ಅಲಾರಮ್ ತಂತ್ರ

ಬಾಗೂರು ಗ್ರಾಮದಲ್ಲಿ ತೀರಾ ಅಪ್ರಾಮಾಣಿಕ ಕುಳ್ಳನೊಬ್ಬನಿದ್ದ. ಅವನ ಹೆಸರು ಚತುರಾಂಗುಲಿ. ಯಾಕೆಂದರೆ ಅವನು ಇತರರ ಎಷ್ಟು ವಸ್ತುಗಳನ್ನು ಅವರಿಗೆ ತಿಳಿಯದಂತೆ ತೆಗೆದಿದ್ದನೆಂಬುದಕ್ಕೆ ಲೆಕ್ಕವೇ ಇರಲಿಲ್ಲ.

Image

ಹೊಷಿನ್ ಕೊನೆಯ ಕವನ

'ಸಂಪದ'ದಲ್ಲಿ ಕಳೆದ ಹಲವಾರು ಸಮಯದಿಂದ ಶ್ರೀಯುತ ಅಡ್ಡೂರು ಕೃಷ್ಣ ರಾವ್ ಅವರು ಝೆನ್ ಪ್ರಸಂಗವನ್ನು ಬಹಳ ಅಚ್ಚುಕಟ್ಟಾಗಿ ನಮಗೆ ನೀಡುತ್ತಾ ಬಂದಿದ್ದಾರೆ. ಝೆನ್ ಪ್ರಸಂಗಗಳೇ ಹಾಗೆ, ಒಮ್ಮೆ ಓದಿದಾಗ ಒಂದು ಅರ್ಥ ನೀಡಿದರೆ, ಮತ್ತೊಮ್ಮೆ ಓದುವಾಗ ವಿಭಿನ್ನ ಅರ್ಥ ನೀಡುತ್ತದೆ. ಕೆಲವೇ ಕೆಲವು ಸಾಲಿನಲ್ಲಿ ಅರ್ಥಪೂರ್ಣ ಓದು ನಿಮ್ಮದಾಗುತ್ತದೆ.

Image

ಸ್ವರಾಜ್ಯ

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕ: ರಾಧಾಕೃಷ್ಣ ಬೆಳ್ಳೂರು
ಪ್ರಕಾಶಕರು
ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ ಸ್ಮಾರಕ ಟ್ರಸ್ಟ್, ಕಾಸರಗೋಡು
ಪುಸ್ತಕದ ಬೆಲೆ
ರೂ. ೭೫.೦೦, ಮುದ್ರಣ : ೧೯೯೯ ಎಪ್ರಿಲ್

ಸ್ವರಾಜ್ಯ ಎಂಬುದು ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯರ ಸಮಗ್ರ ಕೃತಿ ಸಂಪುಟ. ಸ್ವಾತಂತ್ರ್ಯ ಹೋರಾಟಕ್ಕೆ ಕಾವ್ಯವನ್ನು ಮಹತ್ವದ ಮಾಧ್ಯಮವಾಗಿ ದುಡಿಸಿಕೊಂಡ ಕವಿ ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯರು. ಇವರ ಬದುಕಿನ ಮೇಲೂ ಬರವಣಿಗೆಯ ಮೇಲೂ ಗಾಂಧೀತತ್ವದ ಗಾಢ ಪ್ರಭಾವವಿದೆ. ಭಾರತೀಯ ಆರ್ಷ ಚಿಂತನೆಯೊಂದಿಗೆ, ಸುಧಾರಣಾವಾದಿ ನಿಲುವುಗಳೂ ಸೇರಿಕೊಂಡು ಅವರೊಬ್ಬ ಪ್ರಾಮಾಣೀಕ ದೇಶ ಭಕ್ತ ಕವಿಯಾಗಿ ರೂಪುಗೊಂಡವರು.

ನಮ್ಮ ಹೆಮ್ಮೆಯ ಭಾರತ (ಭಾಗ 51 - 52)

೫೧.ಜಗತ್ತಿನ ಅತ್ಯಧಿಕ ಥೋರಿಯಮ್ ನಿಕ್ಷೇಪ ಇರುವ ದೇಶ ಭಾರತ
ಥೋರಿಯಮ್ ನೈಸರ್ಗಿಕವಾಗಿ ಸಿಗುವ ರೇಡಿಯೋ-ಆಕ್ಟಿವ್ ರಾಸಾಯನಿಕ ಮೂಲವಸ್ತು. ಸ್ವೀಡನಿನ ರಾಸಾಯನಿಕ ವಿಜ್ನಾನಿ ಜೋನ್ಸ್ ಜಾಕೊಬ್ ಬೆರ್-ಜಿಲಿಯಸ್ ೧೮೨೮ರಲ್ಲಿ ಇದನ್ನು ಪತ್ತೆ ಮಾಡಿ, ಗುಡುಗಿನ ದೇವರು ಥೋರ್ ಹೆಸರನ್ನು ಇದಕ್ಕಿಟ್ಟರು.

ಅಣುಶಕ್ತಿ ಉತ್ಪಾದನೆಗೆ ಥೋರಿಯಮನ್ನು ಬಳಸುತ್ತಾರೆ. ಜಗತ್ತಿನಲ್ಲಿ ಮನುಷ್ಯರ ಜನಸಂಖ್ಯೆ ಮತ್ತು ಕೈಗಾರೀಕರಣ ಹೆಚ್ಚಾದಂತೆ ಶಕ್ತಿಯ ಬೇಡಿಕೆಯೂ ಹೆಚ್ಚುತ್ತದೆ. ಇದನ್ನು ಪೂರೈಸಲು ಥೋರಿಯಮನ್ನು ಅವಲಂಬಿಸಲೇ ಬೇಕಾಗುತ್ತದೆ.

ಜಗತ್ತಿನ ಅತ್ಯಧಿಕ ಥೋರಿಯಮ್ ನಿಕ್ಷೇಪ ಹೊಂದಿರುವುದು ಭಾರತದ ಅನುಕೂಲ. ಪ್ರಧಾನವಾಗಿ ರಾಂಚಿ, ಗುಜರಾತ್, ಬಿಹಾರ ಮತ್ತು ತಮಿಳ್ನಾಡು ಪ್ರದೇಶಗಳಲ್ಲಿ ಈ ನಿಕ್ಷೇಪವಿದೆ.

Image

ಚೌರಿ ಚೌರಾ ಹತ್ಯಾಕಾಂಡಕ್ಕೆ ನೂರು ವರ್ಷ

ಫೆಬ್ರವರಿ ೪, ೧೯೨೨ರಂದು ಉತ್ತರ ಪ್ರದೇಶದ ಗೋರಖ್ ಪುರ ಜಿಲ್ಲೆಯ ಚೌರಿ ಚೌರಾ ಎಂಬ ಊರಿನಲ್ಲಿ ನಡೆದ ಹತ್ಯಾಕಾಂಡದ ಘಟನೆಯೇ ಚೌರಿ ಚೌರಾ ಘಟನೆ. ಈ ಹತ್ಯಾಕಾಂಡ ಎಂಬ ಪದವನ್ನು ತೆಗೆದು ‘ಜನಾಕ್ರೋಶ' ಎಂದು ಉಲ್ಲೇಖಿಸಬೇಕೆಂದು ಹಲವಾರು ಮನವಿಗಳು ಸಲ್ಲಿಕೆಯಾಗಿವೆ. ಶಾಲಾ ದಿನಗಳಲ್ಲಿ ಇತಿಹಾಸದ ಪಾಠ ಮಾಡುವಾಗ ಚೌರಿ ಚೌರಾ ಘಟನೆ ಬಗ್ಗೆ ಹೇಳಿದ್ದು ನೆನಪಿಗೆ ಬರುತ್ತಿದೆ. ಅದರ ಹಿಂದಿನ ಘಟನೆಗಳು ಏನು?

Image