ವಿಶ್ವ ಮಾನವ ದಿನದಂದು ರಾಷ್ಟ್ರಕವಿ ಕುವೆಂಪು ನೆನಪು

ಡಿಸೆಂಬರ್ ೨೯ ರಾಷ್ಟ್ರ ಕವಿ ಕುವೆಂಪು ಅವರ ಜನ್ಮದಿನ. ಈ ದಿನವನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸುತ್ತಾರೆ. ಕನ್ನಡ ಭಾಷೆ, ನುಡಿಗಳಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದವರು ಕುವೆಂಪು. ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಎಂಬ ನಾಮಧೇಯದ ವ್ಯಕ್ತಿ ಕುವೆಂಪು ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದುದು ಬಹುತೇಕರಿಗೆ ತಿಳಿದಿರುವಂತದ್ದೇ.

Image

ಆದರ್ಶ ಮತ್ತು ವಾಸ್ತವ...

ಪ್ರಾಥಮಿಕ  ಶಾಲೆಯಲ್ಲಿ ಶಿಕ್ಷಣ ಗುಣಮಟ್ಟದ ಪರೀಕ್ಷೆ ಮಾಡುವ ತನಿಖಾಧಿಕಾರಿಗಳು ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡುತ್ತಾರೆ. ನೀವು ದೊಡ್ಡವರಾದ ಮೇಲೆ ಏನಾಗಲು ಇಷ್ಟ ಪಡುತ್ತೀರ ?

Image

ವಿಶ್ವ ಮಾನವನಿಗೊಂದು ನಮನ

ಎಲ್ಲಾದರೂ ಇರು ; ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು : ಕನ್ನಡವೇ ಸತ್ಯ; ಕನ್ನಡವೇ ನಿತ್ಯ, ಎನ್ನುವ ಕನ್ನಡದೊಲುಮೆಯ ಕಂದ, ಸರ್ವಮಾನ್ಯರಾದ ಶ್ರೀ ಕುವೆಂಪುರವರ ಜನುಮ ದಿನವಿಂದು. ಜಗದಕವಿ, ಯುಗದಕವಿ, ನಮ್ಮೊಲವಿನ ಕವಿ, ಹೇಳಲು ಪದಗಳಾದರೂ ಇದೆಯೇ? ಖಂಡಿತಾ ಇಲ್ಲ.

Image

ವ್ಯವಸ್ಥೆಯೆಂಬ ಅವ್ಯವಸ್ಥೆ

ಪುಸ್ತಕದ ಲೇಖಕ/ಕವಿಯ ಹೆಸರು
ಶ್ರೀರಾಮ ದಿವಾಣ
ಪ್ರಕಾಶಕರು
ಅಂಬಾರಿ ಪ್ರಕಾಶನ, ಕುವೆಂಪುನಗರ, ಮೈಸೂರು -೫೭೦ ೦೨೩
ಪುಸ್ತಕದ ಬೆಲೆ
ರೂ.೧೯೦.೦೦, ಮುದ್ರಣ : ೨೦೧೭

ಪತ್ರಕರ್ತ, ಸಂಘಟಕ ಶ್ರೀರಾಮ ದಿವಾಣರದ್ದು ಬಹುಮುಖ ಪ್ರತಿಭೆ. ಅವರೊಬ್ಬ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ. ‘ವ್ಯವಸ್ಥೆಯೆಂಬ ಅವ್ಯವಸ್ಥೆ' ಇದು ಶ್ರೀರಾಮ ದಿವಾಣರ ಎರಡನೇ ಪ್ರಕಟಿತ ಲೇಖನಗಳ ಸಂಕಲನ. ಈಗಾಗಲೇ ೩೧ ಆಯ್ದ ಲೇಖನಗಳನ್ನು ‘ಕೃಷ್ಣಾರ್ಪಣ!’ ಎಂಬ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ.

ಝೆನ್ ಪ್ರಸಂಗ: ಅಂತಿಮ ಅವಕಾಶ: ಮೂರೇ ದಿನ

ಗುರು ಸ್ವಿವೋ ಅವರ ಗುರುಕುಲಕ್ಕೆ ಜಪಾನಿನ ದಕ್ಷಿಣ ದ್ವೀಪದಿಂದ ವಿದ್ಯಾರ್ಥಿಯೊಬ್ಬ ಬಂದ - ಝೆನ್ ತತ್ವಗಳ ಅಧ್ಯಯನಕ್ಕಾಗಿ.

ಆ ವಿದ್ಯಾರ್ಥಿಗೆ ಅಧ್ಯಯನದ ಅಂಗವಾಗಿ ಗುರು ಸ್ವಿವೋ ಈ ಅಧ್ಯಾತ್ಮಿಕ ಒಗಟನ್ನು ನೀಡಿದ: “ಒಂದೇ ಕೈಯ ಚಪ್ಪಾಳೆ ಸದ್ದನ್ನು ಕೇಳು.”

ಅದಾಗಿ ಮೂರು ವರುಷಗಳು ದಾಟಿದವು. ಆದರೆ “ಒಂದೇ ಕೈಯ ಚಪ್ಪಾಳೆ ಸದ್ದಿ"ನ ಅಧ್ಯಯನದ ಪರೀಕ್ಷೆಯಲ್ಲಿ ಆ ವಿದ್ಯಾರ್ಥಿ ಉತ್ತೀರ್ಣನಾಗಲಿಲ್ಲ. ಹತಾಶನಾದ ಆತ ಒಂದು ದಿನ ಗುರುಗಳ ಬಳಿ ಬಂದು ಹೇಳಿದ, "ಜ್ನಾನ ಗಳಿಸದವನಾಗಿ ನಮ್ಮಊರಿಗೆ ಹಿಂತಿರುಗಬೇಕಾದ ಅವಮಾನ ನನ್ನ ಪಾಲಿಗೆ ಕಾದಿದೆ. ನಿಮ್ಮ ಒಗಟನ್ನು ಬಿಡಿಸುವುದು ಹೇಗೆಂದು ನನಗೆ ತಿಳಿಯುತ್ತಿಲ್ಲ.”

Image