ದೂರದ ಪ್ರಯಾಣ ಮಾಡುವವರಿಗಾಗಿ ಸಿಂಪಲ್ ಟಿಪ್ಸ್

ದೂರದ ಪ್ರಯಾಣ ಮಾಡುವಾಗ ವಾಂತಿ ಬಂದಂತಾಗುತ್ತದೆಯೇ? ಹಾಗಾದರೆ ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ. ಕೆಲವರಿಗೆ ವಾಹನದಲ್ಲಿ ದೂರದ ಪ್ರಯಾಣ ಮಾಡುವಾಗ ಹೊಟ್ಟೆ ತೊಳೆಸುವುದು, ವಾಂತಿ ಬಂದಂತಾಗುವುದು ಆಗುತ್ತದೆ. ಕೆಲವರಿಗೆ ತಲೆ ತಿರುಗಿದಂತಾಗುತ್ತದೆ. ಈ ರೀತಿ ಸಮಸ್ಯೆ ಇರುವವರಿಗೆ ಎಲ್ಲಿಯೂ ದೂರ ಹೋಗುವುದೇ ಬೇಡ ಎನಿಸುತ್ತದೆ. ಮಾರುಕಟ್ಟೆಯಲ್ಲಿ ಇಂತಹ ಸಮಸ್ಯೆ ಇರುವವರಿಗೆ ಮಾತ್ರೆಗಳೂ ಸಿಗುತ್ತದೆ.

Image

‘ಅವಳ ಹೆಜ್ಜೆ’

ಕ್ಷಣ ಕ್ಷಣಗಳು
ಕಾಲ ಚಕ್ರದ ತಳ ಸೇರುತ್ತಿದ್ದರೂ
ಅವಳು ಮಾತ್ರ
ತನ್ನದೇ ಗೂಡು ಕಟ್ಟಿಕೊಂಡು
ಬದುಕನ್ನ ರೂಪಿಸಲು ಶ್ರಮಿಸುತ್ತಿದ್ದಾಳೆ

ತನ್ನ ಸೆರಗಿನಂಚಿನಲ್ಲಿ
ಅವಿತ ಮನದ ಭಾವನೆಗಳನ್ನು
ಕಣ್ಣು ಹನಿಗಳಲ್ಲಿ ಅದ್ದಿ
ತಿಕ್ಕಿ ತೀಡಿದ ಎಳೆಯನ್ನು
ಸೂಜಿಗೆ ಪೋಣಿಸಿ
ಕಸೂತಿ ಮಾಡುತ್ತಾ
ಒಂದಕ್ಕೊಂದು ಹೊಸ
ನೆಲೆಯನ್ನು ಶೋಧಿಸುತ್ತಿದ್ದಾಳೆ

ಗುರಿ 

ಕನಸೆಂಬ  ಬೀಜವನ್ನು
ಬಿತ್ತಿದೆ ಮನದಲ್ಲಿ
ಅದು ಮೊಳಕೆಯೊಡೆದು
ಚಿಗುರಲು ನಿಂತಿದೆ
ಚಿಗುರೊಡೆದು  ಗಿಡವಾಗುವ ಮುನ್ನವೇ
ಮುರುಟಿಹೋಗುತ್ತಾ  ಕನಸು …?

 

ಕಣ್ಣುಗಳು ಕನಸುಗಳನ್ನು
ಕಾಣುತ್ತಲೇ ಇದೆ
ಮನಸ್ಸಿನ ಭಾವನೆ
ಮುದುಡುತ್ತಲೇ ಇದೆ
ಎದೆಯಲ್ಲಿನ ನೋವು
ಇನ್ನೂ ಹಾಗೆ ಇದೆ
ಚಿಗುರುತ್ತಾ ಕನಸು ….?

ಒಂದೇ ಒಂದು ಸಲ
ಆ ಕನಸು
ನನಸಾಗಬೇಕೆನ್ನುವ  ಆಸೆ   !
ನನಸಾಗದಿದ್ದರೆ  ಬದುಕೆಲ್ಲಾ ನಿರಾಸೆ
ಆದರೂ , ಛಲ ಬಿಡದೇ ಮುನ್ನುಗ್ಗುವೆ
ಗುರಿ ಮುಟ್ಟುವುದೇ ಕನಸು ….?

ಸಮಾಜಸೇವೆಯ ಮನಸ್ಸುಳ್ಳವರಿಗಾಗಿ ಗೃಹರಕ್ಷಕ ದಳ

ಹಲವಾರು ಮಂದಿಗೆ ಪೋಲೀಸ್ ಸಮವಸ್ತ್ರ ಧರಿಸಿ ಜನರ ಸೇವೆ ಮಾಡುವ ಮನಸ್ಸಿರುತ್ತದೆ. ಕೆಲವರಿಗೆ ಮಿಲಿಟರಿ ಸೇರಿ ಸೈನಿಕನ ಸಮವಸ್ತ್ರ ಧರಿಸಿ ದೇಶ ಸೇವೆ ಮಾಡುವ ಮನಸ್ಸಿರುತ್ತದೆ. ಆದರೆ ಕೌಟುಂಬಿಕ ಕಾರಣದಿಂದಲೋ ಅಥವಾ ಬೇರೆ ಯಾವುದೋ ಕಾರಣದಿಂದಲೋ ಅವರಿಗೆ ಈ ಅವಕಾಶ ತಪ್ಪಿ ಹೋಗಿರುತ್ತದೆ. ಅಗತ್ಯದ ತುರ್ತು ಪರಿಸ್ಥಿತಿಯಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನೂ ಸೈನಿಕನೇ ಎಂಬುದೊಂದು ಮಾತಿದೆ.

Image

ಬಯಲಲ್ಲಿ ಅಡಗಿರುವ 501 ಸತ್ಯಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಇಂಗ್ಲಿಷ್ ಮೂಲ: ಪಿ.ದೈವಮುತ್ತು ಕನ್ನಡಕ್ಕೆ: ಆದರ್ಶ್ ಗೋಖಲೆ
ಪ್ರಕಾಶಕರು
ಅವನಿ ಪ್ರಕಾಶನ, ಕುಂಭಾಸಿ, ಕುಂದಾಪುರ-೫೭೬೨೫೭
ಪುಸ್ತಕದ ಬೆಲೆ
ಬೆಲೆ: ರೂ.೮೦.೦೦

ಹಿಂದೂ ವಾಯ್ಸ್ ಸಂಪಾದಕರಾದ ಪಿ.ದೈವಮುತ್ತು ಅವರು ಆಂಗ್ಲ ಭಾಷೆಯಲ್ಲಿ ಬರೆದ ‘655 thruths’ ಎಂಬ ಪುಸ್ತಕವನ್ನು ಆದರ್ಶ್ ಗೋಖಲೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪಿ. ದೈವಮುತ್ತು ಅವರು ಹೇಳುವಂತೆ ‘ಇಸ್ಲಾಂ, ಕ್ರೈಸ್ತ ಹಾಗೂ ಕಮ್ಯೂನಿಷ್ಟರಂತೆ ‘ಜಾತ್ಯಾತೀತವಾದ' ಎಂಬುದು ಹಿಂದೂಗಳ ಶತ್ರುವಾಗಿ ರೂಪುಗೊಳ್ಳುತ್ತಿರುವ ಹೊಸದಾದ ಮತ.

ದುಷ್ಟರ ಸಹವಾಸ... ಒಂದು ನೀತಿ ಕಥೆ

ಒಂದು ಪ್ರದೇಶದ ರಾಜನು ಕಾಡಿಗೆ ವಿಹಾರಕ್ಕೆಂದು ತೆರಳಿದ್ದನು. ಅಲ್ಲಿ ರಾಜನಿಗೆ ತುಂಬಾ ದಣಿವಾಯಿತು. ಆಗ ರಾಜನು ಒಂದು ಮರದ ಕೆಳಗೆ ಬಂದು ನಿಂತುಕೊಂಡ. ರಾಜನನ್ನು ಗಮನಿಸಿದ ಒಂದು ಕೋಗಿಲೆಯು ಆತನಿಗೆ ನೀರಿರುವ ಸ್ಥಳವನ್ನು ತೋರಿಸಿ ಒಂದು ಹಣ್ಣನ್ನು ಕೂಡ ತಂದುಕೊಟ್ಟಿತು. ರಾಜನು ಹಣ್ಣು ತಿಂದು ಸಂತೃಪ್ತನಾದ. ಕೋಗಿಲೆಯು ತನ್ನ ಇಂಪಾದ ಕಂಠದಿಂದ ಹಾಡಲಾರಂಭಿಸಿತು. ಹಾಡನ್ನು ಕೇಳುತ್ತಾ ರಾಜನು ನಿದ್ರೆಗೆ ಜಾರಿದ.

Image