ಹೂಮನಸ ಹೃದಯದಲಿ
ಹೂಮನಸ ಹೃದಯದಲಿ
- Read more about ಹೂಮನಸ ಹೃದಯದಲಿ
- Log in or register to post comments
ಹೂಮನಸ ಹೃದಯದಲಿ
ಮೈಯಲ್ಲಿ ಮಚ್ಚೆಗಳಿದ್ದ ಮೊಲದ ಮರಿಯೊಂದರ ಹೆಸರು ಗುಂಡ. ಅದು ಇತರ ಪ್ರಾಣಿಗಳಿಗೆ ಬಹಳ ಉಪಟಳ ಕೊಡುತ್ತಿತ್ತು. ಯಾವತ್ತೂ ಅದು ಸಭ್ಯತೆಯಿಂದ ವರ್ತಿಸುತ್ತಿರಲಿಲ್ಲ. ಇತರ ಪ್ರಾಣಿಗಳು ಎದುರಾದಾಗೆಲ್ಲ ಅವನ್ನು ಅಡ್ಡಹೆಸರಿನಿಂದ ಕರೆದು ಗೇಲಿ ಮಾಡುತ್ತಿತ್ತು. ಬೇರೆಯವರು ಏನಾದರೂ ಹೇಳಿದರೆ ಯಾವಾಗಲೂ ಎದುರುತ್ತರ ಕೊಡುತ್ತಿತ್ತು.
ಮುಳ್ಳುಹಂದಿ ಎದುರಾದಾಗ “ಮುಳ್ಳಿನ ಮುದ್ದೆಯೇ” ಎಂದು ಜೋರಾಗಿ ಕರೆಯಿತು ಗುಂಡ ಮೊಲದಮರಿ. ಯಾರಾದರೂ ಹಾಗೆ ಕರೆದರೆ ಮುಳ್ಳುಹಂದಿಗೆ ಬಹಳ ಕಿರಿಕಿರಿಯಾಗುತ್ತಿತ್ತು. “ಏನೆಂದೆ? ತಾಳು, ನಿನ್ನ ಅಮ್ಮನಿಗೆ ನಾನು ದೂರು ಹೇಳ್ತೇನೆ” ಎಂದಿತು ಮುಳ್ಳುಹಂದಿ.
ಭಾರತೀಯ ಸಶಸ್ತ್ರ ಸೇನೆ ಎಂದೊಡನೆಯೇ ನಮ್ಮ ಮನಸ್ಸಿನಲ್ಲಿ ಭೂಸೇನೆ, ವಾಯು ಸೇನೆ ಮತ್ತು ನೌಕಾ ಸೇನೆಗಳ ಚಿತ್ರ ಹಾದು ಹೋಗುತ್ತದೆ. ಮೂರೂ ಸೇನೆಗಳಿಗೆ ಪ್ರತ್ಯೇಕ ದಿನಗಳಿವೆ. ಜನವರಿ ೧೫ ಅನ್ನು ಸೇನಾ ದಿನ (Army Day) ವಾಗಿ ಆಚರಿಸುತ್ತೇವೆ. ಜನವರಿ ೧೫ ರಾಷ್ಟ್ರೀಯ ಸೇನಾ ದಿನಾಚರಣೆಯನ್ನಾಗಿ ಆಚರಣೆ ಮಾಡುವುದಕ್ಕೆ ಏನು ಕಾರಣ ಗೊತ್ತಾ?
ವಿಶ್ವ ಭೂಪಟದ ನಾಟಕವೆಂಬ ಪರದೆ ಸರಿಸಿದಾಗ ಭಾರತವೆಂಬ ರಂಗ ವೇದಿಕೆಯಲ್ಲಿ ನೇಗಿಲು ಹಿಡಿದು ತಲೆಗೆ ಹಸಿರು ರುಮಾಲು ಸುತ್ತಿದ ದಷ್ಟ ಪುಷ್ಟ ದೇಹದ ಮುಗ್ಧ ನಗುವಿನ ಸುಂದರ ರೈತನೊಬ್ಬ ಕಾಣಿಸುತ್ತಿದ್ದ..ಭಾರತದ ಜನಸಂಖ್ಯೆಯ ಶೇಕಡ ೮೦% ಕ್ಕೂ ಹೆಚ್ಚು ಜನ ಅವಲಂಬಿತವಾಗಿದ್ದ ಕೃಷಿ ದೇಶದ ಜೀವನಾಡಿಯಾಗಿತ್ತು. ಅಷ್ಟೇ ಏಕೆ ರೈತರನ್ನು ದೇವರ ಅಪರಾವತಾರವೆಂದೇ ಪರಿಗಣಿಸಲಾಗಿತ್ತು.
ರೈತ ನಮ್ಮ ಬೆನ್ನೆಲುಬು - ಅನ್ನದಾತ - ಉಳುವ ಯೋಗಿ ಎಂದು ಹಾಡಿ ಹೊಗಳಲಾಗುತ್ತಿತ್ತು.
ಕಡಲು ಖಣಜವು ಸರ್ವ ಜೀವಿಗೆ
ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿಯವರು ಹೇಳಿದ ತಾತ್ವಿಕ ಚಿಂತನೆಗಾಗಿ ಒಂದು ಕಥೆ.
೪೫.ಹಾಸುಗಂಬಳಿ ಉತ್ಪಾದನೆ: ಭಾರತದ ಮಗದೊಂದು ಮುಂಚೂಣಿ ರಂಗ
ಪ್ರಾಚೀನ ಕಾಲದಿಂದಲೂ ಭಾರತದ ಹಲವಾರು ಮನೆಗಳನ್ನು ಉಣ್ಣೆ, ಹತ್ತಿ, ಸೆಣಬು, ತೆಂಗಿನನಾರು ಮತ್ತು ಹುಲ್ಲುಗಳ ಹಾಸುಗಂಬಳಿಗಳು ಅಲಂಕರಿಸಿವೆ. ಪರ್ಷಿಯನ್ ಹಾಸುಗಂಬಳಿಗಳನ್ನು ಭಾರತಕ್ಕೆ ಮೊದಲಾಗಿ ತಂದವರು ಮೊಘಲರು. ಮಹಾರಾಜ ಅಕ್ಬರ್ ಆಗ್ರಾದಲ್ಲಿ ಹಾಸುಗಂಬಳಿ ನೇಯ್ಗೆ ಉದ್ಯಮವನ್ನು ಆರಂಭಿಸಿದ. ಅಂದಿನಿಂದ ಭಾರತದ ಹಾಸುಗಂಬಳಿಗಳು ಅದ್ಭುತ ವಿನ್ಯಾಸಗಳು, ಬಣ್ಣ ಸಂಯೋಜನೆ ಮತ್ತು ಕುಶಲ ನೇಯ್ಗೆಗಾಗಿ ಜಗತ್ತಿನಲ್ಲೇ ಪ್ರಸಿದ್ಧವಾಗಿವೆ.
ಉಣ್ಣೆ ಮತ್ತು ಸಿಲ್ಕ್ ಹಾಸುಗಂಬಳಿ ಹೆಣಿಗೆಗೆ ಬಳಸುವ ಪ್ರಧಾನ ವಸ್ತುಗಳು. ಇವುಗಳ ವಿನ್ಯಾಸಗಳು ಬಳ್ಳಿ ಮತ್ತು ಹೂಗಳ ನಮೂನೆಗಳು, ಪ್ರಾಣಿ ಮತ್ತು ಹಕ್ಕಿಗಳ ಚಿತ್ರಗಳು ಹಾಗೂ ಕ್ಯಾಲಿಗ್ರಾಫಿ ವಿನ್ಯಾಸಗಳನ್ನು ಒಳಗೊಂಡಿರುತ್ತವೆ.
ನೂಪುರ ನಾದವ ಕೇಳಲು ಕರ್ಣದಿ