ಕೋಳಿಯಾದರೇನು ಶಿವ, ಬಾತುಕೋಳಿಯಾದರೇನು ಶಿವ!

ಯಾವ ಗಂಡ-ಹೆಂಡತಿಯರಲ್ಲಿ ವಾದ-ವಿವಾದಗಳೂ, ಜಗಳಗಳೂ ಇರುವುದಿಲ್ಲ? ಅವು ಇಲ್ಲವಾದರೆ ಅವರು ಗಂಡ-ಹೆಂಡತಿಯರೇ ಅಲ್ಲ ಅಲ್ಲವೇ? ಆದರೆ ವಾದದಲ್ಲಿ ಒಂದು ದಿನ ಸೋತರೂ ಬದುಕಿನುದ್ದಕ್ಕೂ ಗೆದ್ದ ಗಂಡ-ಹೆಂಡತಿಯರ ಪ್ರಸಂಗವೊಂದು ಇಲ್ಲಿದೆ.

Image

ಇನ್ನು ಸ್ವಲ್ಪ ದೂರ ಮಾತ್ರ!

ಒಂದು ತುಂಬಿ ತುಳುಕುತ್ತಿದ್ದ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ವೃದ್ಧೆಯೊಬ್ಬರ ಹತ್ತಿರ ಹಲವಾರು ಬ್ಯಾಗುಗಳನ್ನು ಹೊತ್ತ ಯುವಕನೊಬ್ಬನು ಬಂದು ಕುಳಿತನು. ಯುವಕನ ಬ್ಯಾಗುಗಳಿಂದಾಗಿ ಆ ವೃದ್ಧೆಗೆ ಕುಳಿತುಕೊಳ್ಳಲು ಸ್ವಲ್ಪ ಕಷ್ಟವೇ ಆಯಿತು. ಆ  ವೃದ್ಧೆಯ ಅವಸ್ಥೆಯನ್ನು ನೋಡಿ ಕನಿಕರಗೊಂಡ ಪಕ್ಕದಲ್ಲಿ ನಿಂತಿದ್ದ ಒಬ್ಬಾತ ಆ ವೃದ್ಧೆಯ ಹತ್ತಿರ ಕೇಳಿದ: "ನೀವು ಯಾಕೆ ಪ್ರತಿಕ್ರಿಯಿಸುತ್ತಿಲ್ಲ?

Image

ರಾಮಾನುಜನ್ ಅವರ ಸ್ಮರಣೆಗಾಗಿ ಗಣಿತ ದಿನ

ಡಿಸೆಂಬರ್ ೨೨. ಭಾರತ ಕಂಡ ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನ. ಈ ದಿನವನ್ನು ಪ್ರತೀ ವರ್ಷ ‘ರಾಷ್ಟ್ರೀಯ ಗಣಿತ ದಿನ’ ಎಂದು ಆಚರಿಸಲಾಗುತ್ತದೆ. ರಾಮಾನುಜನ್ ಬದುಕಿದ್ದು ಕೇವಲ ೩೨ ವರ್ಷ. ತನ್ನ ಅಲ್ಪಾಯುವಿನಲ್ಲೂ ಭಾರತೀಯ ಗಣಿತ ಲೋಕ ಮಾತ್ರವಲ್ಲ ವಿಶ್ವಕ್ಕೇ ಹಲವಾರು ಕೊಡುಗೆಗಳನ್ನು ನೀಡಿದ್ದು ರಾಮಾನುಜನ್ ಹೆಗ್ಗಳಿಕೆ.

Image

ಝೆನ್ ಪ್ರಸಂಗ: ಗುರುವಿನ ಬರಹದ ಸಂದೇಶ

ಒಬ್ಬ ಶ್ರೀಮಂತನಿಗೊಂದು ಯೋಚನೆ ಬಂತು: ತನ್ನ ಕುಟುಂಬದವರ ನೆಮ್ಮದಿ ಹಾಗೂ ಸಮೃದ್ಧಿಗಾಗಿ ಸುಭಾಷಿತವನ್ನು ಗುರುಗಳಿಂದ ಬರೆಯಿಸಬೇಕೆಂದು. ಅದಕ್ಕಾಗಿ ಗುರು ಸೆನ್‌ಗೈ ಅವರನ್ನು ತನ್ನ ಬಂಗಲೆಗೆ ಕರೆ ತಂದು ವಿನಂತಿಸಿದ.

ಗುರು ಸೆನ್‌ಗೈ ಕಾಗದದ ದೊಡ್ಡ ಹಾಳೆ ತರಿಸಿಕೊಂಡು, ಅದರಲ್ಲಿ ಹೀಗೆ ಬರೆದರು: “ಅಜ್ಜ ತೀರಿಕೊಂಡು, ಅಪ್ಪ ತೀರಿಕೊಂಡು, ಮಗ ತೀರಿಕೊಂಡು ಸಾಗಲಿ ಕುಟುಂಬ."

ಇದನ್ನು ಓದಿದ ಶ್ರೀಮಂತನಿಗೆ ಸಿಟ್ಟು ಬಂತು. “ಏನು ಗುರುಗಳೇ, ನಮ್ಮ ಕುಟುಂಬದ ನೆಮ್ಮದಿಗಾಗಿ, ಸಮೃದ್ಧಿಗಾಗಿ ಒಳ್ಳೆಯ ಮಾತು ಬರೆದು ಕೊಡಿ ಅಂದರೆ ಇಂತಹ ಕೆಟ್ಟ ಸಂದೇಶ ಬರೆಯುವುದೇ?" ಎಂದು ಕೋಪದಿಂದ ಕೇಳಿದ.

Image

ಫೇಸ್ ಬುಕ್.ಕಾಮ್/ಮಾನಸ ಜೋಶಿ

ಪುಸ್ತಕದ ಲೇಖಕ/ಕವಿಯ ಹೆಸರು
ಜೋಗಿ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು-೫೬೦೦೦೪
ಪುಸ್ತಕದ ಬೆಲೆ
ರೂ. ೯೫.೦೦, ಮುದ್ರಣ: ೨೦೧೨

ಕಥೆಗಾರ, ಪತ್ರಕರ್ತ ಜೋಗಿಯವರು ಫೇಸ್ ಬುಕ್ ಡಾಟ್ ಕಾಮ್/ಮಾನಸ ಜೋಶಿ ಎಂಬ ವಿಲಕ್ಷಣ ಹೆಸರುಳ್ಳ ಕಥಾ ಸಂಗ್ರಹವನ್ನು ಬರೆದಿದ್ದಾರೆ. ಇದಕ್ಕೆ ಕಥೆಗಳು ಮತ್ತು ಕಥೆಯಾಗದ ಕಥೆಗಳು ಎಂದು ಹೆಸರು ಬೇರೆ ನೀಡಿದ್ದಾರೆ. ಜೋಗಿಯವರ ಕಥೆಗಳೇ ಹಾಗೆ ಕಾಡುತ್ತಾ ಇರುತ್ತವೆ. ಅವರೇ ಹೇಳುವಂತೆ ‘ಇನ್ನು ಸಣ್ಣ ಕಥೆಗಳನ್ನು ಬರೆಯಬಾರದು ಎಂಬ ಬಹುದಿನದ ನಿರ್ಧಾರ ಕರಗಿದ ನಂತರ ಹುಟ್ಟಿದ ಕಥೆಗಳು ಇವು.

ಕಾರ್ತಿಕೇಯನು ಸುಬ್ರಹ್ಮಣ್ಯನಾಗಿ ಕುಕ್ಕೆಯಲ್ಲಿ ನೆಲೆನಿಂತ ಕಾರಣವೇನು?

ಮಾರ್ಗಶಿರ ಮಾಸದಲ್ಲಿ ಬರುವ ಷಷ್ಠಿಯೇ ಸುಬ್ರಹ್ಮಣ್ಯ ಷಷ್ಠಿ, ಕರಾವಳಿಗರಿಗೆ ಇದೊಂದು ವಿಶೇಷ ಹಬ್ಬವೂ ಹೌದು. ಶಿವ ಹಾಗೂ ಪಾರ್ವತಿಯರ ಮಗನಾದ ಕಾರ್ತಿಕೇಯನು ಕುಮಾರಧಾರ ತಟದಲ್ಲಿ ನೆಲೆಯಾದ ಸ್ಥಳ ಕುಕ್ಕೆ ಸುಬ್ರಹ್ಮಣ್ಯ. ಈ ಸುಬ್ರಹ್ಮಣ್ಯ ಷಷ್ಠಿಯ ಹಿಂದೆಯೂ ಒಂದು ಪೌರಾಣಿಕ ಹಿನ್ನಲೆ ಇದೆ.

Image