December 2021

  • December 07, 2021
    ಬರಹ: ಬರಹಗಾರರ ಬಳಗ
    ಬೇರೆಯವರ ಶ್ರಮವನ್ನು, ಕಷ್ಟವನ್ನು ಪರಿಹರಿಸುವುದು ಮಹಾತ್ಮರ ಸ್ವಭಾವ. ಅವರು ತಮಗೆಂದು ಏನನ್ನೂ ಉಳಿಸಿಕೊಳ್ಳಲಾರರು. ಹಗಲು ಸೂರ್ಯನ ಶಾಖ ಜೀವಕೋಟಿಗಳಿಗೆ ಬೇಕೇ ಬೇಕು. ಹಾಗೆಯೇ ಅದೇ ಝಳದ ಕಾಯುವಿಕೆಯನ್ನು ಇರುಳ ಚಂದಿರ ಎಷ್ಟೊಂದು…
  • December 07, 2021
    ಬರಹ: ಬರಹಗಾರರ ಬಳಗ
    ಪುಸ್ತಕದ ಪುಟ ತಿರುವಿದಂತೆ ಕಥೆಯ ಬಲೆ ನಿಧಾನವಾಗಿ ತೆರೆದುಕೊಳ್ಳುತ್ತಾ ಹೋಯಿತು. ಓದಿನ ಜಾಡು ಹಿಡಿದು ಹೊರಟವನಿಗೆ ಲೋಕದ ಅರಿವೇ ಇಲ್ಲ. ಹೊಟ್ಟೆ ಅನ್ನ ಕೇಳುತ್ತಿಲ್ಲ, ಗಂಟಲು‌ ನೀರು ಬಯಸಲಿಲ್ಲ. ಮನಸ್ಸು ಅಕ್ಷರಗಳನ್ನು ಜೋಡಿಸುತ್ತಾ…
  • December 06, 2021
    ಬರಹ: Ashwin Rao K P
    ಪ್ರಖ್ಯಾತ ಮಧುರೈ ಮೀನಾಕ್ಷಿ ದೇವಸ್ಥಾನದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿರುವ ಈ ದೇವಸ್ಥಾನ ಹಲವು ಶತಮಾನಗಳಷ್ಟು ಹಳೆಯದ್ದು. ಈ ದೇವಸ್ಥಾನದ ಸುತ್ತ ಇರುವ ಹಲವಾರು ಗೋಪುರಗಳು ಬಹಳ ವೈಶಿಷ್ಟ್ಯಪೂರ್ಣವಾದದ್ದು.…
  • December 06, 2021
    ಬರಹ: Shreerama Diwana
    ಭಾರತದ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಮಹಾ ಮಾನವತಾವಾದಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ ದಿನ. ಹೀಗೊಂದು ಸುದ್ದಿ ಇಂದು ನಮ್ಮ  ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಬಹುದು ಎಂದು ನಿರೀಕ್ಷಿಸೋಣವೇ…?…
  • December 06, 2021
    ಬರಹ: ಬರಹಗಾರರ ಬಳಗ
    ಸಾಮಾನ್ಯವಾಗಿ ಭಗವದ್ಗೀತೆ ಓದದವರು ಯಾರೂ ಇರಲಾರರು ಅನ್ನಿಸುತ್ತದೆ. ಇದು ಆ ಪರಮಾತ್ಮನು ನಮಗೆ ನೀಡಿರುವ ದೊಡ್ಡ ಸಾಕ್ಷಾತ್ಕಾರವೇ ಸರಿ. ಧರ್ಮಯುದ್ಧದ ಕಾಲವದು. ಒಟ್ಟಾರೆ ಯುದ್ಧ ಮಾಡುವುದು ಕೂಡದು. ಶೋಕದಿಂದ ಭ್ರಾಂತಿಗೊಳಗಾದ ಪಾರ್ಥನಿಗೆ ಏನು…
  • December 06, 2021
    ಬರಹ: ಬರಹಗಾರರ ಬಳಗ
    ಸಮಯವ ಕಳೆಯಲು ಹಾಳು ಹರಟೆ ಸತ್ಫಲವಿಲ್ಲದೇ ಬರೀ ಕಾಡು ಹರಟೆ   ಗಡಿಯಿಲ್ಲದ ಗಡಿಯಾರ ಸುತ್ತುವಂತೆ ಸಾಗುತ್ತದೆ ಮಾತುಗಳ ಅಂತೆ- ಕಂತೆ   ಭತ್ತದ ತೌಡನ್ನು ಒನಕೆಯಿಂದ ಕುಟ್ಟುವಂತೆ ಉದರದುರಿಯ ಮಾತನ್ನು ಕಕ್ಕುವರಂತೆ   ಗಾಳಿಯಲ್ಲಿ ತೇಲುವ ವ್ಯರ್ಥವಾದ…
  • December 06, 2021
    ಬರಹ: ಬರಹಗಾರರ ಬಳಗ
    ಆ ಒಂದು ಘಟನೆ ನಡೆಯದೇ ಇದ್ದಿದ್ದರೆ ಆತ ಇಂದು ಪದವಿ ಶಿಕ್ಷಣ ಮುಗಿಸಿ ರಂಗಕಲೆಯೋ ಅಥವಾ ಔದ್ಯೋಗಿಕ ಕ್ಷೇತ್ರವನ್ನು ಅರಸಿ ಸಾಧನೆಯ ಹೆಜ್ಜೆ ಇಡಬೇಕಿತ್ತು. ಹೀಗಾಗಲೇ ಬೇಕೆಂದು ಬರೆದ ಮೇಲೆ ಯಾರೇನು ಮಾಡಕ್ಕಾಗುತ್ತೆ? ಆ ದಿನ ನಾಟಕದ ತಯಾರಿಗೆ ಅಂತಿಮ…
  • December 05, 2021
    ಬರಹ: Shreerama Diwana
    ಒಳ್ಳೆಯ ಕೆಲಸದಲ್ಲಿ ಕೆಟ್ಟದ್ದನ್ನು, ಕೆಟ್ಟ ಕೆಲಸಗಳಲ್ಲಿ ಒಳ್ಳೆಯದನ್ನು ಹುಡುಕುವ  ಗುಣ ಜನರಿಂದ ರಾಜಕಾರಣಿಗಳಿಗೆ, ರಾಜಕಾರಣಿಗಳಿಂದ ಮಾಧ್ಯಮಗಳಿಗೆ ವರ್ಗಾಯಿಸಲ್ಪಟ್ಟಿದೆ. ಪ್ರೀತಿಯಲ್ಲಿ ದ್ವೇಷವನ್ನು, ದ್ವೇಷದಲ್ಲಿ ಪ್ರೀತಿಯನ್ನು ಹುಡುಕುವ…
  • December 05, 2021
    ಬರಹ: ಬರಹಗಾರರ ಬಳಗ
    ನಾವು ಪ್ರತಿನಿತ್ಯ ದೇವರಿಗೆ ಕೈಮುಗಿಯುವುದು, ಪ್ರಾರ್ಥನೆ, ಪೂಜೆ, ಭಜನೆ ಮಾಡುತ್ತೇವೆ. ನಾವು ಈ ಸೃಷ್ಟಿಯ ಅದ್ಭುತಗಳನ್ನು ಗಮನಿಸಿದರೆ, ಇದೆಲ್ಲ ಹೇಗಾಯಿತು? ಎಂಬ ಪ್ರಶ್ನೆ ಸಹಜವಲ್ಲವೇ? ಹಾಗಾದರೆ ಇದರ ಹಿಂದೆ ಒಂದು ಚಾಲಕ ಮತ್ತು ನಿಯಂತ್ರಕ ಶಕ್ತಿ…
  • December 05, 2021
    ಬರಹ: ಬರಹಗಾರರ ಬಳಗ
    'ಸೈನ್ - Sine' ಪದವು ಪ್ರಪ್ರಥಮವಾಗಿ ಆರ್ಯಭಟ್ಟರ 'ಆರ್ಯಭಟಿಯಂ' (ಕ್ರಿ.ಶ. 500) ಎಂಬ ವಿಶ್ವಕೋಶದಲ್ಲಿ ಕಾಣಸಿಕ್ಕಿತು. ಅವರು ಈ ಪದವನ್ನು Half Chordಕ್ಕೆ ಅರ್ಧ-ಜ್ಯ ಎಂದು ನಾಮಕರಿಸಿ, ತದನಂತರ ಅದನ್ನು ಕೇವಲ 'ಜ್ಯಾ' ಎಂದು ಸಂಕ್ಷಿಪ್ತಗೊಳಿಸಿ…
  • December 05, 2021
    ಬರಹ: ಬರಹಗಾರರ ಬಳಗ
    ಬಾಳೆಗೊನೆ ಚೆನ್ನಾಗಿ ಬಂದಿತ್ತು. ಮಾರಾಟಕ್ಕೆ ಪೇಟೆಗೆ ಹೊರಟೆ. ಮಕ್ಕಳಿಗೆ ಬೇರೆ ಬೇರೆ ಊರಲ್ಲಿ ಕೆಲಸ. ಕೃಷಿ ನನ್ನ ಕೆಲಸ. ಬೆಲೆ ಹೇಗಿದೆಯೋ ಗೊತ್ತಿಲ್ಲ. ಚೆನ್ನಾಗಿ ಸಿಗಬಹುದೆಂಬ ನಂಬಿಕೆಯಿಂದ ತಲುಪಿದ್ದೆ. ಬೆಲೆ ಬೆಳೆಸಿದ ಖರ್ಚಿಗಿಂತ ಹೆಚ್ಚು…
  • December 04, 2021
    ಬರಹ: Ashwin Rao K P
    ರೈಲು ಬಿಡ್ತಿದ್ದಾನೆ ನಮ್ಮ ಮಗಳ ಕುಟುಂಬ ಗ್ರಾಮೀಣ ಪ್ರದೇಶದಲ್ಲಿದೆ. ನಾನು ಒಮ್ಮೆ ಅವರ ಮನೆಗೆ ಹೋಗಿದ್ದೆ. ಮಗಳಿಗೆ ಇಬ್ಬರು ಗಂಡು ಮಕ್ಕಳು. ಒಬ್ಬ ೭ನೇ ತರಗತಿ. ಮತ್ತೊಬ್ಬ ೧ ನೇ ತರಗತಿ. ಇಬ್ಬರದೂ ಒಂದೇ ಸರಕಾರಿ ಶಾಲೆ. ಆ ದಿನ ಇಬ್ಬರೂ ಶಾಲೆಯಿಂದ…
  • December 04, 2021
    ಬರಹ: Ashwin Rao K P
    ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭ ಬೆಲೆಯಲ್ಲಿ…
  • December 04, 2021
    ಬರಹ: addoor
    ಡಿಸೆಂಬರ್ ೩, ೧೯೮೪ರ ಮಧ್ಯರಾತ್ರಿಯ ನಂತರ ಭೋಪಾಲ ಸ್ಮಶಾನವಾಯಿತು - ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ಕಾರ್ಖಾನೆಯಿಂದ ಸೋರಿದ ವಿಷಾನಿಲಕ್ಕೆ ಸಾವಿರಾರು ಜನ ಬಲಿಯಾದರು. ಅದಾಗಿ ಮೂವತ್ತೇಳು ವರುಷಗಳು ದಾಟಿದರೂ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ…
  • December 04, 2021
    ಬರಹ: Shreerama Diwana
    ಅಮೆರಿಕಾದಲ್ಲಿ ಕೆಲವು ವರ್ಷಗಳು ವಾಸವಾಗಿದ್ದು ಹಿಂತಿರುಗಿದ ಹಿರಿಯ ಪರಿಚಿತರೊಬ್ಬರು ಭೇಟಿಯಾಗಿದ್ದರು. ಹೀಗೆ ಲೋಕಾಭಿರಾಮವಾಗಿ ಮಾತನಾಡುತ್ತಾ ಅನೇಕ ವಿಷಯಗಳನ್ನು ಚರ್ಚಿಸಿದೆವು. ಭಾರತದ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಅಪಾರ ಕಾಳಜಿ ಮತ್ತು…
  • December 04, 2021
    ಬರಹ: ಬರಹಗಾರರ ಬಳಗ
    ನಮ್ಮ ಬದುಕಿನ ದಾರಿಯಲ್ಲಿ ನಾವು ತನು ಮನದಿಂದ ಶೀಲವಂತರಾಗಿರಲು ಪ್ರಯತ್ನಿಸಬೇಕು. ‘ಶೀಲ’ ಎನ್ನುವುದು ಕೋಟಿ ಹಣಕ್ಕಿಂತಲೂ, ನವರತುನಕ್ಕಿಂತಲೂ ಬೆಲೆಯುಳ್ಳದ್ದು. ಎಷ್ಟು ಐಶ್ವರ್ಯ ಇದ್ದರೇನು, ನೋಡಲು ಅಂದ ಚಂದವಾಗಿದ್ದರೇನು, ಶೀಲವೇ ಇಲ್ಲದ ಮೇಲೆ,…
  • December 04, 2021
    ಬರಹ: ಬರಹಗಾರರ ಬಳಗ
    ಹೂವುಗಳು ಬಿರಿದಂತೆ ನಿನ್ನ ಮುಖಕಮಲ ಅರಳಲಿ ಗೆಳತಿ ಚಂದ್ರಮನ ನಗುವಿನಂತೆ ಮತ್ತೆ ಮೈಮನ ನಲಿಯಲಿ ಗೆಳತಿ   ಒಣಗಿದ ಮನವೂ ರಾತ್ರಿಯು  ಒಂದೇ ಹೇಳುವಿಯಾ ಏಕೆ ಹತ್ತಿರವಿದ್ದರೂ ದೂರವಾಗಿಯೇ ನಿಲ್ಲುವ ಚಾಳಿ ಅಳಿಯಲಿ ಗೆಳತಿ   ಮತ್ತುಗಳು ಕೆಲವೊಮ್ಮೆ ಕಹಿ…
  • December 04, 2021
    ಬರಹ: addoor
    ನೂರಾರು ವರುಷಗಳ ಹಿಂದೆ ಬನಾರಸಿನಲ್ಲಿ ಒಬ್ಬ ರಾಜ ರಾಜ್ಯವಾಳುತ್ತಿದ್ದ. ಅವನು ಮಹಾ ಸ್ವಾರ್ಥಿ. ಅವನಿಗೆ ತನ್ನ ಸುಖದ್ದೇ ಯೋಚನೆ ಹೊರತು ಅವನು ತನ್ನ ಪ್ರಜೆಗಳ ಹಿತದ ಬಗ್ಗೆ ಯೋಚಿಸುತ್ತಿರಲಿಲ್ಲ. ಅದೊಂದು ದಿನ ಅರಮನೆಯ ಪಕ್ಕದ ನದಿಯಲ್ಲಿ ಸ್ನಾನ…
  • December 04, 2021
    ಬರಹ: ಬರಹಗಾರರ ಬಳಗ
    ಸಣ್ಣ ಸಂಧಿಯನ್ನು ದಾಟಿ ಆ ಮನೆಯನ್ನು ತಲುಪಬೇಕು. ಹಿರಿಯರಿಂದ ಬಂದ ಬಳುವಳಿಯೆಂದರೆ ಊರಿನ ನಡುವೆ ಹೆಸರು, ದೊಡ್ಡದೊಂದು ಮನೆ, ಜೊತೆಗೇ ಬದುಕುವ ಕುಟುಂಬ, ಮನೆ ಹುಡುಗನಿಗೆ ದೊಡ್ಡಪ್ಪ, ಚಿಕ್ಕಪ್ಪ, ಅಪ್ಪ-ಅಮ್ಮ ಎಲ್ಲರ ಮುಖವ ದಿನವೂ ನೋಡುವ ಭಾಗ್ಯ.…
  • December 03, 2021
    ಬರಹ: Ashwin Rao K P
    ಬೆಂಗಳೂರಿನ ಟ್ರಾಫಿಕ್ ನಲ್ಲಿ ಸಿಲುಕಿ ನಾನು ವಿಮಾನ ನಿಲ್ದಾಣ ತಲುಪುವಾಗ ತುಂಬಾನೇ ತಡವಾಗಿತ್ತು. ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸಮಜಾಯಿಶಿ ಕೊಟ್ಟು ಕಡೆಗೂ ವಿಮಾನ ಹತ್ತುವಾಗ ನಾನು ಬೆವರಿ ಹೋಗಿದ್ದೆ. ವಿಮಾನದ ಒಳಗಡೆ ಪ್ರವೇಶಿಸುವಾಗ ಎಲ್ಲರೂ…