ಝೆನ್ ಪ್ರಸಂಗ: ಚಾಚೂ ತಪ್ಪದೆ ಮಾತಿನ ಪಾಲನೆ

ಗುರು ಬಂಕೆಯ ಮಾತುಗಳು ಹೃದಯಸ್ಪರ್ಶಿ. ಆದ್ದರಿಂದ ಅವರ ಮಾತು ಕೇಳಲು ಜನಸಮೂಹ ಜಮಾಯಿಸುತ್ತಿತ್ತು. ಝೆನ್ ವಿದ್ಯಾರ್ಥಿಗಳಲ್ಲದೆ ಬೇರೆ ಪಂಥಗಳ ಜನರೂ ಬಂದು ಸೇರುತ್ತಿದ್ದರು.

ನಿಚಿರೆನ್ ಪಂಥದ ಅರ್ಚಕನೊಬ್ಬನಿಗೆ ಬಂಕೆಯ ಬಗ್ಗೆ ವಿಪರೀತ ಕೋಪ. ಆ ಪಂಥದ ಹಲವಾರು ಅನುಯಾಯಿಗಳೂ ಗುರು ಬಂಕೆಯ ಮಾತು ಕೇಳಲು ಹೋಗುತ್ತಿದ್ದುದು ಈತನ ಮತ್ಸರಕ್ಕೆ ಕಾರಣವಾಗಿತ್ತು.

ಅದೊಂದು ದಿನ ಗುರು ಬಂಕೆ ಪ್ರವಚನ ನೀಡುತ್ತಿದ್ದ ಮಂದಿರಕ್ಕೆ ಈ ಅರ್ಚಕ ನುಗ್ಗಿದ. ಗುರು ಬಂಕೆಗೆ ಏರು ಧ್ವನಿಯಲ್ಲಿ ಸವಾಲೆಸೆದ, “ಏ ಝೆನ್ ಗುರುವೇ, ಇಲ್ಲಿ ಕೇಳು! ನಿನ್ನ ಮಾತನ್ನು ಯಾರು ಬೇಕಾದರೂ ಅನುಸರಿಸಲಿ, ಆದರೆ ನಾನು ಪಾಲಿಸಲಾರೆ. ಅದೇನು ಮಾಡುತ್ತಿ ನೋಡೋಣ. ನಿನ್ನ ಮಾತನ್ನು ನಾನು ಪಾಲಿಸುವಂತೆ ಮಾಡು ನೋಡೋಣ."

Image

ಬ್ರಿಟಿಷರು‌ ನಂಬಿ ಕರೆದರೆ‌ ಓ ಎನ್ನನೇ ಶಿವನು?

ವಿಸ್ಮಯದ ಶಿವಾಲಯವೊಂದು ಮಧ್ಯಪ್ರದೇಶದ ಶಾಜಾಪೂರ್ ಜಿಲ್ಲೆಯ ಅಗರ್ ಎಂಬಲ್ಲಿದೆ. ವಿಸ್ಮಯವೇನೆಂದರೆ ಇದನ್ನು ಕಟ್ಟಿಸಿದವರು (ಪುನರ್ ನಿರ್ಮಾಣ) ಬ್ರಿಟಿಷ್ ಸೈನ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಾರ್ಟಿನ್ ಎಂಬ ಕ್ರಿಶ್ಚಿಯನ್ ಅಧಿಕಾರಿ! ಇದರ ಹಿಂದಿನ ರೋಚಕ ಪ್ರಸಂಗ ಹೀಗಿದೆ. 

Image

ಆತ್ಮ

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ಭಾವನಾ ಪ್ರಕಾಶನ, ಪದ್ಮನಾಭನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ-೨೫೦.೦೦ ಮುದ್ರಣ: ೨೦೧೬

ಕನ್ನಡದ ಖ್ಯಾತ ಪತ್ರಕರ್ತ, ಲೇಖಕ ರವಿ ಬೆಳಗೆರೆಯ ಲೇಖನಿಯಿಂದ ಮೂಡಿ ಬಂದ ‘ಆತ್ಮ' ಕಾದಂಬರಿ ನಿಜಕ್ಕೂ ಕುತೂಹಲಕಾರಿ ಕಥಾ ಹಂದರವನ್ನು ಹೊಂದಿದೆ. ಬೆಳಗೆರೆಯವರೇ ಹೇಳುವಂತೆ ಇದು ವರ್ಷಗಟ್ಟಲೆ ಕಾದು ಕುಳಿತ ಕಾದಂಬರಿಯಂತೆ. ಇದರ ಕೆಲವು ಭಾಗಗಳು ‘ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಮೂಡಿಬಂದು ಓದುಗರ ಆಸಕ್ತಿಯನ್ನು ಕೆರಳಿಸಿದ್ದವು. ಪ್ರತೀ ವಾರ ‘ಮುಂದೇನಾಗುತ್ತೆ' ಎಂದು ಕೇಳುವಂತೆ ಮಾಡಿದ್ದವು.

ಚಿರನಿದ್ರೆಗೆ ಜಾರಿದ ಮಹಾನ್ ವಿದ್ವಾಂಸ - ಬನ್ನಂಜೆ ಗೋವಿಂದಾಚಾರ್ಯ

‘ವಿದ್ಯಾವಾಚಸ್ಪತಿ' ಬನ್ನಂಜೆ ಗೋವಿಂದಾಚಾರ್ಯರು ಇನ್ನಿಲ್ಲ ಎಂಬ ಸುದ್ದಿಯನ್ನು ಏಕೋ ಅರಗಿಸಿಕೊಳ್ಳಲಾಗುತ್ತಿಲ್ಲ. ಅವರ ವಿದ್ವತ್ ಪೂರ್ಣ ನುಡಿಗಳು ಇನ್ನೂ ಕಿವಿಯಲ್ಲಿ ರಿಂಗಣಿಸುತ್ತಿದೆಯೋ ಎಂದು ಅನಿಸುತ್ತಿದೆ. ಸ್ವಲ್ಪ ದಿನಗಳ ಹಿಂದೆಯಷ್ಟೇ ಗೋವಿಂದಾಚಾರ್ಯರು ತಮ್ಮ ಪುತ್ರನನ್ನು ಕಳೆದುಕೊಂಡಿದ್ದರು. 'ಪುತ್ರ ಶೋಕಂ ನಿರಂತರಂ’ ಎನ್ನುತ್ತಾರೆ. ಬಹುಷಃ ಇದೂ ಬನ್ನಂಜೆಯವರ ನಿಧನಕ್ಕೆ ಕಾರಣವಾಯಿತೇ?

Image

ಪಾಂಡು ಟೆಡ್ದಿ ಕರಡಿಯ ಗೊಣಗಾಟ

ಅಲಾರಮ್ ಸದ್ದು ಮಾಡಿದೊಡನೆ ಸರಸು ಸರಕ್ಕನೆ ಹಾಸಿಗೆಯಿಂದ ಎದ್ದಳು. ಅವಳ ಪಕ್ಕದಲ್ಲಿದ್ದ ಪಾಂಡು ಟೆಡ್ಡಿ ಕರಡಿ ತನ್ನ ಒಂದು ಕಣ್ಣನ್ನು ತೆರೆದು ನೋಡಿತು. ಯಾಕೆಂದರೆ ಅದರ ಇನ್ನೊಂದು ಕಣ್ಣು ವರುಷಗಳ ಮುಂಚೆ ಕುರುಡಾಗಿತ್ತು.

Image