ಸಾಮಾನ್ಯ ಜನರಲ್ಲಿ ಅಸಾಮಾನ್ಯ ಚಿಂತನೆ ಮೈಗೂಡಿದರೆ…

ಸಾಮಾಜಿಕ ಜಾಲತಾಣದಲ್ಲಿ ಕಣ್ಣಾಡಿಸುತ್ತಿರುವಾಗ ಈ ಚಿತ್ರ ನನ್ನ ಕಣ್ಣಿಗೆ ಬಿತ್ತು. ಮೊದಲಿಗೆ ಯಾರೋ ರಸ್ತೆ ಕಾಂಕ್ರೆಟೀಕರಣದ ಕಾರ್ಮಿಕ ನೀರು ಹಾಕುತ್ತಿದ್ದಾನೆ ಎಂದು ಅನಿಸಿತು. ನಂತರ ಆ ಚಿತ್ರದ ಅಡಿಬರಹ ಓದಿದ ನಂತರ ನನ್ನ ಮನದಾಳದಲ್ಲಿ ಆ ವ್ಯಕ್ತಿಯ ಬಗ್ಗೆ ಒಂದು ಕೃತಜ್ಞತಾಭಾವ ಮೂಡಿತು.

Image

ದೇಶದ ಮೊದಲ ಶಿಕ್ಷಕಿಯನ್ನು ಕೃತಜ್ಞತೆಯಿಂದ ನೆನೆಯೋಣ...

ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಭಾರತದಲ್ಲಿ ನಡೆದ ಸಿಪಾಯಿ ದಂಗೆಯ ಬಗ್ಗೆ ಚರಿತ್ರಕಾರರು ಮತ್ತೆ ಮತ್ತೆ ಬರೆಯುತ್ತಾರೆ. ಆದರೆ ಅದೇ ದಶಕದಲ್ಲಿ ಭಾರತದಲ್ಲಿ ನಡೆದ ವಿಶಿಷ್ಟ ಶಿಕ್ಷಣಕ್ರಾಂತಿಯ ಬಗ್ಗೆ ಚರಿತ್ರಕಾರರು ಮಾತಾಡಿದ್ದು ಕಡಿಮೆ.

Image

ಐದು ಮೊಲದ ಮರಿಗಳ ಹುಟ್ಟುಹಬ್ಬ

“ನಾಳೆ ನನ್ನ ಮೊದಲ ಹುಟ್ಟುಹಬ್ಬ” ಎಂದು ಖುಷಿಯಿಂದ ಕುಣಿಯಿತು ಪುಟ್ಟ ಮೊಲದ ಮರಿ. ಮೀಸೆಮೊಲ, ದೊಡ್ಡಕಿವಿ ಮೊಲ, ಸಣ್ಣಕಿವಿ ಮೊಲ ಮತ್ತು ಮೋಂಟುಬಾಲ ಮೊಲ ಅದರ ನಾಲ್ಕು ಸೋದರ ಮರಿಗಳು. ‘ಓ, ನಾಳೆ ನನ್ನದೂ ಮೊದಲ ಹುಟ್ಟುಹಬ್ಬ” ಎನ್ನುತ್ತ ಅವೂ ಕುಣಿದಾಡಿದವು.

“ಅಪ್ಪ-ಅಮ್ಮ ನಾಳೆ ನಮಗೇನೋ ವಿಶೇಷವಾದದ್ದು ಕೊಡ್ತಾರೆ, ಅಲ್ವಾ?” ಕೇಳಿತು ಪುಟ್ಟ ಮೊಲದ ಮರಿ. "ಹೌದು, ಕೊಟ್ಟೇ ಕೊಡ್ತಾರೆ” ಎಂದು ನಾಲ್ಕು ಮೊಲದ ಮರಿಗಳು ಮತ್ತೆ ಕುಣಿದಾಡಿದವು.

Image

ಒಂದು ಒಳ್ಳೆಯ ನುಡಿ - 25

ನಮ್ಮೆಲ್ಲರ ಬದುಕಲ್ಲೂ ಆಸೆಗಳಿರುತ್ತದೆ, ಜೊತೆಗೆ ಒಂದಷ್ಟು ಅವಶ್ಯಕತೆ ಸಹ ಇರುತ್ತದೆ. ಈ ಅವಶ್ಯಕತೆಗಳೇ ಆಸೆಗಳಾದರೆ ಬದುಕು ತುಂಬಾ ಸುಂದರ. ಆದರೆ ಆಸೆ ಎಲ್ಲಿಯಾದರೂ ಅವಶ್ಯಕತೆ ಆಯಿತಾ? ನಮ್ಮ ಬಾಳು ಗಾಳಿಗೆ ಸಿಲುಕಿದ ತರಗೆಲೆಯಂತೆ. ಬದುಕು ಗಟ್ಟಿಯಾಗಿ ಇರುವಂತೆ ಪ್ರಯತ್ನಿಸೋಣ.

ನಮ್ಮ ಹೆಮ್ಮೆಯ ಭಾರತ (ಭಾಗ 41 - 42)

೪೧.ಸಕ್ಕರೆ ಬಳಕೆಯಲ್ಲಿ ಭಾರತಕ್ಕೆ ಜಗತ್ತಿನಲ್ಲೇ ಮೊದಲ ಸ್ಥಾನ
ಕಬ್ಬು ಮತ್ತು ಸಕ್ಕರೆಯ ತವರು ಭಾರತ ಎಂದು ಪರಿಗಣಿಸಲಾಗಿದೆ. ಪ್ರಾಚೀನ ಭಾರತದ ಧಾರ್ಮಿಕ ಗ್ರಂಥಗಳಲ್ಲಿ ಕಬ್ಬು ಕೃಷಿಯ ಬಗ್ಗೆ ಉಲ್ಲೇಖಗಳಿವೆ. ಚಕ್ರವರ್ತಿ ಅಲೆಗ್ಸಾಂಡರನ ಜೊತೆಗಿದ್ದ ಲೇಖಕರು, ಜೇನ್ನೊಣಗಳ ಸಹಾಯವಿಲ್ಲದೆ ಜೇನು ಉತ್ಪಾದಿಸುವ ಅದ್ಭುತ ಹುಲ್ಲು ಎಂದು ಕಬ್ಬನ್ನು ವರ್ಣಿಸಿದ್ದಾರೆ!

Image

ವಶೀಕರಣ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಎನ್.ಕಪನೀಪತಯ್ಯ
ಪ್ರಕಾಶಕರು
ಸಂತೋಷ್ ಪಬ್ಲಿಕೇಷನ್ಸ್, ವಿಜಯನಗರ, ಬೆಂಗಳೂರು -೫೬೦ ೦೪೦
ಪುಸ್ತಕದ ಬೆಲೆ
ರೂ. ೮.೦೦, ಮುದ್ರಣ : ೧೯೯೪

ವಶೀಕರಣ (Hypnotism) ಎನ್ನುವ ಈ ಕಿರು ಪುಸ್ತಕವನ್ನು ಬರೆದವರು ಡಾ. ಎನ್.ಕಪನೀಪತಯ್ಯನವರು. ಬಹಳ ಹಿಂದೆ ಅಂದರೆ ೧೯೯೪ರಲ್ಲಿ ಮುದ್ರಣ ಕಂಡ ಈ ಪುಸ್ತಕ ಆ ಸಮಯದಲ್ಲಿ ಬಹಳ ಪ್ರಾಮುಖ್ಯತೆ ಪಡೆದಿತ್ತು. ಮಾಟ, ಮಂತ್ರ, ದೆವ್ವ, ಭೂತ ಇತ್ಯಾದಿಗಳನ್ನು ನಂಬುವ ಜನರ ನಡುವೆ ಸಂಮ್ಮೋಹನ ಕ್ರಿಯೆಯ ಬಗ್ಗೆ ಬರೆದಿರುವ ಈ ಪುಸ್ತಕ ತುಂಬಾ ಮಾಹಿತಿ ಪೂರ್ಣವಾಗಿದೆ. 

2030 - 2040ರ ಜಗತ್ತಿನ ಮುನ್ನೋಟ: ಬೆಚ್ಚಿ ಬೀಳಿಸುವ ಬದಲಾವಣೆಗಳ ಪಕ್ಷಿನೋಟ

ಇವತ್ತು ಹೊಸ ವರುಷ 2021ಕ್ಕೆ ಹೆಜ್ಜೆಯಿಟ್ಟಿದ್ದೇವೆ ನಾವು. ಇನ್ನು 10 - 20 ವರುಷಗಳಲ್ಲಿ ಈ ಜಗತ್ತು ಹೇಗಿದ್ದೀತು? ಒಂದಂತೂ ನಿಜ, ನಾವು ನಂಬಲಿಕ್ಕಾಗದ ಬದಲಾವಣೆಗಳು ಜಗತ್ತಿನಲ್ಲಿ ಘಟಿಸಲಿವೆ.

Image

ಏಮಿ ಡೈಕೆನ್ : ಅಸೀಮ ಮನೋಬಲದ ಸಾಹಸಿ

ಏಮಿ ವಾನ್ ಡೈಕೆನ್ (Amy Van Dyken) ಎಂಬ ಮಹಿಳೆಯ ಬಗ್ಗೆ ನೀವು ಕೇಳಿರುವಿರಾ? ಬಹುತೇಕರು ಇಲ್ಲ ಎಂದೇ ಉತ್ತರ ಕೊಡುವರು. ಇತ್ತೀಚೆಗೆ ನಾನು ಮನೆಯಲ್ಲಿದ್ದ ಹಳೆಯ ‘ಕಸ್ತೂರಿ' ಪತ್ರಿಕೆಯನ್ನು ಗಮನಿಸುತ್ತಿದ್ದಾಗ ಡಾ.ಕೆ.ಚಿದಾನಂದ ಗೌಡ ಎಂಬವರು ಬರೆದ ‘ಎಮಿ ಡೈಕೆನ್' ಅವರ ಬಗೆಗಿನ ಕಿರು ಲೇಖನವನ್ನು ಗಮನಿಸಿದೆ. ಅದನ್ನು ಓದಿ ಅವರ ಮನೋಸ್ಥೈರ್ಯದ ಕಾರ್ಯಗಳನ್ನು ಗಮನಿಸಿ ತುಂಬಾನೇ ಪ್ರಭಾವಿತನಾದೆ.

Image