ಹಿಮಗಿರಿಯ ಗರ್ಭದಲ್ಲಿ

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ಭಾವನಾ ಪ್ರಕಾಶನ, ಪದ್ಮನಾಭನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ಡಿಸೆಂಬರ್ ೨೦೨೦

ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರ ನಿಧನದ ಬಳಿಕ ಹೊರ ಬಂದ ಪುಸ್ತಕವಿದು. ಬಹಳ ಹಿಂದೊಮ್ಮೆ ಪ್ರಕಟವಾಗಿದ್ದರೂ, ಪ್ರತಿಗಳು ಈಗ ಮುಗಿದಿವೆ ಎಂದು ರವಿ ಬೆಳಗೆರೆಯವರು ಬರೆದಿದ್ದರು. ‘ಹಿಮಗಿರಿಯ ಗರ್ಭದಲ್ಲಿ' ಪುಸ್ತಕವು ಒಂದು ಪ್ರವಾಸ ಕಥನ. ರವಿ ಬೆಳಗೆರೆಯವರು ತಮ್ಮ ಅರುಣಾಚಲ ಪ್ರದೇಶದ ಪ್ರವಾಸದ ಅನುಭವಗಳನ್ನು ತಮ್ಮದೇ ಆದ ಶೈಲಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ಒಂದು ಒಳ್ಳೆಯ ನುಡಿ (೨೯) - ಸುವಿಚಾರ

ಸತ್ಯ ಮತ್ತು ಸುಳ್ಳುಗಳ. ಮಧ್ಯೆ ಅಜಗಜಾಂತರ ವ್ಯತ್ಯಾಸವಿದೆ. ಸತ್ಯ ಹೇಳುವವ ಸತ್ತೇ ಹೋದ ಎಂಬ ಮಾತೂ ಇದೆ. ಸುಳ್ಳು ಹೇಳುವವ ನೂರ್ಕಾಲ ಬದುಕಿದ ಎನ್ನುತ್ತಾರೆ. ನಮ್ಮ ಕಣ್ಣಿಗೆ ಅವ ನೂರ್ಕಾಲ ಬದುಕಿದ ಹಾಗೆ ಗೋಚರಿಸಬಹುದು. ಆದರೆ ಅದೂ ಒಂದು ಬದುಕಾ? ಒಮ್ಮೆಗೆ ಆತ ಬಚಾವಾಗಬಹುದು. ಆದರೆ ಇಡೀ ಸಮಾಜ ಅವನನ್ನು ವ್ಯಂಗ್ಯವಾಗಿ ನೋಡುತ್ತದೆ. ಎಲ್ಲಿ ಹೋದರೂ ಅವನತ್ತ ಬೊಟ್ಟು ಮಾಡಿ ತೋರಿಸುತ್ತಾರೆ. ಹಾಗಿದ್ದ ಬಾಳು ಯಾಕೆ?

Image

ಖಲೀಲ್ ಗಿಬ್ರಾನ್ ಕಥೆಗಳು

ಈಗಾಗಲೇ ನೀವು ಖಲೀಲ್ ಗಿಬ್ರಾನ್ ಅವರ ಒಂದು ಸಣ್ಣ ಕಥೆಯನ್ನು ‘ಸಂಪದ’ದಲ್ಲಿ ಓದಿರುವಿರಿ. ಅವರ ಕಿರು ಕಥೆಯಲ್ಲಿ ಅಡಗಿದ ಗೂಡಾರ್ಥವನ್ನು ಅರ್ಥೈಸಿದವನೇ ಬುದ್ಧಿವಂತ. ಇಲ್ಲಿ ಇನ್ನೆರಡು ಪುಟ್ಟ ಪುಟ್ಟ ಕಥೆಗಳಿವೆ. ಓದುವ ಖುಷಿ ನಿಮ್ಮದಾಗಲಿ..

Image

ಸತ್ಯ - ಜ್ಞಾನ - ನದಿ...

ಸತ್ಯಕ್ಕೆ ಸಾವಿಲ್ಲ, ನಿಜ. ಆದರೆ ಸತ್ಯಕ್ಕೆ ಆಗಾಗ ಸಾಂಕ್ರಾಮಿಕ ಕಾಯಿಲೆ ಬರುತ್ತದೆ. ಕೆಲವೊಮ್ಮೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಹಲವೊಮ್ಮೆ ತಿರಸ್ಕರಿಸಲ್ಪಡುತ್ತದೆ. ಸುಳ್ಳಿಗೆ ಬೆದರುತ್ತದೆ. ದ್ವೇಷಕ್ಕೆ ಬಲಿಯಾಗುತ್ತದೆ. ಕೋಪಕ್ಕೆ ತುತ್ತಾಗುತ್ತದೆ. ಅಸೂಯೆಗೆ ಮಣಿಯುತ್ತದೆ. ಸ್ವಾರ್ಥಕ್ಕೆ ಸೆರೆಯಾಗುತ್ತದೆ.

Image