ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೂವಿನ ಸಸ್ಯಗಳ ಗೆಲ್ಲು ಬೇರು ಬರಿಸುವಿಕೆ.

ಹೂವಿನ ತೋಟ ಮಾಡುವಾಗ ಅಲ್ಲಿ ಇರುವ ಗಿಡಗಳನ್ನು ಸಂಖ್ಯಾಭಿವೃದ್ಧಿ ಮಾಡಲು ಅಥವಾ ಬೇರೆ ಕಡೆಯಿಂದ ಗೆಲ್ಲು ತಂದು ಅದನ್ನು ಬೇರು ಬರಿಸಿ ಸಸಿ ಮಾಡಲು ಎಲ್ಲಾ ಹೂ ತೋಟ ಮಾಡುವವರಿಗೆ ತಿಳಿದಿರಬೇಕು. ದಾಸವಾಳ, ಗುಲಾಬಿ,  ಹೀಗೇ ಕೆಲವೊಂದು ಹೂವಿನ ಗಿಡದ ಗೆಲ್ಲನ್ನು ತಂದು ಅದಕ್ಕೆ ಬೇರು ಬರುವಂತೆ ಮಾಡುವ ಕೃಷಿ ವಿಧಾನ ಇಲ್ಲಿದೆ.

Image

ಅಂಪೈರ್ ಮೇಡಂ

ಪುಸ್ತಕದ ಲೇಖಕ/ಕವಿಯ ಹೆಸರು
ಕೆ. ಸತ್ಯನಾರಾಯಣ
ಪ್ರಕಾಶಕರು
ಕ್ರಿಯೇಟಿವ್ ಪುಸ್ತಕ ಮನೆ, ಕಾರ್ಕಳ
ಪುಸ್ತಕದ ಬೆಲೆ
ರೂ. ೨೨೦.೦೦, ಮುದ್ರಣ : ೨೦೨೪

ಕನ್ನಡ ಸಾಹಿತ್ಯದಲ್ಲಿ ಕೆ. ಸತ್ಯನಾರಾಯಣರ ಕಾದಂಬರಿಗಳು ತಮ್ಮ ವಿಶಿಷ್ಟ ಶೈಲಿಯಿಂದಲೇ ಗುರುತಿಸಿಕೊಂಡಿವೆ. ಅವರ ಕಾದಂಬರಿಗಳು ಕೇವಲ ಕಥೆಯನ್ನು ಹೇಳುವುದಕ್ಕಿಂತಲೂ, ಮನುಷ್ಯನ ಜೀವನದ ಆಳವಾದ ಭಾವನೆಗಳನ್ನು, ಸಂಕೀರ್ಣ ಸಂಬಂಧಗಳನ್ನು, ಮತ್ತು ಸಮಾಜದ ವೈರುಧ್ಯಗಳನ್ನು ಸೂಕ್ಷ್ಮವಾಗಿ ಚಿತ್ರಿಸುತ್ತವೆ.

ಸಮಸ್ಯೆಗಳು - ಸಲಹೆಗಳು - ಮನವಿ (ಭಾಗ 2)

ಪರೀಕ್ಷಾ ನೀತಿ ಬದಲು, FA 1,2,3,4,  SA, 1,2 ಬದಲಾಗಿ( LBA) ಪಾಠ ಅಧಾರಿತ ಮೌಲ್ಯಾಂಕನ ಪದ್ಧತಿ ಜಾರಿ 2025-26 ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ.

Image

ಭೂತದ ಕೋಳಿ (ಕಥಾ ಸಂಕಲನ)

ಪುಸ್ತಕದ ಲೇಖಕ/ಕವಿಯ ಹೆಸರು
ಅನು ಬೆಳ್ಳೆ
ಪ್ರಕಾಶಕರು
ಅನು ಕ್ರಿಯೇಷನ್ಸ್, ಕಾರ್ಕಳ
ಪುಸ್ತಕದ ಬೆಲೆ
ರೂ. 140/-

“ಭೂತದ ಕೋಳಿ” ಕಥಾ ಸಂಕಲನದ ಲೇಖಕರಾದ ರಾಘವೇಂದ್ರ ಬಿ. ರಾವ್ ಅವರು “ಅನು ಬೆಳ್ಳೆ” ಎಂದೇ ಪರಿಚಿತರು. ಕಾರ್ಕಳ ತಾಲೂಕಿನ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರು. ಇವರ ಸಣ್ಣ ಕತೆಗಳು ಉದಯವಾಣಿ, ಪ್ರಜಾವಾಣಿ, ಕನ್ನಡ ಪ್ರಭ, ಸುಧಾ, ತರಂಗ, ಮಯೂರ, ತುಷಾರ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಹನ್ನೆರಡು ಸಣ್ಣ ಕಥೆಗಳಿರುವ ಈ ಸಂಕಲನ “ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ” ಪಡೆದಿದೆ. ಅನು ಬೆಳ್ಳೆ ಅವರಿಗೆ ಪಾತ್ರಗಳು ಮತ್ತು ಸಂದರ್ಭ ಸೃಷ್ಟಿಯ ಕಲೆ ಸಿದ್ಧಿಸಿದೆ. ಇಲ್ಲಿನ ಕತೆಗಳ ವಿವಿಧ ಪಾತ್ರಗಳು ಮನುಷ್ಯರ ವರ್ತನೆಗಳನ್ನು ಅರ್ಥ ಮಾಡಿಕೊಳ್ಳಲು ಸಹಕರಿಸುತ್ತವೆ. ಇವು ವಾಸ್ತವದ ನೆಲೆಗಟ್ಟಿನಲ್ಲಿ ಬರೆದ ಕತೆಗಳಾದ ಕಾರಣ ಓದುಗರ ಮನಸ್ಸನ್ನು ತಟ್ಟುತ್ತವೆ.

ಮನುಷ್ಯರಾಗಿ ಬದುಕುವುದು ಕಷ್ಟ…!

ಒಂದು ಮಾತಿದೆ 'ಮನುಷ್ಯರಾಗಿ ಹುಟ್ಟುವುದಕ್ಕಿಂತಲೂ ಮನುಷ್ಯರಾಗಿ ಬದುಕುವುದು ತುಂಬಾ ಪ್ರಯಾಸದ ಕೆಲಸ'ವೆಂದು. ಯೋಚಿಸಿದಾಗ ಇದು ಸತ್ಯವಿರಬಹುದೆಂದು ಅನ್ನಿಸ್ತದೆ. ಶ್ರಮ, ಸಾಧನೆ, ವಿಶ್ವಾಸ, ನಂಬಿಕೆ, ಅಚಲ ನಿರ್ಧಾರ, ಯೋಚನಾ ಶಕ್ತಿ, ಆತ್ಮಾಭಿಮಾನ, ಗೌರವಿಸುವ ಗುಣ, ತಾಳ್ಮೆ ಇವೆಲ್ಲವನ್ನೂ ಮೈಗೂಡಿಸಿಕೊಂಡರೆ ೭೫% ವಾದರೂ ಮನುಷ್ಯರಾಗಿ ಬಾಳಬಹುದೇನೋ. ಮನುಷ್ಯತ್ವದಲ್ಲಿ ಮುಖ್ಯ' ತಮ್ಮತನ' ಇರಲೇಬೇಕು.

Image

ಜಾಣ ಪ್ರಕೃತಿ

ಕಳೆದ ಲೇಖನದಲ್ಲಿ ಒಂದು ಮರ ತನ್ನ ಆಹಾರ ತಯಾರಿಸಲು ಎಷ್ಟೊಂದು ಒತ್ತಡವನ್ನನುಭವಿಸುತ್ತವೆ ಎಂದು ನೋಡಿದೆವು. ಸಣ್ಣ ತಂಗಾಳಿ, ಒಂದು ಮೋಡ, ಹಕ್ಕಿ ಬಂದು ಕುಳಿತಾಗ ಉಂಟಾಗುವ ಕದಲಿಕೆ, ತುದಿಯ ಟೊಂಗೆಯ ಮೇಲೆ ಇಣಚಿಯ ಸಣ್ಣ ಓಡಾಟ, ಮರದಿಂದ ಸ್ವಲ್ಪ ಮೇಲ್ಗಡೆ ಹಾರಾಡುತ್ತಿರುವ ಗಿಡುಗನ ಗಾಢ ನೆರಳು, ಸೂರ್ಯನ ಮೇಲೆ ಸರಿದು ಹೋಗುವ ಒಂದು ಮೋಡದ ತುಂಡು, ಜೋರಾಗಿ ಬೀಸುವ ಗಾಳಿ ಹೀಗೆ ಎಲ್ಲವೂ ಮರವೆದುರಿಸುವ ಸವಾಲುಗಳೇ.

Image

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಿತಿಯಿದೆ

ಬೆಳೆದ ಮೂರು ದಿನಗಳಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಸರ್ವೋಚ್ಚ ಯಾಲಯದ ವಿವಿಧ ಪೀಠಗಳು ವ್ಯಕ್ತಪಡಿಸಿದ ಅಭಿಪ್ರಾಯಗಳು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುವ ವ್ಯಕ್ತಿ ನಿಂದನೆ, ಅಪಮಾನ, ಮಾನಹಾನಿಗಳು ಸ್ವೀಕಾರಾರ್ಹವಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಾರಿವೆ.

Image

ಸಮಸ್ಯೆಗಳು - ಸಲಹೆಗಳು - ಮನವಿ (ಭಾಗ 1)

ಶಿಕ್ಷಣ ಸಂಘಟನೆಗಳು - ಶಿಕ್ಷಕರು - ಪೋಷಕರು - ಸಾಮಾಜಿಕ ಕಾರ್ಯಕರ್ತರು - ಚಿಂತಕರು - ಶಿಕ್ಷಣ ತಜ್ಞರು - ಶಿಕ್ಷಣ ಇಲಾಖೆಯವರು ಕಡ್ಡಾಯವಾಗಿ ಓದಬೇಕು.

Image

ಸ್ಟೇಟಸ್ ಕತೆಗಳು (ಭಾಗ ೧೩೮೫) - ಬೇಲಿ

ದಣಿಗಳೇ, ನೀವೇನೂ ಯೋಚನೆ ಮಾಡ್ಕೋಬೇಡಿ. ನಮ್ಮ ಗದ್ದೆಗೆ ಈ ಸಲ ಯಾವ ತೊಂದರೆ ಆಗುವುದಿಲ್ಲ. ನಾನು ಗಟ್ಟಿಯಾದ ಬೇಲಿಯನ್ನು ಇಡೀ ಗದ್ದೆಯ ಸುತ್ತ ಹಾಕಿದ್ದೇನೆ. ಅದನ್ನ ದಾಟಿ ಬರುವ ಧೈರ್ಯ ಯಾರಿಗೂ ಇಲ್ಲ, ಅಂತಂದ ಸೀನಪ್ಪ ಯಜಮಾನರಿಗೆ ಧೈರ್ಯ ತುಂಬಿ ತನ್ನ ಮನೆಯ ಕಡೆಗೆ ನಡೆದ. ಯಜಮಾನರಿಗೂ ಪೂರ್ತಿ ನಂಬಿಕೆ ಏನಲ್ಲ ಆದ್ರೆ ಸೀನಪ್ಪ ಹೇಳಿದ ಮೇಲೆ ತೊಂದರೆ ಇಲ್ಲ ಅಂದುಕೊಂಡು ಸುಮ್ಮನಾಗಿ ಬಿಟ್ಟರು.

Image