ವಿಧ: ಬ್ಲಾಗ್ ಬರಹ
December 12, 2014
ಒಂದು ವಾರದ ನಂತರ ಸ್ಟೇಷನ್ ನಿಂದ ಅಪ್ಪನ ಮೊಬೈಲ್ ಗೆ ಕರೆ ಬಂದಿದ್ದರಿಂದ ಅಪ್ಪ ನನ್ನನ್ನು ಸ್ಟೇಷನ್ ಗೆ ಕರೆದುಕೊಂಡು ಹೋದರು. ಕರೆದ ಕೂಡಲೇ ಬಂದಿದ್ದಕ್ಕೆ ಇನ್ಸ್ಪೆಕ್ಟರ್ ಅಪ್ಪನಿಗೆ ಧನ್ಯವಾದಗಳನ್ನು ತಿಳಿಸಿ ನನ್ನನ್ನು ವಿಚಾರಣಾ ಕೊಠಡಿಗೆ ಕರೆದುಕೊಂಡು ಹೋದರು. ನನ್ನ ಎದುರಿನಲ್ಲಿ ಕುಳಿತ ಇನ್ಸ್ಪೆಕ್ಟರ್ ಬ್ರಹ್ಮಾವರ್ ನನ್ನ ಕಡೆ ನೋಡಿ... ಮಿ. ಅರ್ಜುನ್ ನಾನು ಮೊದಲೇ ಹೇಳಿದ ಹಾಗೆ ನಿಮ್ಮ ಮನಸಿಗೆ ನೋವುಂಟು ಮಾಡುವ ಯಾವುದೇ ಉದ್ದೇಶ ನಮಗಿಲ್ಲ, ಆದರೆ ನಮ್ಮ ಕೆಲಸ ನಾವು ಮಾಡಬೇಕಾಗಿರುವುದರಿಂದ ಈ…
ವಿಧ: ಚರ್ಚೆಯ ವಿಷಯ
December 12, 2014
ನಾನು ಮೊನ್ನೆ ನಮ್ಮ ಅಪ್ಪನ ಮನೆ ವಾರ್ಷಿಕ ದೇವತಾ ಕಾರ್ಯಕ್ರಮಕ್ಕೆ ಹೋಗಿದ್ದೆ.ಪ್ರತೀ ವರ್ಷ ನಾವು ಈ ದಿನ ದೇವರಿಗೆ ಕಾಯಿಡುವುದು ವಾಡಿಕೆ.(ಹವ್ಯಕ ಹೆಣ್ಣು ಮಕ್ಕಳು ಮದುವೆಯಾದ ನಂತರ ಪ್ರತೀ ವರ್ಷ ದೀಪಾವಳಿಯ ಮರುದಿನ ತವರುಮನೆಯ ದೇವರಿಗೆ ಕಾಯಿ ಇಡುವುದು ವಾಡಿಕೆ)
ನನ್ನೆಜಮಾನರಿಗೆ ಕೆಲವು ಸಂಪ್ರದಾಯಗಳು ಮನಸ್ಸಿನಲ್ಲಿ ಉಳಿಯುವುದಿಲ್ಲ.ಹಾಗಾಗಿ ನಾನು ಅವರಿಗೆ ಮೊದಲು ವೀಳ್ಯದೆಲೆ ಇರಿಸಿಕೊಳ್ಳಿ, ಹಾಗೆ.. ಹೀಗೆ ಅಂತ ಹೇಳುತ್ತಿದ್ದೆ.ಅದೇ ವೇಳೆಗೆ ಆ ಊರಿನ ದೇವಸ್ಥಾನದ ಪೂಜಾರಿ ಬಂದರು.ಬಂದವರೇ …
ವಿಧ: ಬ್ಲಾಗ್ ಬರಹ
December 11, 2014
ಅರ್ಜುನ್....ಅರ್ಜುನ್....
ಯಾರು? ಯಾರದು ಎಂದು ಆಚೆ ಬಂದು ನೋಡಿದರೆ ಮನೆಯ ಬಾಗಿಲಿನ ಮುಂದೆ ಪೋಲಿಸ್ ಪೇದೆ ನಿಂತಿದ್ದ. ನಾನು ಸ್ವಲ್ಪ ಗಾಭರಿಯಿಂದಲೇ ಹೇಳಿ.... ನಾನೇ ಅರ್ಜುನ್... ಏನಾಗಬೇಕಿತ್ತು? ಅಷ್ಟರಲ್ಲೇ ಹಿಂದಿನಿಂದ ಅಪ್ಪ ಅಮ್ಮ ಕೂಡ ಬಂದು ಪೇದೆಯನ್ನು ನೋಡಿ ಅವರೂ ಗಾಭರಿಯಿಂದ ಯಾಕೆ ಸರ್? ನನ್ನ ಮಗನನ್ನು ಕೇಳುತ್ತಿದ್ದೀರಿ? ಯಾಕೆ ಏನಾಯ್ತು ಎಂದು ನನ್ನ ಕಡೆ ಪ್ರಶ್ನಾರ್ಥಕವಾಗಿ ನೋಡಿದರು.... ನಾನು ಏನೂ ಗೊತ್ತಿಲ್ಲ ಎಂಬಂತೆ ಸನ್ನೆ ಮಾಡಿ ಉತ್ತರಕ್ಕಾಗಿ ಪೇದೆಯ ಕಡೆ ತಿರುಗಿದೆ.
ನಮ್ಮ…
ವಿಧ: ಬ್ಲಾಗ್ ಬರಹ
December 09, 2014
ಬಣ್ಣದ ವೇಷಗಳವು ವೇಷ ಅವರ ಬದುಕು
ಹಾಲುಗಲ್ಲದ ಹಸುಳೆಗಳು
ಮುಖವೆಲ್ಲ ಚಿತ್ತಾರಗಳ ರಂಗೋಲಿ
ಮನೆಯಿಂದ ಮನೆಗೆ ದಿನವೆಲ್ಲ ಅಲೆದಾಟ
ಗೇಣು ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ
ಆದರೂ ತುಂಬದ ತುತ್ತಿನ ಚೀಲ
ಮಾನವಂತ ಬದುಕಿಗೆ ಭರವಸೆಯಿಲ್ಲ
ಸಾಗಿದೆ ನಿರಂತರ ನಿರ್ವಿಕಾರ ಬದುಕು
ಬಾಲ್ಯದ ಬೆರಗಿನ ಯುವ ಚೇತನಗಳು
ಮನ ನೂರೆಂಟು ಕನಸುಗಳ ಆಗರ
ಹುಟ್ಟುತ್ತ ಬೆಳೆಯುತ್ತ ನೋಯುತ್ತ ನಲಿಯುತ್ತ
ಕಠೋರ ವಾಸ್ತವಕೆ ಕರಗಿ ಇಲ್ಲವಾಗುತ್ತ
ಸಾಗಿ ಬಂದಿದೆ ಬದುಕು ಅಂದಿನಿಂದ
ನೊಂದ ಅಸಂಗತ ಬದುಕಿನ ಪುನರಾವರ್ತನ
…
ವಿಧ: ರುಚಿ
December 09, 2014
ಈ ಮೇಲೆ ಬರೆದಿರುವ ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿ, ಕಲೆಸಿ/ mix ಮಾಡಿ.
ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಖಾದ ನಂತರ, mix ಅನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು, ಕಾಯಿಸಿ.
ಕೆಂಪಗೆ ಕರಿದ, ಬಿಸಿ ಬಿಸಿ ವಡೆ ರೆಡಿ.
ವಿಧ: ಬ್ಲಾಗ್ ಬರಹ
December 08, 2014
'ಮುಂಬಯಿಯ ಕನ್ನಡ ರಂಗಭೂಮಿ-ತೌಲನಿಕ ಅಧ್ಯಯನ'- ಮುಂಬಯಿ ರಂಗಭೂಮಿಯ-ಭರತ್ ಕುಮಾರ ಪೊಲಿಪುರವರ ಮಹಾಪ್ರಬಂಧದ ಪುಸ್ತಕವನ್ನು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಇತ್ತೀಚಿಗೆ ಪ್ರಕಟಿಸಿದೆ. ಪೋಲಿಪುರವರಿಗೆ ತಮ್ಮ ಮೌಲಿಕ ಕೃತಿಗೆ ಡಾ. ಪದವಿಯನ್ನು ಪ್ರದಾನ ಮಾದಲಾಯಿತು. ಭಾರತೀಯ ರಂಗಭೂಮಿಯ ಇತಿಹಾಸ, ನಡೆದುಬಂದ ರೀತಿ ಮೊದಲಾದವುಗಳು ಬಹಳ ಸುಂದರವಾಗಿ ಮತ್ತು ವ್ಯಾಪಕವಾಗಿ ಚಿತ್ರಿಸಲ್ಪಟ್ಟು, ಹೊಸ ಸಂಶೋಧಕರಿಗೆ ಒಳನೋಟಗಳನ್ನು ಒದಗಿಸುವಲ್ಲಿ ಈ ಮಹಾಪ್ರಬಂಧ ಸಹಕಾರಿಯಾಗಿದೆ, ಹಾಗು ಮಹತ್ವದ …
ವಿಧ: ಬ್ಲಾಗ್ ಬರಹ
December 07, 2014
ಧಾರವಾಡದ "ಕಲ್ಲು" ಗೊತ್ತಿದೆಯಲ್ಲಾ.. (ಪೇಡಾ ಆದರೂ ಪರವಾಗಿಲ್ಲ) ಅದನ್ನು ಎತ್ತಿ ಕನ್ನಡದ ಯಾವುದೇ ಟಿ.ವಿ ಚಾನಲ್‌ನ ಕಛೇರಿಗೆ ಎಸೆದರು ಅಂತಿಟ್ಟುಕೊಳ್ಳಿ...
ಅದು ಬೀಳುವುದು ಜ್ಯೋತಿಷಿಯ ತಲೆಯಮೇಲೇ.. :)
ಬೆಳ್ಳಂಬೆಳಗ್ಗೆ ಟಿವಿ ಆನ್ ಮಾಡಿದರೆ ಕಣ್ಣಿಗೆ ಬೀಳುವುದೇ ಅವರು- ಹಳೇ ಕಾಲದ ಹೆಂಗಸರ ಹಾಗೆ-ಜರಿ ಸೀರೆ, ಮುಖತುಂಬಾ ಮೇಕಪ್, ಮೇಲೊಂದು ಬೊಟ್ಟು, ಕೈ ಕುತ್ತಿಗೆ ತುಂಬಾ ಚಿನ್ನದ ಬಳೆ ಸರ...ಬಾಯಿ ಬಿಟ್ಟರೆ ಶನಿ ರಾಹು ಕೇತು ಎಂದು ಭಯ ಬೀಳಿಸುವರು.
ರಾತ್ರಿ ಸಹ ಅವರದ್ದೇ ಸುದ್ದಿಯೊಂದಿಗೆ ಟಿವಿ…
ವಿಧ: ಬ್ಲಾಗ್ ಬರಹ
December 06, 2014
ರಿಮೋಟ್ ಕೈಯಲ್ಲಿ ಹಿಡಿದು ಚಾನೆಲ್ ಬದಲಿಸುತ್ತಾ ಕುಳಿತಿದ್ದೆ.
ಥಟ್ಟನೆ ಅವನು ಬಂದು ನನ್ನ ಮಡಿಲಲ್ಲಿ ಮಲಗಿದ.
ನೀನ್ಯಾರು? ಎದ್ದೇಳು...
ನಿನಗೆ ಗೊತ್ತಿಲ್ವಾ ನಾನ್ಯಾರೆಂದು? ಕಳ್ಳಿ!
ನೀನ್ಯಾರೆಂದು ನನಗೆ ಗೊತ್ತಿಲ್ಲ... ಮನೆಯೊಳಗೆ ಹೇಗೆ ಬಂದೆ?
ಸೆಕ್ಯೂರಿಟಿ....ನಾ ಕೂಗತೊಡಗಿದೆ.
ಪ್ರಿಯೇ...ಗಾಬರಿಯಾಗಬೇಡ...ನಾನ್ಯಾರೆಂದು ಗೊತ್ತಿಲ್ಲವೇ?
ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳು ನೋಡೋಣ...ಮೆಲ್ಲನೆ ನನ್ನ ಗಲ್ಲ ಹಿಂಡಿದ..
ಮೈ ಬೆವರುತ್ತಿತ್ತು... ನನಗೆ ಗೊತ್ತಿಲ್ಲ...
ಅಂತ ಹೇಳಿದೆ ತಾನೇ? ನಡಿ…
ವಿಧ: ಬ್ಲಾಗ್ ಬರಹ
December 06, 2014
ರಿಮೋಟ್ ಕೈಯಲ್ಲಿ ಹಿಡಿದು ಚಾನೆಲ್ ಬದಲಿಸುತ್ತಾ ಕುಳಿತಿದ್ದೆ.
ಥಟ್ಟನೆ ಅವನು ಬಂದು ನನ್ನ ಮಡಿಲಲ್ಲಿ ಮಲಗಿದ.
ನೀನ್ಯಾರು? ಎದ್ದೇಳು...
ನಿನಗೆ ಗೊತ್ತಿಲ್ವಾ ನಾನ್ಯಾರೆಂದು? ಕಳ್ಳಿ!
ನೀನ್ಯಾರೆಂದು ನನಗೆ ಗೊತ್ತಿಲ್ಲ... ಮನೆಯೊಳಗೆ ಹೇಗೆ ಬಂದೆ?
ಸೆಕ್ಯೂರಿಟಿ....ನಾ ಕೂಗತೊಡಗಿದೆ.
ಪ್ರಿಯೇ...ಗಾಬರಿಯಾಗಬೇಡ...ನಾನ್ಯಾರೆಂದು ಗೊತ್ತಿಲ್ಲವೇ?
ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳು ನೋಡೋಣ...ಮೆಲ್ಲನೆ ನನ್ನ ಗಲ್ಲ ಹಿಂಡಿದ..
ಮೈ ಬೆವರುತ್ತಿತ್ತು... ನನಗೆ ಗೊತ್ತಿಲ್ಲ...
ಅಂತ ಹೇಳಿದೆ ತಾನೇ? ನಡಿ…
ವಿಧ: ಬ್ಲಾಗ್ ಬರಹ
December 05, 2014
ಕಟ್ಟಿದರೊಂದು
ಸುಂದರ, ಸ್ಮಾರಕವ
ಶ್ರೀಮಂತ ನಗರದ
ಪುರಜನರು
ತಮ್ಮನುದ್ಧರಿಸಿದ
ಕವಿಯ ಸ್ಮರಣಾರ್ಥ - - -
ಜೋಪಾನ
ಮಾಡಿದರು
ಖಾಲಿ ಹಾಳೆಯಲಿ
ದಾಖಲಿಸಿದ
ಅವನ ಖಾಲಿತನವ - - -
ಆಗಬಹುದಿತ್ತವ
ಸುದ್ದಿಯಾದವರ
ನಡುವೆ ರಾರಾಜಿತ.
ಆದರೀ ಕ್ರೂರ ಜಗದ
ಕಣ್ಣಿಗೆ ಅವನೊಬ್ಬ
ಪರಾಜಿತ - - -
ಮುರುಕು ಜೋಪಡಿ
ಮಿಣುಕು ಹಣತೆ ಜೋಡಿ
ಮೋಡದಾಚೆಯ
ಮಿನುಗು ನಕ್ಷತ್ರದತ್ತ
ಮುಖಮಾಡಿ ತನ್ನೆಲ್ಲ
ನೋವು ಹತಾಶೆ
ಗಳ ಭಟ್ಟಿಯಿಳಿಸಿ ,
ಹಸ್ತಪ್ರತಿಗಳಾಗಿಸಿ
ವಾಸ್ತವತೆಯ ವ್ಯಂಗ್ಯ
ಬದುಕಿಗೆ ಬೆನ್ನುಮಾಡಿ
ಹೊರಟವನಿಗೆ …