ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಾವಿನ ಹಣ್ಣಿನ ಗೊಜ್ಜು

Image

ಒಣಮೆಣಸಿನಕಾಯಿ, ಹುರಿಗಡಲೆ, ತೆಂಗಿನಕಾಯಿ ತುರಿ, ಅರಶಿನ ಮತ್ತು ಇಂಗು ಸೇರಿಸಿ ರುಬ್ಬಿ. ಬಾಣಲೆಯಲ್ಲಿ ಕಾದ ಎಣ್ಣೆಗೆ ಸಾಸಿವೆ ಒಗ್ಗರಣೆ ಮಾಡಿ. ನಂತರ ರುಬ್ಬಿಟ್ಟುಕೊಂಡ ಮಸಾಲೆ, ಹುಣಸೆರಸ, ಬೆಲ್ಲ ಹಾಕಿ ಕುದಿಸಿ. ಕುದಿಯುತ್ತಿರುವ ಮಿಶ್ರಣಕ್ಕೆ, ಮಾವಿನಹಣ್ಣಿನ ಹೋಳುಗಳು, ಉಪ್ಪು ಸೇರಿಸಿ ಎರಡು ನಿಮಿಷ ಕುದಿಸಿದರೆ, ಮಾವಿನಹಣ್ಣಿನ ಗೊಜ್ಜು ರೆಡಿ.

ಬೇಕಿರುವ ಸಾಮಗ್ರಿ

ಮಾವಿನ ಹಣ್ಣಿನ ಹೋಳುಗಳು - ೨ ಕಪ್, ತೆಂಗಿನ ತುರಿ - ೧ ಕಪ್, ಒಣಮೆಣಸಿನಕಾಯಿ - ೮, ಹುರಿಗಡಲೆ - ೨ ಚಮಚ, ಬೆಲ್ಲದ ಹುಡಿ - ೨ ಚಮಚ, ಹುಣಸೆ ರಸ - ೧ ಚಮಚ, ಅರಶಿನ ಅರ್ಧ ಚಮಚ, ಇಂಗು - ಕಾಲು ಚಮಚ, ಎಣ್ಣೆ - ೩ ಚಮಚ, ಸಾಸಿವೆ - ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ಆರೋಗ್ಯ ಎಂಬುದು ದೊಡ್ಡ ಕೊಡುಗೆ...

ಸಂತೃಪ್ತಿ ದೊಡ್ಡ ಸಂಪತ್ತು, ವಿಶ್ವಾಸಾರ್ಹತೆ ಎಂಬುದು ಅತ್ಯುತ್ತಮ ಸಂಬಂಧ.....ಗೌತಮ ಬುದ್ಧ. ಇನ್ನೊಮ್ಮೆ ಓದಿ ನೋಡಿ. ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

Image

ಸ್ಟೇಟಸ್ ಕತೆಗಳು (ಭಾಗ ೧೦೧೭)- ಗಾಳ

ಈಗ ಈಗ ಗಾಳ ಹಾಕುವವರು ಹೆಚ್ಚಾಗಿದ್ದಾರೆ. ನೀನು ನದಿ ಬದಿಗೆ ಕೆರೆಗೆ ಅಂದುಕೊಂಡೆಯಾ? ಅಲ್ಲಪ್ಪ ವಿದ್ಯಾರ್ಥಿಗಳನ್ನು ತಮಗೆ ಉಪಯೋಗ ಆಗುವವರನ್ನ ಗಾಳ ಹಾಕಿ ಹಿಡಿದುಕೊಳ್ಳುತ್ತಾರೆ, ಇಲ್ಲಿ ಗಾಳ ಹಾಕುವವರು ತಮ್ಮ ಗಾಳದ ತುದಿಗೆ ವಿವಿಧ ರೀತಿಯ ಅದ್ಭುತಗಳನ್ನ ಸಿಕ್ಕಿಸಿಕೊಂಡಿರುತ್ತಾರೆ. ಒಂದಷ್ಟು ಅಂಕಗಳನ್ನು ಜೋಡಿಸಿರುತ್ತಾರೆ. ಸಾಧಕರ ಪಟ್ಟಿಗಳನ್ನು ಇಟ್ಟುಬಿಡುತ್ತಾರೆ.

ಜೇನು ಹುಳುಗಳು ಮತ್ತು ತಪ್ಪು ತಿಳುವಳಿಕೆಗಳು (ಭಾಗ 1)

ನಿಸರ್ಗದ ಅಚ್ಚರಿಯ ವಿದ್ಯಮಾನಗಳು ನಿರಂತರವಾಗಿ ಸಾಗುತ್ತಿರುತ್ತವೆ. ಅದು ಪ್ರಕೃತಿಯ ಎಲ್ಲಾ ಆಯಾಮಗಳಲ್ಲೂ... ಜೀವಿಗಳಲ್ಲಿ ಆಯಾ ಜೀವಿಗಳ ಗುಂಪಿಗೆ ಅವು ತಲತಲಾಂತರದಿಂದ ಬಂದ ಆಹಾರ, ಸಂತಾನೋತ್ಪತ್ತಿ, ಬದುಕಿನ ವಿಧಾನಗಳು ಬೇರೆ ಬೇರೆ ಆಗಿದ್ದರೂ ಬೇರೊಂದು ಗುಂಪಿನ ಜೀವಿಗಳಿಗೆ ಮಾತ್ರ ಇತರರ ಜೀವಿಗಳ ಬದುಕು ಅಚ್ಚರಿ ಎಂಬಂತೆ ಕಾಣುವುದು.

Image

ಸಂಕಷ್ಟ ಸೂತ್ರವೊಂದೇ ಪರಿಹಾರ

ಕಳೆದ ವರ್ಷವಿಡೀ ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕ ರಾಜ್ಯವನ್ನು ಕಟಕಟೆಯಲ್ಲಿ ನಿಲ್ಲಿಸಿದ ತಮಿಳುನಾಡು ಈ ಬಾರಿ ಮುಂಗಾರು ಆರಂಭದಲ್ಲಿಯೇ ತನ್ನ ಪಾಲಿನ ನೀರಿಗಾಗಿ ಕ್ಯಾತೆ ತೆಗೆದಿದೆ. ತಮಿಳುನಾಡು ಒತ್ತಡ ತಂತ್ರದ ಫಲವಾಗಿ ಕಳೆದ ವರ್ಷ ಕಾವೇರಿ ಕೊಳ್ಳದ ನಮ್ಮ ರೈತರ ಹಿತಾಸಕ್ತಿಯನ್ನು ಬಲಿಗೊಟ್ಟು ನೀರು ಬಿಡಲೇಬೇಕಾಯಿತು.

Image