ಶೈಕ್ಷಣಿಕ ಹೊಸಘಟ್ಟದತ್ತ ಫಾತಿಮಾಗಳ ಕಲಿಕೊಡುಗೆಗಳು! (ಭಾಗ 2)

ಅಂತರೀಕ್ಷದ ಲಾವಣ್ಯಕ್ಕೆ ದಿಗ್ಮೂಢಗೊಂಡಿದ್ದ ಫಾತಿಮಾ :

Image

ದೇವರು ಇದ್ದಾನೆ ಎಂಬಂತೆ ಬದುಕಬೇಕು

ಭೂಮಿಯ ಹಾಗೂ ವಿಶ್ವದ ಆಗುಹೋಗುಗಳನ್ನು ಗಮನಿಸಿದಾಗ ಅಗೋಚರ ಶಕ್ತಿಯೊಂದು ಅವೆಲ್ಲವನ್ನೂ ನಿಯಂತ್ರಿಸುತ್ತಿದೆ ಎಂದನಿಸುತ್ತದೆ. ಅದನ್ನು "ದೇವರು" ಎಂದು ಕರೆಯುವುದು ಎಲ್ಲ ಧರ್ಮಗಳಲ್ಲಿಯೂ ವಾಡಿಕೆ.

ಅಂತಹ ಆಗುಹೋಗುಗಳ ಬಗ್ಗೆ ನಮಗೆ ಎದುರಾಗುವ ಕೆಲವು ಪ್ರಶ್ನೆಗಳು: ಕೋಟಿಗಟ್ಟಲೆ ವರುಷಗಳಿಂದ ಉರಿಯುತ್ತಿರುವ ಸೂರ್ಯ ಬೂದಿಯಾಗಿ ನಾಶವಾಗುತ್ತಿಲ್ಲ ಯಾಕೆ? ನಮ್ಮ ಭೂಮಿ ತನ್ನ ಕಕ್ಷೆಯಲ್ಲಿ ಕರಾರುವಾಕ್ಕಾಗಿ ಹೇಗೆ ಸುತ್ತುತ್ತಿದೆ? ಮಂಗಳ, ಬುಧ, ಗುರು, ಶನಿ ಇತ್ಯಾದಿ ಗ್ರಹಗಳು ಹೇಗೆ ಸುತ್ತುತ್ತಿವೆ? ಅವು ಕುಸಿಯುತ್ತಿಲ್ಲ ಯಾಕೆ? ಭೂಮಿಯ ಸಾಗರಗಳ ಅಗಾಧ ಜಲರಾಶಿ ಭೂಮಿಯಿಂದ ಕಳಚಿ ಬೀಳುತ್ತಿಲ್ಲ ಯಾಕೆ? ಕಣ್ಣಿಗೆ ಕಾಣದ ಪರಮಾಣುವಿನಿಂದ ಪ್ರಚಂಡ ಶಕ್ತಿ ಹೇಗೆ ಉತ್ಪನ್ನವಾಗುತ್ತದೆ?

Image

ನಿಮ್ಮ ಓಟು ಯಾರಿಗೆ ?

ಪ್ರಜಾಪ್ರಭುತ್ವದ ಪರಿಕಲ್ಪನೆಯಲ್ಲಿ " ಗೌಪ್ಯ ಮತದಾನ " ಒಂದು ಅತ್ಯದ್ಭುತ ವಿಧಾನ. ಚುನಾವಣಾ ಸಂದರ್ಭದಲ್ಲಿ ನಾವು ನಮ್ಮ ಮತದಾನದ ಹಕ್ಕನ್ನು ಅತ್ಯಂತ ಗೌಪ್ಯವಾಗಿ ಚಲಾಯಿಸಬಹುದು. ಅದು ಯಾರಿಗೂ ತಿಳಿಯುವುದಿಲ್ಲ. ಮುಕ್ತವಾಗಿ ಮತ್ತು ಧೈರ್ಯವಾಗಿ ಯಾರ ಹಂಗಿಗೂ ಒಳಗಾಗದೆ, ಯಾರಿಗೂ ನೇರವಾಗಿ ನೋಯಿಸದೆ ನಮ್ಮ ಮತವನ್ನು ಅತ್ಯಂತ ವಿವೇಚನೆಯಿಂದ ಚಲಾಯಿಸಬಹುದು.

Image

ಬಾಳೆಕಾಯಿ ಕಬಾಬ್

Image

ಮೈದಾಹಿಟ್ಟು, ಅರಸಿನ, ಮೆಣಸಿನ ಹುಡಿ, ಜೀರಿಗೆ, ಉಪ್ಪು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ನಂತರ ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಕಾಯಿಸಬೇಕು. ಅದಕ್ಕೆ ಹಿಟ್ಟಿನ ಮಿಶ್ರಣದಲ್ಲಿ ಬಾಳೆಕಾಯಿಗಳನ್ನು ಅದ್ದಿ ಬೋಂಡಾದಂತೆ ಕರಿಯಬೇಕು. ಈಗ ರುಚಿ ರುಚಿಯಾದ ಬಾಳೆಕಾಯಿ ಕಬಾಬ್ ಸವಿಯಲು ಸಿದ್ಧ.

ಬೇಕಿರುವ ಸಾಮಗ್ರಿ

ಬಾಳೆಕಾಯಿ ೪, ಮೈದಾ - ೨ ಕಪ್, ಅರಸಿನ ಹುಡಿ - ೧ ಚಮಚ, ಮೆಣಸಿನ ಹುಡಿ - ೧ ಚಮಚ, ಜೀರಿಗೆ -೧ ಚಮಚ, ಅಡುಗೆ ಎಣ್ಣೆ - ೨ ಕಪ್, ರುಚಿಗೆ ತಕ್ಕಷ್ಟು ಉಪ್ಪು.

ಸ್ಟೇಟಸ್ ಕತೆಗಳು (ಭಾಗ ೮೭೯)- ನಂಬಿಕೆ

ಯಾರ ಮನೆಗೆ ಯಾರು ಅತಿಥಿಗಳು ಈಗ. ಅದು ಯಾರೋ ದೊಡ್ಡವರು ಹೇಳಿದರು. ನಾವು ಈ ಭೂಮಿಗೆ ಅತಿಥಿಗಳಾಗಿ ಬಂದವರು ಇರೋದಕ್ಕೆ ಹೇಳಿದಷ್ಟು ದಿನ ಇದ್ದು ಹೊರಟು ಹೋಗಬೇಕು ಅಂತ. ಅದೇ ಪರಿಸ್ಥಿತಿ ಸ್ವಂತದ್ದಾದರೆ ಹೇಗಿರಬಹುದು? ಮನೆಯವರ ಬದುಕು ಚೆನ್ನಾಗಿರಬೇಕು ಮನೆ ಇನ್ನೊಂದಷ್ಟು ಹೆಚ್ಚು ಸಮಯ ನೆಮ್ಮದಿಯಿಂದ ಬದುಕಬೇಕು ಅಂತ ಅಂದ್ರೆ ನಾವು ಅತಿಥಿಗಳಾಗಬೇಕಾಗುತ್ತೆ.

Image

ಶೈಕ್ಷಣಿಕ ಹೊಸಘಟ್ಟದತ್ತ ಫಾತಿಮಾಗಳ ಕಲಿಕೊಡುಗೆಗಳು! (ಭಾಗ 1)

'ಫಾತಿಮಾ' ಎಂಬ ಹೆಸರು ನಮಗೆ ಕೇಳಸಿಗುತ್ತಿದ್ದಂತೆ ನಾವು ಪ್ರವಾದಿ(ಸ) ಅವರ ಪವಿತ್ರ ಸುಪುತ್ರಿಯವರನ್ನು ನೆನೆಯುದರಲ್ಲಿ ಸಂದೇಹವಿಲ್ಲ.

Image

ಒಂದು ಒಳ್ಳೆಯ ನುಡಿ - 259

“ವಿದ್ಯೆ ಎಂದರೆ ಉರು ಹೊಡೆಯುವಿಕೆಯಲ್ಲ. ಮಾಹಿತಿಯನ್ನು ತುಂಬಿಸುವುದಲ್ಲ. ಅದರಿಂದ ಜೀವನದ ಇತಿ-ಮಿತಿಗಳ ಅರಿವು, ಶೀಲನಿರ್ಮಿತಿಯಾಗಬೇಕು. ಶ್ರದ್ಧೆಯಿದ್ದರೆ ಯಾವುದು ಬೇಕೋ ಅದು ದೊರೆಯುವುದು. ಶಾಂತಿ ಮತ್ತು ನಿರ್ಮಲ ಜೀವನಕ್ಕಾಗಿ ಸ್ತುತಿ ನಿಂದೆಗಳನ್ನು ಸಹಿಸಿಕೊಳ್ಳಿ. ಸ್ವಾರ್ಥರಹಿತ ಬದುಕನ್ನು ಬಯಸಿ.

Image

ಉಚಿತ ಯೋಜನೆಗಳ ದಾಟಿ ಅಭಿವೃದ್ಧಿಗೆ ಒತ್ತು ನೀಡಲೆತ್ನ

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದಾಖಲೆಯ ೧೫ನೇ ಬಜೆಟ್ ಮಂಡಿಸಿದ್ದಾರೆ. ಗಾತ್ರ ಬರೋಬ್ಬರಿ ೩.೭ ಲಕ್ಷ ಕೋಟಿ ರೂಪಾಯಿ. ಅದೂ ದಾಖಲೆಯೇ. ಎಂದಿನಂತೆ ಇದರಲ್ಲಿ ಸುಮಾರು ೧ ಲಕ್ಷ ಕೋಟಿ ರೂ. ನಷ್ಟು ಹಣವನ್ನು ಸಲದ ರೂಪದಲ್ಲು ತಂದು ರಾಜ್ಯದ ಅಭಿವೃದ್ಧಿಗೆ ವೇಗ ನೀಡುವ ಪ್ರಸ್ತಾಪವಿದೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಐದು ಉಚಿತ ಯೋಜನೆಗಳಿಗೆ ವಾರ್ಷಿಕ ಸುಮಾರು ೬೦ ಸಾವಿರ ಕೋಟಿ ರೂ.

Image