July 2018

July 15, 2018
ಬರಹ: addoor
ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು ಗುರುತಿಸೊಳಿತಿರುವುದನು ಕೇಡುಗಳ ನಡುವೆ ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು ಹರುಷಕದೆ ದಾರಿಯೆಲೊ – ಮಂಕುತಿಮ್ಮ ಕೆಲವರದು ಬದುಕಿನಲ್ಲಿ ಭಾರೀ ಲೆಕ್ಕಾಚಾರ – ತಮ್ಮ ಕೈಗೆ ಬಾರದಿರುವುದರ…
July 15, 2018
ಬರಹ: vishu7334
IMDb:  http://www.imdb.com/title/tt0096548/?ref_=nv_sr_1   ಈ ಬಾರಿ ಒಂದು ಚಲನಚಿತ್ರದ ಬದಲಿಗೆ ಟಿವಿ ಸೀರಯಲ್ ಬಗ್ಗೆ ಬರೆಯುತ್ತಿದ್ದೇನೆ. ನನ್ನ ಬ್ಲಾಗ್ ಅನ್ನು ಚಲನಚಿತ್ರಗಳಿಗೆ ಮಾತ್ರ ಸೀಮಿತಗೊಳಿಸಬೇಕು ಎಂದುಕೊಂಡಿದ್ದೆನಾದರೂ…
July 15, 2018
ಬರಹ: kavinagaraj
    ಒಬ್ಬ ಸಣಕಲ ವ್ಯಕ್ತಿ ಧಡೂತಿ ಪೈಲ್ವಾನನನ್ನು ಕುರಿತು, "ಈ ಸಲ ನಿನ್ನನ್ನು ಸುಮ್ಮನೆ ಬಿಟ್ಟಿದ್ದೇನೆ. ಮತ್ತೊಮ್ಮೆ ನನ್ನ ತಂಟೆಗೆ ಬಂದರೆ ಹುಷಾರ್" ಎಂದರೆ ಪೈಲ್ವಾನ ನಕ್ಕು ಸುಮ್ಮನಿರುತ್ತಾನೆ ಎಂದಿಟ್ಟುಕೊಳ್ಳಿ. ಈಗ ಅಹಿಂಸಾ ತತ್ವವನ್ನು…
July 14, 2018
ಬರಹ: Anantha Ramesh
                       (ಗಝಲ್)  ನೀನು ಏಳುವ ಮುನ್ನವೇ ಎದ್ದು ಸದ್ದಿಲ್ಲದೆಕಾಫ಼ಿ ಗುಟುಕರಿಸಿ ನಿನಗೂ ತಂದಿದ್ದೇನೆ ಏತಕೀ ಮುನಿಸು  ಕೈದೋಟದಿಂದ ಅರಳಿದ ಹೂಗಳ ತಂದುಪೂಜೆಗಲ್ಲದೆ ನಿನ್ನ ಮುಡಿಗೂ ಮಿಗಿಸಿದ್ದೇನೆ ಏತಕೀ ಮುನಿಸು  ಹರಡಿ…
July 12, 2018
ಬರಹ: kavinagaraj
ಸತ್ಯಾಸತ್ಯವಿರಲಿಲ್ಲ ಶೂನ್ಯ ತಾ ಮೊದಲು ಇರಲಿಲ್ಲವಂತೆ ಲೋಕವೆಲ್ಲಿಯದಂತೆ ಆಗಸವು ಮೇಲೆ ಇರಲಿಲ್ಲವಂತೆ | ಇದ್ದಂತಹುದೇನೋ ಗಹನ ಗಂಭೀರ ವಿಸ್ಮಯವದಂತೆ ಆರ ಆಶ್ರಯದಲಿತ್ತೋ ಅರಿತವರಿಹರೆ ಮೂಢ || 
July 12, 2018
ಬರಹ: Harish Athreya
ಮಕ್ಕಳ ಕುತೂಹಲದ ಮಟ್ಟ ತುಂಬಾ ದೊಡ್ಡದು. ಎಲ್ಲವನ್ನೂ ಕುತೂಹಲವಾಗಿ ನೋಡುವ ಅವುಗಳ ದೃಷ್ಟಿ ಮತ್ತು ಆ ಕುತೂಹಲವನ್ನು ಉಳಿಸಿಕೊಳ್ಳುವ ಸಮಯವೂ ಅಷ್ಟೇ ಮುಖ್ಯವಾಗಿರುತ್ತದೆ. ಮಕ್ಕಳಿಗೆ ಚಲನೆ ತುಂಬಾ ಇಷ್ಟ. ಒಂದೇ ಕಡೆ ಇರುವ ಮತ್ತು ಚಲನೆಯೇ ಇಲ್ಲದ…
July 11, 2018
ಬರಹ: kavinagaraj
      ರಾಜಕೀಯ ಕಾರಣಕ್ಕೋ, ಯಾವುದೋ ಕ್ಷುಲ್ಲಕ ಕಾರಣಕ್ಕೋ ದಕ್ಷ ಅಧಿಕಾರಿಯೊಬ್ಬನ ಅಕಾಲಿಕ ವರ್ಗಾವಣೆಯಾದರೆ ಜನರು ಪ್ರತಿಭಟಿಸುವುದುಂಟು. ಇದು ಎರಡು ಸಂಗತಿಗಳನ್ನು ಸೂಚಿಸುತ್ತವೆ- ಒಂದು, ದಕ್ಷ ಮತ್ತು ಜನಪರ ಅಧಿಕಾರಿಗಳನ್ನು ಜನರು…
July 11, 2018
ಬರಹ: addoor
ಬಿಸಿಲಿಗೆ ಕಾದು ಕೆಂಡವಾದ ಟಾರ್ ರಸ್ತೆಯಲ್ಲಿ ನಡೆದು ಗುಳ್ಳೆಯೆದ್ದ ಅಂಗಾಲುಗಳು, ಏಳು ದಿನಗಳ ನಡಿಗೆಯಿಂದ ಬಾತುಹೋದ ಕಾಲಿನ ಮಣಿಗಂಟುಗಳು, ದಾರ ಕಟ್ಟಿ ಜೋಡಿಸಿದ ಹರಿದ ಚಪ್ಪಲಿಗಳು, ಬಿಸಿಲಿನ ಧಗೆಗೆ ಒಣಗಿ ಸುಟ್ಟಂತಾದ ಮುಖಗಳು – ೧೨ ಮಾರ್ಚ್…
July 11, 2018
ಬರಹ: shammi
ರಚನೆ: ಪುರಂದರ ದಾಸರು ಪ್ರಸ್ತಾವನೆ: ಪುರಂದರದಾಸರಿಂದ ಬರೆದ ಈ ಕಾವ್ಯದ ರಚನಾಸನ್ನಿವೇಶ ನನ್ನ ಮನದಲ್ಲಿ ಕೊಂಚ ಪ್ರಶ್ನಾತೀತ ಗೊಂದಲವೆಬ್ಬಿಸಿರುವುದು. ಬಲ್ಲವರು ಯಾರಾದರೂ ವಿವರಣೆ ನೀಡುವರೇ? ಮೂಗು ಸಣ್ಣದು ಮೂಗುತಿ ದೊಡ್ಡದು ಭಾರ ಯಾರು ಹೊರಬೇಕು…
July 11, 2018
ಬರಹ: kavinagaraj
ಅಮರನಲ್ತೆ ಕತ್ತಲೆಯನೋಡಿಸುವ ಬೆಳಕು ನೀನಲ್ತೆ ನೀನಲ್ತೆ ನಿರ್ಮಲನು ತಿಳಿವು ತೋರುವ ಅರಿವು ನೀನಲ್ತೆ | ಸರಿದಾರಿಯಲಿ ಸಮನಿಹನ ಹಿಂದಿಕ್ಕಿ ಅಡಿಯಿಡಲು ಅಡ್ಡಿ ನಿನಗೇನಿಹುದೊ ಕಾಣೆ ಮೂಢ || 
July 11, 2018
ಬರಹ: Harish Athreya
ಶಿಕ್ಷಕ ಎಂದರೆ ಯಾರು? ಆದಿಗುರು ಶಂಕರಾಚಾರ್ಯರ ಪ್ರಶ್ನೋತ್ತರ ಮಾಲಿಕೆಯಲ್ಲಿ ಒಂದು ಪ್ರಶ್ನೆಯಿದೆ ಕೋ ಗುರು: ಗುರುವೆಂದರೆ ಯಾರು ಎಂದು, ಸದ್ವಿದ್ಯೆಯನ್ನು ಕಲಿಸಿದಾತನೆ ಗುರು ಸನ್ನಡತೆಯ ತೋರುವಾತನೆ ಗುರು. ಈ ಮೇಲಿನ ಉತ್ತರದಲ್ಲಿನ ಯಾವ ಅಂಶಗಳು…
July 08, 2018
ಬರಹ: kavinagaraj
 ಇನ್ನೊಬ್ಬರಿಗೆ ಆಗುವ ಹಿಂಸೆ, ಅವಮಾನಗಳನ್ನು ಕಂಡು ಸಂತೋಷಿಸುವುದು, ಸ್ವತಃ ಹಿಂಸೆ ನೀಡಿ, ಅವಮಾನಿಸಿ ಸಂತೋಷಿಸುವುದೇ ವಿಕೃತಿ. ಈ ವಿಕೃತಿ ಮನುಷ್ಯನ ಅಂತರ್ಗತ ಸ್ವಭಾವವಾಗಿದ್ದು, ಪ್ರಮಾಣ ಹೆಚ್ಚು, ಕಡಿಮೆ ಇರಬಹುದು! ಯಾರನ್ನು ಕಂಡರೆ…
July 08, 2018
ಬರಹ: sainathbalakrishna
ಬಂದಿತೇ ಕರ್ತವ್ಯದ ಕರೆ? ಸನ್ನಿಹಿತವಾಯ್ತೆ ಮಥುರೆಗೆ ತೆರಳುವ ಸಮಯ? ತರವೇ ತೆರಳುವುದು ರಾಧೆಯ ನೋಡದೆ ? ಏಕೆ ಕೈಯಿಂದ ಜಾರುತಿರುವುದು  ಮುರಳಿ ? ಮುರಳಿಯ ಉಸಿರು ರಾಧೆ, ಅವಳಿಲ್ಲದೆ ಮುರಳಿಯೇ ? ಹೊರಟನು ಕೃಷ್ಣನು ಹುಡುಕುತ ಮುರಳಿಯ ಉಸಿರನು.  …
July 08, 2018
ಬರಹ: ravinayak
ಇದು ಕರ್ನಾಟಕ ರಾಜ್ಯ ರಸ್ತೆೆ ಸಾರಿಗೆಯೋ, ಡಾಬಾಗಳ ಕಮಿಷನ್ ಸಾರಿಗೆಯೋ ! ಉತ್ತರ ಕರ್ನಾಟಕದ ಹಳ್ಳಿಿ ಹಳ್ಳಿಿಗಳಿಂದ ಸಾವಿರ ಸಾವಿರ ಜನರು ದಿನನಿತ್ಯ ಗಂಟುಮೂಟೆ, ಮಕ್ಕಳು ಮರಿಗಳೊಂದಿಗೆ ಬೆಂಗಳೂರಿಗೆ ದುಡಿಯಲು ಹೋಗುತ್ತಾಾರೆ. ಕೆಲವರು ಟ್ರೈನ್‌…
July 08, 2018
ಬರಹ: kavinagaraj
ಸತ್ವ ರಜೋ ತಮಗಳ ಕಟ್ಟುಗಳು ಬಿಗಿದಿರಲು ತನು ಮನ ವಚನಗಳು ಬಿಡದೆ ಕಾಡಿರಲು | ವಿಚಾರಿ ತಾನವನು ದೇವನ ಮೊರೆ ಹೊಕ್ಕು ತನ್ನ ಬಂಧನವ ತಾನೆ ಮುರಿವನೋ ಮೂಢ ||
July 08, 2018
ಬರಹ: shammi
ರಚನೆ: ಪುರಂದರದಾಸರು ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ! ಕಾಲನವರು ಬಂದು ಕರಪಿಡಿದೆಳೆವಾಗ ತಾಳು ತಾಳೆಂದರೆ ಕೇಳುವರೇ? ವೇಳೆ ಹೋಗದ ಮುನ್ನ ಧರ್ಮವ ಗಳಿಸಿರೊ ಸುಳ್ಳಿನ ಸಂಸಾರ ಸುಳಿಗೆ ಸಿಲುಕಬೇಡಿ ಏನು ಕಾರಣ…
July 08, 2018
ಬರಹ: addoor
ಎಲೆ ಹಸಿರು ಹೂ ಬಿಳ್ಪು ಜಾಜಿಯೊಂದರೊಳೆಂತು ಹುಳಿಸಿಹಿಗಳೊಂದೆ ಮಾವಿನ ಕಾಯೊಳೆಂತು ಒಳಿತು ಕೆಡುಕಂತು ಮಾಯಾಯಂತ್ರವೊಂದರಿನೆ ನೆಲವೊಂದು ಬೆಳೆ ಹಲವು – ಮರುಳ ಮುನಿಯ ಜಾಜಿ ಹೂವಿನ ಬಳ್ಳಿಯಲ್ಲಿ ಎಲೆ ಹಸಿರು, ಹೂ ಬಿಳಿ, ಇದೆಂತು? ಹಾಗೆಯೇ, ಮಾವು…
July 08, 2018
ಬರಹ: Harish Athreya
’ಸರ್ ನನ್ ಮಗ ನನ್ ಜೊತೆ ಮಾತೇ ಆಡಲ್ಲ ಸರ್, ಮೂರ್ಹೊತ್ತು ಟಿವಿ, ಇಲ್ಲಾಂದ್ರೆ ಮೊಬೈಲ್. ನಾವಿದೀವಿ ಅನ್ನೋ ಪ್ರಜ್ಞೇನೇ ಇಲ್ಲ ಇವನಿಗೆ’ ಕಂಪ್ಲೇಂಟುಗಳ ಪಟ್ಟಿ ದೊಡ್ಡದಿತ್ತು ಸಧ್ಯಕ್ಕೆ ಇಷ್ಟಕ್ಕೆ ನಿಲ್ಲಿಸೋಣ. ಏಳನೇ ಕ್ಲಾಸಿನಲ್ಲಿ ಓದ್ತಾ ಇದ್ದ…
July 07, 2018
ಬರಹ: kavinagaraj
    'ಸಪ್ತದ್ವೀಪಾ ವಸುಂಧರಾ' - ಈ ಭೂಮಂಡಲ ಏಳು ದ್ವೀಪಗಳನ್ನೊಳಗೊಂಡಿದೆ ಎಂಬುದು ಇದರ ಅರ್ಥ. ಆ ಏಳು ದ್ವೀಪಗಳೆಂದರೆ ಜಂಬೂದ್ವೀಪ, ಪ್ಲಾಕ್ಷದ್ವೀಪ, ಶಾಲ್ಮಲೀದ್ವೀಪ, ಕುಶದ್ವೀಪ, ಕ್ರೌಂಚದ್ವೀಪ, ಶಕದ್ವೀಪ ಮತ್ತು ಪುಷ್ಕರದ್ವೀಪ. ಜಂಬೂದ್ವೀಪಕ್ಕೆ…
July 07, 2018
ಬರಹ: kavinagaraj
ದೇವನಿಟ್ಟ ಪಾತ್ರೆಯದು ಅಂಕಿಲ್ಲ ಡೊಂಕಿಲ್ಲ ಬೇಯುತಿಹುದು ಪಾತ್ರೆಯಲಿ ಮಾಡಿದಡುಗೆಯೆಲ್ಲ | ಮಾಡಿದ ಕರ್ಮವದು ಬೆನ್ನನು ಬಿಡದು ಅಟ್ಟಡುಗೆಯುಣ್ಣದೆ ವಿಧಿಯಿಲ್ಲ ಮೂಢ ||