ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜೀವರತಿ

ಪುಸ್ತಕದ ಲೇಖಕ/ಕವಿಯ ಹೆಸರು
ಜ. ನಾ. ತೇಜಶ್ರೀ
ಪ್ರಕಾಶಕರು
ಅಮೂಲ್ಯ ಪುಸ್ತಕ, ವಿಜಯನಗರ, ಬೆಂಗಳೂರು - ೫೬೦೦೪೦
ಪುಸ್ತಕದ ಬೆಲೆ
ರೂ. ೪೫೦.೦೦, ಮುದ್ರಣ: ೨೦೨೫

‘ಜೀವರತಿ’ ಎನ್ನುವ ಸುಮಾರು ೪೦೦ ಪುಟಗಳ ಬೃಹತ್ ಕಾದಂಬರಿಯನ್ನು ಬರೆದಿದ್ದಾರೆ ಜ ನಾ ತೇಜಶ್ರೀ. ಇವರು ತಾವು ಬರೆದ ಕಾದಂಬರಿಯ ಬಗ್ಗೆ, ಅದನ್ನು ಬರೆಯಲು ಸಿಕ್ಕ ಪ್ರೇರಣೆಯ ಬಗ್ಗೆ ತಮ್ಮ ಮಾಹಿತಿನಲ್ಲಿ ಬರೆದಿರುವುದು ಹೀಗೆ…

ದಿಢೀರ್ ಸಾವುಗಳ ಸುತ್ತಾ…

ಇತ್ತೀಚಿನ ಕೆಲವು ಮಾಧ್ಯಮ ವರದಿಗಳನ್ನು ನೋಡುತ್ತಿದ್ದರೆ ಅನೇಕ ಯುವಕ ಯುವತಿಯರು, ವಿದ್ಯಾರ್ಥಿಗಳು ಹೃದಯಘಾತದಿಂದ ದಿಢೀರನೆ ಯಾವುದೇ ಪೂರ್ವ ಮುನ್ಸೂಚನೆ ಇಲ್ಲದೆ ಸಾಯುತ್ತಿರುವುದು ಹೆಚ್ಚಾಗುತ್ತಿದೆ. ಅದಕ್ಕೆ ಹಲವಾರು ಕಾರಣಗಳು ಇರಬಹುದು. ಅದನ್ನು ವೈದ್ಯಕೀಯ ಸಂಶೋಧನಾ ಕ್ಷೇತ್ರ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ ಮತ್ತು ಸರ್ಕಾರವು ಆ ನಿಟ್ಟಿನಲ್ಲಿ ಪ್ರಯತ್ನ ಪಡಲಿ.

Image

ಸ್ಟೇಟಸ್ ಕತೆಗಳು (ಭಾಗ ೧೩೭೦) - ಬದುಕಾದರೆ

ಆ ಊರಲ್ಲಿ ಒಂದು ಎತ್ತರವಾದ ಬೆಟ್ಟವಿತ್ತು. ಆ ಬೆಟ್ಟವನ್ನು ಹಲವು ಜನ ಹತ್ತಬೇಕು ಅಂತ ಬಯಸಿದ್ದರು. ಆದರೆ ಹಲವರು ಅರ್ಧ ಹತ್ತಿ ಇಳಿದು ವಾಪಸು ಹೋಗಿಬಿಟ್ಟಿದ್ದರು. ಆ ಬೆಟ್ಟದ ಮೇಲೆರಿ ಬಾವುಟವನ್ನು ಹಾರಿಸುವವರು ವಿಜಯಶಾಲಿಗಳು ಜಗತ್ತಿನ ಅದ್ಭುತ ವ್ಯಕ್ತಿಗಳು ಅಂತ ಕೊಂಡಾಡುವುದಕ್ಕೆ ಪ್ರತಿಯೊಬ್ಬರೂ ಕಾಯ್ತಾ ಇದ್ರು. ಅದಕ್ಕೆ ಒಂದು ತಿಂಗಳ ತರಬೇತಿಯೂ ನಡೆಯಿತು.

Image

ಬುದ್ಧಿಯ ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ದೇವುಡು ನರಸಿಂಹ ಶಾಸ್ತ್ರಿ
ಪ್ರಕಾಶಕರು
ಹೇಮಂತ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ.100/-

ಕನ್ನಡದಲ್ಲಿ ಪೌರಾಣಿಕ ಕಾದಂಬರಿಗಳನ್ನು ರಚಿಸಿದ ಪ್ರತಿಭಾವಂತ ಸಾಹಿತಿ ದೇವುಡು ನರಸಿಂಹ ಶಾಸ್ತ್ರಿ. ತಮ್ಮ ಮೂರು ಬೃಹತ್ ಕಾದಂಬರಿಗಳಾದ “ಮಹಾ ಬ್ರಾಹ್ಮಣ”, “ಮಹಾ ಕ್ಷತ್ರಿಯ” ಮತ್ತು “ಮಹಾ ದರ್ಶನ”ಗಳಿಂದ ಮೇರು ಸದೃಶ ಸಾಹಿತಿಗಳಾಗಿ ಕನ್ನಡದ ಓದುಗರಿಗೆ ಪರಿಚಿತರು.

ಬಹುಮುಖ ಪ್ರತಿಭೆಯ ದೇವುಡು ಅವರು ಮಕ್ಕಳ ಸಾಹಿತ್ಯಕ್ಕೆ ಕೂಡ ಸುಮಾರು 85 ವರುಷಗಳ ಹಿಂದಿನಿಂದಲೂ ಕೊಡುಗೆ ಇತ್ತವರು. ಅವರು ಬರೆದ 49 ಮಕ್ಕಳ ನೀತಿಕತೆಗಳು ಈ ಸಂಕಲನದಲ್ಲಿವೆ. ತೆನಾಲಿ ರಾಮಕೃಷ್ಣನ ವಿಚಾರವಾಗಿ ಜನಜನಿತವಾಗಿರುವ ಒಂದು ದಂತಕಥೆಯನ್ನು ಆಧರಿಸಿದ “ವಿಚಿತ್ರ ಶಿಕ್ಷೆ” ಎಂಬ ಮಕ್ಕಳ ನಾಟಕವೂ ಇದರಲ್ಲಿದೆ.

ಕಾರ್ಯೋತ್ತಮರು

ತಾನು ಕೈಗೆತ್ತಿದ ಕಾರ್ಯವು ಯಶಸ್ವಿಯಾಗಬೇಕೆಂಬುದು ಎಲ್ಲರ ಅಪೇಕ್ಷೆ. ಹೊಸದಾದ ಕೆಲಸವನ್ನು ಕೈಗೆತ್ತಿಕೊಳ್ಳುವಾಗ ಹಿರಿಯರ ಶುಭಾಶೀರ್ವಾದ ಬೇಡುವುದು, ಗಣಪತಿ ಹವನ ಅಥವಾ ಇನ್ನಿತರ ಪೂಜೆಗಳ ಮೂಲಕ ಭಗವಂತನಲ್ಲಿ ಕಾರ್ಯಕ್ರಮದ ಯಶಸ್ಸಿಗಾಗಿ ಪ್ರಾರ್ಥನೆ ಮಾಡುವುದು ಭಾರತೀಯರ ಸಂಸ್ಕಾರ. ಏನಿಲ್ಲೆಂದರೂ ದೀಪವನ್ನಾದರೂ ಹಚ್ಚಿಟ್ಟು ಭಗವದನುಗ್ರಹ ಬೇಡುತ್ತೇವೆ.

Image

ಬ್ರೆಡ್ ಆಲೂಗೆಡ್ಡೆ ರೋಲ್ಸ್

Image

ಬೇಯಿಸಿ ಮಸೆದ ಆಲೂಗೆಡ್ಡೆ (ಬಟಾಟೆ), ಬಟಾಣಿ, ಜೀರಿಗೆ, ಮೆಣಸಿನ ಹುಡಿ, ಆಮ್ ಚೂರು ಹುಡಿ, ಹಸಿರು ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ, ಉಪ್ಪು ಇವೆಲ್ಲವನ್ನೂ ಚೆನ್ನಾಗಿ ಬೆರೆಸಿ. ಬ್ರೆಡ್ ಹಾಳೆಗಳ (ಸ್ಲೈಸ್) ಮೇಲೆ ಸ್ವಲ್ಪ ನೀರು ಚಿಮುಕಿಸಿ ಎರಡು ಅಂಗೈಗಳ ಮಧ್ಯೆ ಇರಿಸಿ ಅದುಮಿರಿ. ತಯಾರಿಸಿದ ಬಟಾಟೆ ಮಿಶ್ರಣವನ್ನು ಬ್ರೆಡ್ ಹಾಳೆಯ ಒಂದು ಬದಿಯಲ್ಲಿ ಉದ್ದಕ್ಕೆ ಇರಿಸಿ ಚಾಪೆ ಮಡಚುವಂತೆ ಮಡಚಿರಿ.

ಬೇಕಿರುವ ಸಾಮಗ್ರಿ

ಬ್ರೆಡ್ ಹಾಳೆಗಳು ೪, ಬೇಯಿಸಿ ಹುಡಿ ಮಾಡಿದ ಆಲೂಗೆಡ್ಡೆ ೧ ಕಾಲು ಕಪ್, ಬೇಯಿಸಿದ ಹಸಿ ಬಟಾಣಿ ಕಾಲು ಕಪ್, ಜೀರಿಗೆ ಕಾಲು ಚಮಚ, ಮೆಣಸಿನ ಹುಡಿ ಅರ್ಧ ಚಮಚ, ಆಮ್ ಚೂರ್ ಹುಡಿ ಅರ್ಧ ಚಮಚ, ಸಣ್ಣಗೆ ಹೆಚ್ಚಿದ ಹಸಿರುಮೆಣಸಿನ ಕಾಯಿ ೧ ಚಮಚ, ಹೆಚ್ಚಿದ ಕೊತ್ತಂಬರಿ ಸೊಪ್ಪು ೧ ಚಮಚ, ಶುಂಠಿ ತುರಿ ೧ ಚಮಚ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

 

ಸೊಳ್ಳೆ ಕಡಿತದಿಂದ ಬೇಸತ್ತು ಹೋಗಿದ್ದೀರಾ?

ಮಳೆಗಾಲ ಪ್ರಾರಂಭವಾಗಿ ಬರೋಬರಿ ಒಂದು ತಿಂಗಳಾಗುತ್ತಾ ಬಂತು. ಬೇಸಿಗೆ ಕಾಲಕ್ಕಿಂತಲೂ ಮಳೆಗಾಲದ ಸಮಯದಲ್ಲಿ ಸೊಳ್ಳೆಗಳ ಕಾಟ ಬಹಳ. ಈ ಸೊಳ್ಳೆಗಳ ಕಡಿತದಿಂದ ಮಲೇರಿಯಾ, ಡೆಂಗ್ಯೂ ಮೊದಲಾದ ಕಾಯಿಲೆಗಳು ಬರುವ ಸಾಧ್ಯತೆ ಅಧಿಕ. ಸೊಳ್ಳೆಗಳ ಕಾಟವನ್ನು ತಪ್ಪಿಸಲು ನಾವು ರಾಸಾಯನಿಕ ವಸ್ತುಗಳಿಂದ ತಯಾರಿಸಿದ ವಿಕರ್ಷಕಗಳನ್ನು ಬಳಸುತ್ತೇವೆ.

Image

ದ್ವಿದಳ ಧಾನ್ಯ ಉತ್ಪಾದನೆ: ಅಗ್ರಸ್ಥಾನದ ಗುರಿ ಸಾಧನೆಯಾಗಲಿ

ರಾಜ್ಯದಲ್ಲಿ ಈ ವರ್ಷ - ಗರಿಷ್ಟ ಗರಿಷ್ಠ ಪ್ರಮಾಣದಲ್ಲಿ ಪ್ರಮಾಣದಲ್ಲಿ ದ್ವಿದಳ ದ್ವಿದಳ ಧಾನ್ಯಗಳನ್ನು, ಅದರಲ್ಲೂ ವಿಶೇಷವಾಗಿ ತೊಗರಿಯನ್ನು ಬೆಳೆಯುವ ಮೂಲಕ ದೇಶದಲ್ಲಿ ದೇಶದಲ್ಲಿ ಆಗ್ರಸ್ಥಾನಕ್ಕೇರಲು ಗುರಿಯನ್ನು ಹಾಕಿಕೊಳ್ಳಲಾಗಿದೆ. ದೇಶದಲ್ಲಿ ಪ್ರಸ್ತುತ ಮಹಾರಾಷ್ಟ್ರವು ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ಮುಂದಿದೆ.

Image