ಕಿತ್ತಳೆ ಹಣ್ಣಿನ ಸಿಪ್ಪೆಯ ಗೊಜ್ಜು

Image

ಕಿತ್ತಳೆ ಸಿಪ್ಪೆಯನ್ನು ಸ್ವಚ್ಛಗೊಳಿಸಿ, ಸಣ್ಣಗೆ ಕತ್ತರಿಸಿಡಿ. ಬಾಣಲೆಯಲ್ಲಿ ಒಗ್ಗರಣೆಗೆ ತಯಾರು ಮಾಡಿ, ಅದು ತಯಾರಾಗುವಾಗ, ಮೊದಲೇ ತುಂಡು ಮಾಡಿದ ಸಿಪ್ಪೆಯನ್ನು ಸೇರಿಸಿ ಚೆನ್ನಾಗಿ ಹುರಿಯಬೇಕು. ಒಗ್ಗರಣೆಗೆ ತುಪ್ಪ ಬಳಸಿದರೆ ಒಳ್ಳೆಯದು. ಅರಶಿನ ಹುಡಿ,ಇಂಗು, ಬೆಳ್ಳುಳ್ಳಿ, ಕರಿಬೇವು ಸೇರಿಸಬೇಕು.

ಬೇಕಿರುವ ಸಾಮಗ್ರಿ

ಕಿತ್ತಳೆ ಹಣ್ಣಿನ ಸಿಪ್ಪೆ -೩ ಹಣ್ಣಿನದ್ದು, ಅರಶಿನ ಹುಡಿ - ೧ ಚಮಚ, ಸ್ವಲ್ಪ ಇಂಗು, ಬೆಳ್ಳುಳ್ಳಿ-೬ ಎಸಳುಗಳು, ಹಣಸೇ ಹಣ್ಣು, ರುಚಿಗೆ ಉಪ್ಪು, ರುಚಿಗೆ ಬೇಕಾದಷ್ಟು ಬೆಲ್ಲ, ಕಾಯಿ ಮೆಣಸು (ಸೂಜಿ ಮೆಣಸು/ಗಾಂಧಾರಿ ಮೆಣಸು) ೫-೬, ಶುಂಠಿ ಸಣ್ಣ ಚೂರು, ತುಪ್ಪ. ಸಾರಿನ ಹುಡಿ ೨ ಚಮಚ

 

ಬೀchi ಯವರು ಕನ್ನಡವನ್ನೇಕೆ ಅಪ್ಪಿಕೊಂಡರು?

ಆ ಕಾಲದಲ್ಲಿ ಸಂಜೆ ಹೆಂಡತಿ ಜತೆ ವಾಕಿಂಗ್ ಹೋಗುವುದೂ ಒಂದು ರೀತಿಯ ಸಂಪ್ರದಾಯವಾಗಿತ್ತು. ಬೀChi (ಬೀಚಿ) ಕೂಡ ವಾಕಿಂಗ್‌ಗೆ ಹೊರಟಿದ್ದರು.

Image

ದುಡಿದು ತಿನ್ನಲು ನಾಚಿಕೆ ಏಕೆ?

ಕೆಲವು ದಿನಗಳ ಹಿಂದೆ ನನ್ನ ಪತ್ನಿಯ ಚಪ್ಪಲಿ ತುಂಡಾಗಿ, ಅದನ್ನು ಸರಿ ಪಡಿಸಲು ಮನೆಯ ಹತ್ತಿರವೇ ಇದ್ದರ ಚಮ್ಮಾರ ಕುಟೀರಕ್ಕೆ ಹೋಗಿದ್ದೆ. ಅಲ್ಲಿದ್ದ ವ್ಯಕ್ತಿ ಚಪ್ಪಲಿ ನೋಡಿದ ಕೂಡಲೇ ‘ಎಲ್ಲಾ ಬದಿ ಹೊಲಿಗೆ ಹಾಕಬೇಕು. ನೂರು ರೂಪಾಯಿ ಆಗುತ್ತದೆ' ಎಂದು ಮುಖಕ್ಕೆ ಹೊಡೆದಂತೆ ಹೇಳಿದ. ನನಗೆ ಒಂದು ಕ್ಷಣ ಪಿಚ್ಚೆನಿಸಿದರೂ ಸಾವರಿಸಿ ‘ ಕೆಲಸ ಮಾಡಿದ ಬಳಿಕ ಹಣ ಕೊಡದೇ ಇರುತ್ತೇನಾ? ಹೊಲಿದು ಕೊಡಪ್ಪಾ’ ಎಂದು ನಗುತ್ತಾ ಹೇಳಿದೆ.

Image

ನಮ್ಮ ಹೆಮ್ಮೆಯ ಭಾರತ (ಭಾಗ 43 - 44)

೪೩.ಸೆಣಬು ಉತ್ಪಾದನೆಯಲ್ಲಿಯೂ ಭಾರತಕ್ಕೆ ಮೊದಲ ಸ್ಥಾನ
ಸೆಣಬಿನ ಚೀಲ ಮತ್ತು ಹಗ್ಗವನ್ನು ನಾವೆಲ್ಲರೂ ಬಳದಿದ್ದೇವೆ. ಸಸ್ಯಮೂಲದ ಈ ಉದ್ದನೆಯ, ಮೃದುವಾದ ನಾರನ್ನು ಬಲವಾದ ಹಗ್ಗವಾಗಿ ಹೊಸೆಯಬಹುದು. ಬಹುಪಯೋಗಿ ನೈಸರ್ಗಿಕ ನಾರುಗಳಲ್ಲಿ ಹತ್ತಿಯ ನಂತರ ಸೆಣಬಿಗೆ ಎರಡನೇ ಸ್ಥಾನ. ಪರಿಸರ ರಕ್ಷಣೆಯ ತುರ್ತಿನ ಇಂದಿನ ಕಾಲಮಾನದಲ್ಲಿ ಪರಿಸರಸ್ನೇಹಿ ಸೆಣಬಿಗೆ “ಬಂಗಾರದ ನಾರು" ಎಂಬುದು ಅನ್ವರ್ಥ ಹೆಸರು.

Image

ಧ್ಯಾನ ಮಾತು ಮತ್ತು ಧ್ವನಿ

ಪುಸ್ತಕದ ಲೇಖಕ/ಕವಿಯ ಹೆಸರು
ರಾಜಗೋಪಾಲ್ ಎಂ.
ಪ್ರಕಾಶಕರು
ಕರ್ನಾಟಕ ಸಂಘ, ಪುತ್ತೂರು-574201 ದ.ಕ.
ಪುಸ್ತಕದ ಬೆಲೆ
ರೂ. 36.00, ಮುದ್ರಣ 2002

*ರಾಜಗೋಪಾಲ್ ಎಂ. ಅವರ "ಧ್ಯಾನ, ಮಾತು ಮತ್ತು ಧ್ವನಿ"*

ಅಭಿವೃದ್ಧಿಯ ರೂಪ ಮತ್ತು ಪರಿಣಾಮ...

ಪ್ರಕೃತಿ ವಿಕೋಪ ಮತ್ತು ಅಭಿವೃದ್ಧಿ ಒಂದಕ್ಕೊಂದು ಬೆಸದಿದೆಯೇ? ಅನಾರೋಗ್ಯ ಮತ್ತು ಅಭಿವೃದ್ಧಿ ಜೊತೆಗಾರರೇ? ಅಪಘಾತ ಅಸಹನೆ ವಂಚನೆ ಮಾನಸಿಕ ರೋಗ ಅಭಿವೃದ್ಧಿಯ ಭಾಗವೇ?

Image

ಝೆನ್ ಪ್ರಸಂಗ: ಇನ್ನೂ ಹೊತ್ತುಕೊಂಡೇ ಇದ್ದೀಯಾ?

ಅವತ್ತು ಭಾರೀ ಮಳೆ ಸುರಿದು ನಗರದ ರಸ್ತೆಗಳಲ್ಲಿ  ಮಳೆ ನೀರು ತುಂಬಿ ಹರಿಯುತ್ತಿತ್ತು. ತನ್‌ಜನ್ ಮತ್ತು ಎಕಿಡೋ ಎಂಬ ಭಿಕ್ಷುಗಳಿಬ್ಬರು ಕೆಸರುಗದ್ದೆಯಂತಿದ್ದ ರಸ್ತೆಯಲ್ಲಿ ನಡೆಯುತ್ತಿದ್ದರು.

ಆ ರಸ್ತೆಯ ತಿರುವಿನಲ್ಲಿ ನಿಂತಿದ್ದಳು ಚೆಲುವಿನ ಯುವತಿಯೊಬ್ಬಳು. ಅಂದವಾದ ರೇಷ್ಮೆ ಉಡುಪು ಧರಿಸಿದ್ದ ಅವಳು ಆತಂಕದಲ್ಲಿದ್ದಳು. ಯಾಕೆಂದರೆ ರಸ್ತೆಯಲ್ಲಿ ಮೊಳಕಾಲೆತ್ತರದ ಕೆಸರು ನೀರು ಹರಿಯುತ್ತಿತ್ತು ಹಾಗೂ ಅವಳಿಗೆ ರಸ್ತೆ ದಾಟಿ ಹೋಗಬೇಕಿತ್ತು.

ತನ್‌ಜನ್ ಅವಳ ಪಕ್ಕಕ್ಕೆ ಹೋಗಿ, “ರಸ್ತೆ ದಾಟಬೇಕೇನು? ಬಾ" ಎನ್ನುತ್ತಾ ತೋಳುಗಳಿಂದ ಅವಳನ್ನು ಎತ್ತಿಕೊಂಡು, ರಸ್ತೆ ದಾಟಿ, ಆ ಬದಿಯಲ್ಲಿ ಕೆಳಗಿಳಿಸಿದ.

ಅನಂತರ, ಭಿಕ್ಷುಗಳಿಬ್ಬರೂ ಮುಂದೆ ಸಾಗಿದರು. ಒಂದೂ ಮಾತನ್ನಾಡದೆ ನಡೆದು ತಮ್ಮ ವಿಹಾರಕ್ಕೆ ಮರಳಿದರು.

Image