಾಗುವ ಮಣ್ಣಿನಿಂದ ತೆಗೆದ ಮರಳಿನ ಪರಿಮಾಣ 4,000 ಟ್ರಕ್ ಲೋಡುಗಳು.
ರೈತರಿಗೆ ತಕ್ಷಣದಲ್ಲಿ ಇದರಿಂದಾಗಿ ಮಣ್ಣಿನ ಉತ್ಪಾದಕತೆಯಲ್ಲಿ ಶೇಕಡಾ 10ರಿಂದ 50 ನಷ್ಟ. ಅಂದರೆ ಹೀಗೆ ಮರಳು ತೆಗೆದ ಜಮೀನಿನಲ್ಲಿ ಮುಂದಿನ ವರುಷಗಳಲ್ಲಿ ಬೆಳೆ ಬೆಳೆಸಿದಾಗ ಇಷ್ಟರ ಮಟ್ಟಿಗೆ ಇಳುವರಿ ಕುಸಿತ. ಮಣ್ಣು ಸುಧಾರಣೆಯಾಗಿ, ಮುಂಚಿನ ಪ್ರಮಾಣದಲ್ಲಿ ಇಳುವರಿ ಸಿಗಲು 8ರಿಂದ 10 ವರುಷ ತಗಲುತ್ತದೆ. ಇದು ವೈಜ್ನಾನಿಕ ಅಧ್ಯಯನವೊಂದರ ಸಾರಾಂಶ. ಬೆಂಗಳೂರಿನ ನ್ಯಾಷನಲ್ ಬ್ಯುರೋ ಆಫ್ ಸಾಯಿಲ್ ಸರ್ವೆ ಆಂಡ್ ಲ್ಯಾಂಡ್ ಯೂ…
ಮುಂದೆ ಓದಿ...