ವಿಧ: Basic page
December 27, 2006
೨೩ ನೇ ಡಿಸೆಂಬರ್, ೨೦೦೬, ಶನಿವಾರ, ಮೈಸೂರು ಅಸೋಸಿಯೇಷನ್ ಸಭಾಂಗಣ, ಮಾಟುಂಗದಲ್ಲಿ ಕನ್ನಡ ಪುಸ್ತಕಮಾರಾಟ ಮಳಿಗೆ ಉದ್ಘಾಟನೆ ಸಮಾರಂಭ ಎರ್ಪಟ್ಟಿತ್ತು. ಮೈಸೂರ್ ಅಸೋಸಿಯೇಷನ್ ನ ಪದಾಧಿಕಾರಿಗಳಾದ ಡಾ. ಶ್ರೀನಿವಾಸ್ ಮತ್ತು ಶ್ರೀ ಮಂಜುನಾಥ್ ಅತಿಥಿಗಳನ್ನು ಸ್ವಾಗತಿಸಿದರು. ಮೊದಲು ಶ್ರೀ. ಹಂಸಲೇಖ, ದೇಸಿ ಚಿಂತಕ, ಹಾಗೂ ಚಲನಚಿತ್ರ ಸಂಗೀತ ನಿರ್ದೇಶಕ,ಕನ್ನಡ ಪುಸ್ತಕ ಮಾರಾಟ ಮಳಿಗೆ ಉದ್ಘಾಟನೆಯನ್ನು ಮಾಡಿದರು. ನಂತರ ಮೊದಲನೆಯ ಮಹಡಿಯಲ್ಲಿ ಹವಾನಿಯಂತ್ರಿತ ಸಭಾಗೃಹದಲ್ಲಿ ಮುಂದಿನ ಕಾರ್ಯಕ್ರಮಗಳು…
ವಿಧ: ಬ್ಲಾಗ್ ಬರಹ
December 27, 2006
ನನ್ನ ಹುಚ್ಚು ಮನಸ್ಸಿನ ಭಾವನೆಗಳನ್ನು ಶಬ್ದಗಳಲ್ಲಿ ಪೋಣಿಸುವ ಪ್ರಯತ್ನ ಮಾಡುತ್ತಿರುವೆನು. ಈ ಚೊಚ್ಚಲ ಪ್ರಯತ್ನದಲ್ಲಿ ತಪ್ಪುಗಳಿದ್ದರೆ ತಿದ್ದಿ ಆಶೀರ್ವದಿಸಬೇಕಾಗಿ ವಿನಂತಿ,
ಭಾರವಾಯಿತು ಹ್ರುದಯ, ಹಾರಿಹೋಯಿತು ನಿದ್ದೆ,
ನಲ್ಲೆ ನೀನೇಕೆ ಈ ಮನವ ಗೆದ್ದೆ??
ಮಾತು ಮುಖ್ಯವಂತೆ ಸಂಭಾಷಣೆಗೆ,
ನೀ ಕಣ್ಣಲ್ಲೇ ಎಲ್ಲ ಮುಗಿಸಿ ಎದ್ದೆ
ವಿಧ: Basic page
December 26, 2006
(....ಭಾಗ ೧ ರಿಂದ ಮುಂದುವರೆದಿದೆ...)
ಸ್ಥಳ 2: ಕನ್ನಡ ವಿಶ್ವವಿದ್ಯಾಲಯದ ಆವರಣ:-------------------------------------------------------------------------------------------------------(ಒಬ್ಬ ವ್ಯಕ್ತಿ ಕೈಯಲ್ಲೇನೋ ಹಿಡಿದು ನಡೆದು ಬರುತ್ತಿದ್ದಾನೆ. ಇನ್ನೊಬ್ಬ ಅವನನ್ನು ಕಂಡು ಮಾತನಾಡಿಸಲು ಕೂಗುತ್ತಾನೆ)
ಎರಡನೇ ವ್ಯಕ್ತಿ (ಎ.ವ್ಯ): ಏನ್ ಮಗಾ, ಯಾವ್ ಕಡೆ ಬೀಟ್ಸು? ಅದೇನದು ಕೈಲಿ?ಮೊದಲ ವ್ಯಕ್ತಿ (ಮೊ.ವ್ಯ): ಕನ್ನಡ ರಾಜ್ಯೋತ್ಸವ ಬಂತಲ್ಲ, ಅದರ ಆಹ್ವಾನ ಪತ್ರಿಕೆ.…
ವಿಧ: ಬ್ಲಾಗ್ ಬರಹ
December 25, 2006
ನಾಣಿ ಸ್ನನಮಾಡಿ ಬಂದ, ಎಂದಿನ ಅಭ್ಯಾಸದಂತೆ
"ಗಂಗೇಚ ಯಮುನೆಚೈವ ಗೋದಾವರಿ ಸರಸ್ವತಿ
ನರ್ಮದೆ ಸಿಂಧು ಕಾವೇರಿ ಜಲೈಸ್ಮಿತ್ ಸನ್ನಿದಂ ಕುರು ||" ಎಂದು ಹೇಳತೊಡಗಿದ .....
ಇದ್ದಕ್ಕೆ ಇದ್ದ ಹಾಗೆ, ಆರ್ಕಿಮಿಡಿಸ್ ಗೆ ಬಾತ್ ಟಬ್ ನಲ್ಲಿ ಹೊಳೆದ ಹಾಗೆ, ತಾನು ಇರುವುದು ಇಗ್ಲಂಡ್ , ಇಲ್ಲಿ ಗಂಗೆ ಬರಲು ಹೇಗೆ ಸಾದ್ಯ ? ಅಥ್ವ ಕಾವೇರಿ ಬರಲು ಸಾದ್ಯವೇ ? ಎಂಬ ಪ್ರಶ್ನೆಗಳು ಬಂದರು, ಅಭ್ಯಾಸ ಬಿಡುವಂತಿಲ್ಲ ಅಂತ ಹೇಳಿ ಮುಗಿಸಿದ.
**
ತಾನು ಆಫೀಸ್ ಗೆ ಹೋಗಲು ಬುಕ್ ಮಾಡಿದ್ದ ಟ್ಯಾಕ್ಸಿ ಬಂದು ನಿಂತಿತ್ತು,…
ವಿಧ: ಬ್ಲಾಗ್ ಬರಹ
December 25, 2006
ಸಂಸ್ಕೃತ-ಕನ್ನಡ ಉಭಯಭಾಷಾ ಕೋವಿದರಾದ ನನ್ನ ಅಜ್ಜ ಬೀರೂರು ಚಿದಂಬರ ಜೋಯಿಸರು ವನಸುಮದಂತೆ ಬಾಳಿ-ಬದುಕಿದವರು. ಕಾಶೀಪಂಡಿತಸಭಾದಿಂದ "ಸಂಸ್ಕೃತಕವಿಕಂಠೀರವ" ಎಂಬ ಬಿರುದನ್ನೂ, ಕರ್ನಾಟಕ ಸರ್ಕಾರ-ಗಾಂಧೀ ಸ್ಮಾರಕ ನಿಧಿಯ ವತಿಯಿಂದ ಸುವರ್ಣ ಪದಕವನ್ನೂ ಗಳಿಸಿದ್ದ ಅಜ್ಜನ ಲೇಖನಿಯಿಂದ ಹಲವಾರು ಅತ್ಯುತ್ತಮ ಕೀರ್ತನೆ,ಭಜನೆ,ಕಾವ್ಯಗಳು ಹೊರಹೊಮ್ಮಿವೆ. ಇವರ ಆಯ್ದ ಭಜನೆ-ಕೀರ್ತನೆಗಳ ಸಂಕಲನವಾದ "ಭಜನಮಣಿಮಾಲಾ" ಈಗಾಗಲೇ ನಾಲ್ಕು ಮುದ್ರಣಗಳನ್ನು ಕಂಡಿದೆ. ಇದರಿಂದ ಆಯ್ದ ಗಣಪತಿಯನ್ನು ಸ್ತುತಿಸುವ ಕೀರ್ತನೆ "…
ವಿಧ: ಬ್ಲಾಗ್ ಬರಹ
December 25, 2006
ಬಣ್ಣದ ಬಟ್ಟಲು
------------------
ಕೈಕಟ್ಟಿ ನಿಂತರಹ್ಯಾಗ
ಭುಮಿಮ್ಯಾಗೆ ?
ಕೈತೊಳೆವೆ ಬಾರಾ
ಮಣ್ಣಾದ್ರು ಕರವು !
ಮಣ್ಣ ಇಟ್ಟಿದ್ರೆ ಇಟ್ಟಾಂಗ
ನೂರು ಕಾಲ
ಇರುವುದು ಇದ್ದಾಂಗ
ಒಣಗೋದು ಒಂದು ಬಿಟ್ಟು
ಕಾಲಚಕ್ರದೊಳು
ಈ ಮಣ್ಣನಿಟ್ಟು
ತಿರುಗಿ ಚಕ್ರ ನಿಲ್ಲೋಕ್ ಮೊದಲು
ಕೈಯಾಗೆ ನೋಡು ಒಂದು ಬಟ್ಟಲು
ಬಂದ ಬಟ್ಲಿಗೆ ನೋಡು
ಬಣ್ಣ ಬಣ್ಣದ ಪ್ರೋಕ್ಷಣೆ
ಆಗ ನೋಡು
ಜಗತ್ತಿನ ಗಲ್ಲದ ಮ್ಯಾಲ್ ಬೆರಳು!!!
ವಿಧ: ಬ್ಲಾಗ್ ಬರಹ
December 24, 2006
ಕನ್ನಡ ದೇಸಿ ಸಂಸ್ಕೃತಿ ಮತ್ತು ಅಧುನಿಕತೆಯನ್ನು ಸಮನ್ವಯ ಮಾದಿಕೊಂಡರೆ ಮಾತ್ರ ಇಂದು ನಾವು ಪ್ರಸ್ತುತ ಆಗುತ್ತೇವೆ. ಇಲ್ಲವಾದರೆ ಬೇರಿಲ್ಲದ ಗಿಡದಂತಾಗುತ್ತೇವೆ. ನಮ್ಮ ಪರಂಪರೆಯಲ್ಲಿ ಅಮೂಲ್ಯ ವಿಷಯಗಳಿವೆ. ಆದರೆ ನಾವು ಅವನ್ನು ಅಸಡ್ಯೆಯಿಂದ ನೋಡುತ್ತೇವೆ.
ಸಾವಿರಾರು ವರ್ಷಗಳಿಂದ ಹರಿದು ಬಂದ ಜ್ಞಾನಾಮೃತವನ್ನು ಸರಿಯಾದ ರೀತಿಯಲ್ಲಿ ಅರ್ಥೈಸಬೇಕು.ಅದು ಅನುಭವದ ಪರಿಪಾಕದಲ್ಲಿ ಬೆಂದು ಬಂದದ್ದು.ಅದನ್ನು ಪ್ರಯೋಗಿಸಿ ನೋಡಿದ ಮೇಲೆ ಅದನ್ನು ಬಳಕೆಯಲ್ಲಿ ತಂದಿರಲಾಗುತ್ತದೆ.ಆದ್ದರಿಂದ ಅದನ್ನು ಪೂರ್ಣ…
ವಿಧ: Basic page
December 24, 2006
ಎಲ್ಲಾ ಮೊಬೈಲಿಗೂ ಒಂದೇ ಚಾರ್ಜರ್ ಯಾಕಿಲ್ಲ? ಮೊಬೈಲ್ ಹ್ಯಾಂಡ್‌ಸೆಟ್‌ಗಳ ಚಾರ್ಜರ್ ಒಂದು ಕಂಪೆನಿಯದಕ್ಕೆ ಇನ್ನೊಂದು ಹೋದಿಕೆಯಾಗುವುದನ್ನು ನೋಡಿದ್ದೀರಾ? ಒಂದೇ ಕಂಪೆನಿಯ ಒಂದು ಹ್ಯಾಂಡ್‌ಸೆಟ್‌ಗೆ ಇನ್ನೊಂದರ ಚಾರ್ಜರ್ ಹೊಂದಿಕೆಯಾಗದೇ ಇರುವುದೂ ಇದೆ.ವಸ್ತುಗಳನ್ನು ತಯಾರಿಸುವಾಗ ಒಂದು ನಿಗದಿತ ಮಾನಕಕ್ಕೆ ಸರಿಯಾಗಿ ಪ್ರತಿಯೋರ್ವ ತಯಾರಕನೂ ತಯಾರಿಸಬೇಕೆಂಬ ಅಲಿಖಿತ ಒಪ್ಪಂದ ಇರುವಾಗ ಈ ತರಹೇವಾರೀ ಚಾರ್ಜರ್‌ಗಳನ್ನು ಯಾಕಾದರೂ ತಯಾರಿಸುತ್ತಾರೊ?ಮಾರುಕಟ್ಟೆಯಲ್ಲಿ ಸಿಗುವ ವಿದ್ಯುತ್ ಪ್ಲಗ್,…
ವಿಧ: ಬ್ಲಾಗ್ ಬರಹ
December 24, 2006
- ಹೆಚ್. ಬಾಲಕೃಷ್ಣ ಮಲ್ಯ
(ಇದು 'ಹೊಸ ದಿಗಂತ' ಪತ್ರಿಕೆಯಲ್ಲಿ 2003ರ ಡಿಸೆಂಬರ್ ನಲ್ಲಿ ಪ್ರಕಟಗೊಂಡ ಲೇಖನ)
ಮತ್ತೆ ಕ್ರಿಸ್‌ಮಸ್ ಬ೦ದಿದೆ. ಭಾರತದಲ್ಲೂ ಕ್ರೈಸ್ತ ಮತೀಯರು ಯೇಸು ಕ್ರಿಸ್ತನ ಹುಟ್ಟು ಹಬ್ಬವನ್ನು ಸಡಗರದಿ೦ದ ಆಚರಿಸುತ್ತಾರೆ. ಯೇಸು ಕ್ರಿಸ್ತ ಓರ್ವ ಮಹಾಪುರುಷ ಎನ್ನುವುದರ ಬಗ್ಗೆ ಹಿ೦ದೂಗಳಿಗೆ ಯಾವುದೇ ತಕರಾರಿಲ್ಲ. ಜನ ಕಲ್ಯಾಣದಲ್ಲಿ ತೊಡಗಿಸಿಕೊ೦ಡ ಮಹಾಪುರುಷರು ಯಾವುದೇ ದೇಶದಲ್ಲಿ ಹುಟ್ಟಿದರೂ ಅವರನ್ನು ಗೌರವಿಸುವ ವಿಶಾಲ ಹೃದಯ ಹಿ೦ದೂಗಳಲ್ಲಿದೆ. ಯಾವುದೇ ಒಳ್ಳೆಯ ವಿಚಾರ…
ವಿಧ: ಬ್ಲಾಗ್ ಬರಹ
December 24, 2006
ನಾಕು ಸಾಲಿನ ಕವಿತೆ,
ಬರೆದರಾಯಿತೆ ಹೇಳ ?
ಪದಗಳಿಗೆ ಬೇಕಿಷ್ಟು ಭಾವ,
ಭಾವಕ್ಕೆ ಒಂದಿಷ್ಟು ರಾಗ
ಈಜಿದರಾಯಿತೆ ಹೇಳ
ಒಲವ ಕಡಲಿನಲಿ ?
ಬೇಡವೆ ಒಂದೆರಡು ಅಲೆಯು
ನಿನ್ನ ಇರುವಿಕೆಗೆ ಇದುವೆ ಸಾಕಲ್ಲವೆ!!!
ಬೆಳದರಾಯಿತೆ ಹೇಳ
ಹೆಮ್ಮರವಾಗಿ ?
ಬೇಡವೆ ನಿನ್ನವರಿಗೆ ನೆರಳು
ನಿನ್ನ ಸಾಧನೆಗೆ ಇದುವೆ ಸಾಕಲ್ಲವೆ!!