ಭಗವಂತನ ನ್ಯಾಯ!

ಒಂದು ಅರ್ಥಪೂರ್ಣ ಬರಹ ಇಲ್ಲಿದೆ. ಒಮ್ಮೆ ಓದಿಕೊಂಡು ಬಿಡಿ. ಗಂಟೆಗಟ್ಟಲೆ ಕ್ಯೂನಲ್ಲಿ  ದೇವರ ದರ್ಶನಕ್ಕಾಗಿ ನಿಂತು ಬೇಸತ್ತ ಭಕ್ತನೊಬ್ಬ ದೇವರನ್ನು ಪ್ರಶ್ನೆ ಮಾಡುತ್ತಾನೆ.

Image

ಕೊರೊನಾ ವೈರಸಿನ ರುದ್ರನರ್ತನದ ಪ್ರಶ್ನೆ: ಬದುಕಿನಲ್ಲಿ ಯಾವುದು ಮುಖ್ಯ?

ವಸುದೈವ ಕುಟುಂಬ ಅಂದರೆ ಇಡೀ ಜಗತ್ತೇ ಒಂದು ಕುಟುಂಬ ಎನ್ನುತ್ತಿದ್ದೆವು. ಈ ಮಾತಿನ ಸತ್ಯ ಏನೆಂದು ಅರ್ಥವಾಗಬೇಕಾದರೆ ಕೊರೊನಾ ವೈರಸ್ (ಕೋವಿಡ್ ೧೯) ಎಂಬ ಕಣ್ಣಿಗೆ ಕಾಣದ ಜೀವಿ ರುದ್ರನರ್ತನ ಮಾಡಬೇಕಾಯಿತು.

ಜನವರಿ ೨೦೨೦ರ ಆರಂಭದಲ್ಲೇ ಚೀನಾದ ವುಹಾನ್ ಪ್ರ್ಯಾಂತ್ಯದಲ್ಲಿ ಶುರುವಾದ ಅದರ ಆಕ್ರಮಣ ಇದೀಗ ಇಡೀ ಜಗತ್ತಿಗೆ ವ್ಯಾಪಿಸಿದೆ. ವರುಷದ ಕೊನೇ ದಿನ ಜಗತ್ತಿನಲ್ಲಿ ಸೋಂಕಿತರ ಸಂಖ್ಯೆ ೮.೩೩ ಕೋಟಿ, ಸಾವಿನ ಸಂಖ್ಯೆ ೧೮.೧೬ ಲಕ್ಷ ದಾಟಿದೆ!

Image

ಹೊಸ ವರ್ಷದ ಸಂಭ್ರಮಕ್ಕೆ ಕೈಚಾಚುವ ಮುನ್ನ…

ಇಂದು ಡಿಸೆಂಬರ್ ೩೧. ವರ್ಷದ ಕೊನೆಯ ದಿನ. ಹಿಂದಿನ ವರ್ಷಗಳಂತೆ ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮ ಈ ವರ್ಷ ಇಲ್ಲ. ಕೋವಿಡ್ ೧೯ರ ಕಾಟ ಇದಕ್ಕೆ ಪ್ರಮುಖ ಕಾರಣ. ಕೆಲವು ಜನರಿಗೆ ಹೊಸ ವರ್ಷವನ್ನು ಸ್ವಾಗತಿಸುವುದೆಂದರೆ ಕುಡಿಯುವುದು ಮತ್ತು ಮೋಜು ಮಾಡುವುದು ಮಾತ್ರ. ಆದರೆ ಈ ವರ್ಷ ಪರಿಸ್ಥಿತಿ ಭಿನ್ನವಾಗಿದೆ.

Image

ಶವವಾಗುವ ಮುನ್ನ ಎಚ್ಚೆತ್ತುಕೊಳ್ಳಿ......

ಸ್ಮಶಾನದ ಘೋರಿಯಲ್ಲಿ ಶವವಾಗಿ ಮಲಗಿದ್ದ ದೇಹವೊಂದು ನಲವತ್ತು ದಿನಗಳ ನಂತರ ಮಿಸುಕಾಡಿತು - ಮಗ್ಗಲು ಬದಲಿಸಿತು. ಏನನ್ನೋ ಹೇಳಲು ಒದ್ದಾಡುತ್ತಿತ್ತು. ಅದು ಸಾಮಾನ್ಯ ಶವವಾಗಿರಲಿಲ್ಲ. ಅತ್ಯಂತ ನೋವಿನ ಹೃದಯವಿದ್ರಾವಕ ದುರಂತ ಅಂತ್ಯ ಕಂಡ ಹೋರಾಟಗಾರನ ಶವವದು.

Image

ಮೂರು ಕೊಲೆಗಳ ಮರ್ಮ

ಪುಸ್ತಕದ ಲೇಖಕ/ಕವಿಯ ಹೆಸರು
ಎನ್. ನರಸಿಂಹಯ್ಯ
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು
ಪುಸ್ತಕದ ಬೆಲೆ
೪೫.೦೦, ಮುದ್ರಣ : ಸೆಪ್ಟೆಂಬರ್ ೨೦೧೦

ಮೂರು ಕೊಲೆಗಳ ಮರ್ಮ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು.

ಕೊರೊನಾ ವೈರಸ್: ಕೆಟ್ಟ ಚಟ ತೊಲಗಿಸಿತೇ?

ಚೀನಾದ ವುಹಾನ್ ಪ್ರಾಂತ್ಯದಲ್ಲಿ ಹುಟ್ಟಿದ ಕೊರೊನಾ ವೈರಸ್ (ಕೊವಿಡ್ ೧೯) ೨೦೨೦ರ ವರುಷದುದ್ದಕ್ಕೂ ಜಗತ್ತಿನಲ್ಲೆಲ್ಲ ಧಾಳಿ ಮಾಡಿದೆ. ಅಮೇರಿಕಾ, ಇಟಲಿ, ಇರಾನ್, ಸ್ಪೇಯ್ನ್ ದೇಶಗಳು ಇದರ ಧಾಳಿಗೆ ತತ್ತರಿಸಿವೆ. ಈ ರಕ್ತಬೀಜಾಸುರ ವೈರಸಿನಿಂದ ಸೋಂಕಿತರ ಸಂಖ್ಯೆ ಭಾರತದಲ್ಲಿ ಒಂದು ಕೋಟಿ ದಾಟಿದೆ (೧೯-೧೨-೨೦೨೦ರಂದು). ಇದಕ್ಕೆ ಬಲಿಯಾದವರ ಸಂಖ್ಯೆ ಇವತ್ತು ೧,೪೮,೦೦೦ ಮೀರಿದೆ.

ಕೊರೊನಾ ವೈರಸ್ ಹುಟ್ಟಿಸಿದ ಭಯ, ಇದರಿಂದಾಗಿರುವ ಅನಾಹುತ, ವಿವಿಧ ದೇಶಗಳ ಆರ್ಥಿಕತೆಗೆ ಬಿದ್ದಿರುವ ಹೊಡೆತ ಇವೆಲ್ಲ ರಂಪಗಳ ನಡುವೆ ಇದರಿಂದಾಗಿ ಕೆಲವು ಕೆಟ್ಟ ಚಟಗಳನ್ನು ಹಲವರು ಬಿಟ್ಟಿರುವುದನ್ನೂ ೨೦೨೦ನೇ ವರುಷಕ್ಕೆ ವಿದಾಯ ಹೇಳುವ ಈ ಸಮಯದಲ್ಲಿ ಗಮನಿಸೋಣ.

Image