ಪುಸ್ತಕ ಪರಿಚಯ

ಲೇಖಕರು: Ashwin Rao K P
July 18, 2025
ಕನ್ನಡ ಸಾಹಿತ್ಯದಲ್ಲಿ ಕೆ. ಸತ್ಯನಾರಾಯಣರ ಕಾದಂಬರಿಗಳು ತಮ್ಮ ವಿಶಿಷ್ಟ ಶೈಲಿಯಿಂದಲೇ ಗುರುತಿಸಿಕೊಂಡಿವೆ. ಅವರ ಕಾದಂಬರಿಗಳು ಕೇವಲ ಕಥೆಯನ್ನು ಹೇಳುವುದಕ್ಕಿಂತಲೂ, ಮನುಷ್ಯನ ಜೀವನದ ಆಳವಾದ ಭಾವನೆಗಳನ್ನು, ಸಂಕೀರ್ಣ ಸಂಬಂಧಗಳನ್ನು, ಮತ್ತು ಸಮಾಜದ ವೈರುಧ್ಯಗಳನ್ನು ಸೂಕ್ಷ್ಮವಾಗಿ ಚಿತ್ರಿಸುತ್ತವೆ. ಈ ಕಾದಂಬರಿಯು ಒಬ್ಬ ವೃದ್ಧೆಯ ಕಥೆಯಿಂದ ಆರಂಭವಾಗಿ, ಆಕೆಯ ಜೀವನದ ಕೆಲವು ನೋವಿನ ಕ್ಷಣಗಳ ಜಾಡಿನಿಂದ ಸಮಾಜದ ವಿವಿಧ ಆಯಾಮಗಳನ್ನು ತೆರೆದಿಡುವ ಕಾದಂಬರಿಯಾಗಿ ರೂಪುಗೊಳ್ಳುತ್ತದೆ. ಕಥೆಯ ಸಾರಾಂಶ:…
ಲೇಖಕರು: addoor
July 18, 2025
“ಭೂತದ ಕೋಳಿ” ಕಥಾ ಸಂಕಲನದ ಲೇಖಕರಾದ ರಾಘವೇಂದ್ರ ಬಿ. ರಾವ್ ಅವರು “ಅನು ಬೆಳ್ಳೆ” ಎಂದೇ ಪರಿಚಿತರು. ಕಾರ್ಕಳ ತಾಲೂಕಿನ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರು. ಇವರ ಸಣ್ಣ ಕತೆಗಳು ಉದಯವಾಣಿ, ಪ್ರಜಾವಾಣಿ, ಕನ್ನಡ ಪ್ರಭ, ಸುಧಾ, ತರಂಗ, ಮಯೂರ, ತುಷಾರ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹನ್ನೆರಡು ಸಣ್ಣ ಕಥೆಗಳಿರುವ ಈ ಸಂಕಲನ “ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ” ಪಡೆದಿದೆ. ಅನು ಬೆಳ್ಳೆ ಅವರಿಗೆ ಪಾತ್ರಗಳು ಮತ್ತು ಸಂದರ್ಭ ಸೃಷ್ಟಿಯ ಕಲೆ…
July 17, 2025
‘ಕನ್ನಡ ಪತ್ರಿಕಾ ಲೋಕ’ದ ಎರಡೂ ಮಾಲಿಕೆಗಳನ್ನು ಇತ್ತೀಚೆಗೆ ಓದಿದೆನು. ತುಂಬಾ ಖುಷಿಯಾಯಿತು. ಕನ್ನಡ ನಿಯತಕಾಲಿಕಗಳನ್ನು ನಿಯಮಿತವಾಗಿ ಓದುವ ಓದುಗರಿಗೆ ಇವೆರಡೂ ಪುಸ್ತಕಗಳು ‘ಅಮೂಲ್ಯ ರತ್ನಗಳು’ ಎಂದೇ ಹೇಳಬಹುದು. ಈ ಎರಡೂ ಪುಸ್ತಕಗಳಲ್ಲಿ ಒಟ್ಟು ೧೦೪ ಪತ್ರಿಕೆಗಳ ಬಗ್ಗೆ ಮಾಹಿತಿ ನೀಡಿದ್ದು ಸಂತಸದ ವಿಷಯ. ಪ್ರತಿ ಪತ್ರಿಕೆಯ ಮಾಹಿತಿ ನೀಡುವಾಗ, ಆ ಪತ್ರಿಕೆಯು ಪ್ರಕಟಗೊಳ್ಳುತ್ತಿದ್ದ ಊರು, ಅದರ ಸಂಪಾದಕರು, ಪ್ರಕಾಶಕರು ಮತ್ತು ಅದರ ಮುಖಬೆಲೆ ನೀಡುವುದರ ಜೊತೆಗೆ ಆ ಪತ್ರಿಕೆಯು ಯಾವ ಯಾವ…
ಲೇಖಕರು: Ashwin Rao K P
July 16, 2025
ಥ್ರಿಲ್ಲರ್ ಕಾದಂಬರಿಗಳನ್ನು ಬರೆಯುವಲ್ಲಿ ಸಿದ್ಧ ಹಸ್ತರಾಗಿರುವ ವಾಸುದೇವ್ ಮೂರ್ತಿಯವರ ನೂತನ ಕಾದಂಬರಿ ‘ಹಾವು ಏಣಿ ಆಟ’ ಈ ರೋಚಕ ಕಾದಂಬರಿಯು ಓದಿ ಮುಗಿಸುವ ತನಕ ಓದುಗರನ್ನು ತುದಿಗಾಲಿನಲ್ಲಿ ನಿಲ್ಲಿಸುವಲ್ಲಿ ಸಫಲವಾಗಿದೆ. ಈ ಕಾದಂಬರಿಯ ಬಗ್ಗೆ ಲೇಖಕರಾದ ವಾಸುದೇವ್ ಮೂರ್ತಿಯವರು ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲಿ “ಹಾವು ಏಣಿ ಆಟ ಒಂದು ವಿಶಿಷ್ಟ ಕಥಾವಸ್ತು ಹೊಂದಿರುವ ಕಾದಂಬರಿ. ಕನ್ನಡ ಕಾದಂಬರಿ ಲೋಕದಲ್ಲಿ ಒಂದು ಹೊಸ ಪ್ರಯತ್ನ. ಇದೊಂದು "ಮೆಡಿಕೋ ಲೀಗಲ್ ಥ್ರಿಲ್ಲರ್" ಔಷಧ…
ಲೇಖಕರು: Ashwin Rao K P
July 14, 2025
ಡಾ. ಅರುಣಾ ಯಡಿಯಾಳ್ ಬರೆದ ಎರಡು ಪುಟ್ಟ ಕಾದಂಬರಿಗಳ ಸಂಕಲನವೇ ‘ಮನಸೆಂಬ ಮಾಯಾಮೃಗ’. ೧೮೧ ಪುಟಗಳ ಈ ವಿಶಿಷ್ಟ ಜಂಟಿ ಕಾದಂಬರಿಗೆ ಲೇಖಕಿ ಬರೆದ ಮುನ್ನುಡಿಯ ಎರಡು ಸಾಲುಗಳು ಹೀಗಿವೆ… “ಮನಸ್ಸು ಎಂಬುದೊಂದು ದಟ್ಟ ಕಾನನ. ಅಲ್ಲಿ ವೈವಿಧ್ಯವಾದ ಭಾವ ಜೀವಿಗಳ ವಾಸ. ಕೆಲವೊಮ್ಮೆ ಅದ್ಯಾವುದೋ ವಿಶಿಷ್ಟ ಭಾವನೆ ಮಾಯಾಜಿಂಕೆಯಂತೆ ಮಿಂಚಿ ಮಾಯವಾಗುತ್ತೆ. ಈ ಭಾವನೆಗಳೇ ಅತಿರೇಕವಾಗಿ, ವಿಚಿತ್ರ ರೂಪ ತಾಳಿ, ಮನಸ್ಸೇ ಮಾಯಾಮೃಗವಾಗಿ, ವ್ಯಕ್ತಿಯನ್ನು, ವ್ಯಕ್ತಿತ್ವವನ್ನು, ವಾಸ್ತವಿಕ ಹಾಗು ನೈತಿಕ ನೆಲೆಗಳ…
ಲೇಖಕರು: Ashwin Rao K P
July 11, 2025
ಖ್ಯಾತ ಪತ್ರಕರ್ತ ಲಕ್ಷ್ಮಣ ಕೊಡಸೆ ಅವರ ಆತ್ಮ ಕಥೆ ‘ಪತ್ರಕರ್ತನ ಪಯಣ’ ಇತ್ತೀಚೆಗೆ ಬಿಡುಗಡೆಯಾಗಿದೆ. ಪತ್ರಕರ್ತರಾಗಿ ತಾವು ಕಂಡ, ಅನುಭವಿಸಿದ ಘಟನೆಗಳನ್ನು ಬಹಳ ಸೊಗಸಾಗಿ ನಿರೂಪಿಸಿದ್ದಾರೆ. ಈ ಕೃತಿಯ ಬೆನ್ನುಡಿಯಲ್ಲಿ ಮಹನೀಯರಾದ ಪ್ರೊ. ಓಂಕಾರ ಕಾಕಡೆ ಮತ್ತು ಡಾ. ಬಿ.ಕೆ.ರವಿ ಅವರು ಲಕ್ಷ್ಮಣ ಕೊಡಸೆ ಅವರ ಬಗ್ಗೆ ಅಭಿಪ್ರಾಯಗಳನು ತಿಳಿಸಿದ್ದಾರೆ. “ನಾನು ಅದೆಷ್ಟೋ ಸಲ ನನ್ನಲ್ಲಿಯೇ ಅಂದುಕೊಂಡದ್ದಿದೆ. ಪ್ರತಿಭೆ ಮತ್ತು ಕಠಿಣ ಶ್ರಮ ಎರಡೂ ಒಟ್ಟಿಗೇ ಸೇರಿದರೆ ಏನಾಗಬಹುದು ಎಂಬುದಕ್ಕೆ ನೀವೊಂದು…