ಪುಟ್ಟ ಆಮೆಗೊಂದು ಉದ್ಯೋಗ

ಅಂಚೆಕಚೇರಿಗೆ ಕೆಲವು ಅಂಚೆಯಾಳುಗಳು ಬೇಕಾಗಿದ್ದಾರೆಂಬ ಸುದ್ದಿ ಪುಟ್ಟ ಆಮೆಗೆ ತಿಳಿಯಿತು. “ಓ, ಪತ್ರಗಳ ಬಟವಾಡೆ ಆಸಕ್ತಿಯ ಕೆಲಸ. ನಾನು ಹೋಗಿ ಅರ್ಜಿ ಹಾಕ್ತೇನೆ” ಎಂದು ಹೊರಟಿತು ಪುಟ್ಟ ಆಮೆ.

ಅಂಚೆ ಕಚೇರಿಗೆ ಪುಟ್ಟ ಆಮೆ ಹೋದಾಗ, ಅಲ್ಲಿ ಅರ್ಜಿ ಹಾಕಲು ಕಾಂಗರೂ ಕೂಡ ಕಾದಿತ್ತು. ಪೋಸ್ಟ್ ಮಾಸ್ಟರ್ ಉಷ್ಟ್ರ ಪಕ್ಷಿ  ಇಬ್ಬರಿಗೂ ಒಂದೊಂದು ಹಸುರು ಟೊಪ್ಪಿ ಕೊಟ್ಟರು. ಪುಟ್ಟ ಆಮೆಯದು ಪುಟ್ಟ ತಲೆ. ಹಾಗಾಗಿ ಅದಕ್ಕೆ ಪುಟ್ಟ ಟೊಪ್ಪಿ - ಅರ್ಧ ಸೇಬು ಹಣ್ಣಿನ ಗಾತ್ರದ್ದು. ಹಸುರು ಟೊಪ್ಪಿ ತಲೆಗಿಟ್ಟ ಪುಟ್ಟ ಆಮೆ ಚಂದ ಕಂಡಿತು.

Image

ಬೀಜ ಮೊಳೆಯದ ಒಣಜಮೀನಿನಲ್ಲಿ ಹಣ್ಣಿನ ತೋಟ

“ಬಾ, ಬೇಗ ಬಾ, ಒಮ್ಮೆ ಈ ಮಣ್ಣು ನೋಡು” ಎಂದು ಮಡದಿ ಎರ್ರಮ್ಮನನ್ನು ಕೂಗಿ ಕರೆದ ಎನಿಮಲ ಗೋಪಾಲ. ಉರಿಬಿಸಿಲನ್ನೂ ಲೆಕ್ಕಿಸದೆ, ಇನ್ನೊಂದು ಮಾವಿನ ಗಿಡದ ಹತ್ತಿರ ಓಡಿ ಹೋಗಿ, ಅದರ ಬುಡದಿಂದ ಒಂದು ಮುಷ್ಠಿ ಒದ್ದೆ ಮಣ್ಣನ್ನೆತ್ತಿ ಎರ್ರಮ್ಮನಿಗೆ ತೋರಿಸಿದ. ಅವನ ಕಣ್ಣುಗಳಲ್ಲಿ ಅಚ್ಚರಿ, ಧ್ವನಿಯಲ್ಲಿ ರೋಮಾಂಚನ. ಯಾಕೆಂದರೆ ತಾನೊಂದು ಹಣ್ಣಿನ ತೋಟ ಮಾಡಿ, ಸಸಿಗಳಿಗೆ ನೀರು ಹಾಯಿಸುತ್ತೇನೆಂದು ಕನಸಿನಲ್ಲೂ ಕಲ್ಪಿಸಿರದ ಗೋಪಾಲನ ಬರಡು ಜಮೀನಿನಲ್ಲಿ ಇಂದು ನಳನಳಿಸುತ್ತಿವೆ ೧೬೦ ಮಾವಿನ ಸಸಿಗಳು.

Image

ಗುಬ್ಬಿ

ಗುಬ್ಬಿ ಗುಬ್ಬಿ ಕಾಡು ಗುಬ್ಬಿ ಗೂಡು ಕಟ್ಟಿತು

ಕಾಡು ನಾಡು ಬೆಸೆದ ಪಾಡು ಹಾಡು ಹುಟ್ಟಿತು

ದೊಡ್ಡ ಸಣ್ಣ ಮರವ ಸುತ್ತಿ ಶಾಲೆ ನಡೆಯಿತು

ಜನುಮ ಕೊಟ್ಟ ಕಾಡೆ ಅದಕೆ ಗುರುವು ಆಯಿತು

ಪುರ್ರ ಪುರ್ರ ರೆಕ್ಕೆಬಡಿದು ದಾರಿ ನಡೆಯಿತು

ಚೀಂವ್ ಚೀಂವ್ ಕೂಗಿ ಕೂಗಿ ಹರಟೆಹೊಡೆಯಿತು.

ನೂರು ಬಾರಿ ಇಟ್ಟು ಅಳಿಸಿ ಬರಹ ತಿದ್ದಿತು

ಕಾಡು ಕಲಿಸಿಕೊಟ್ಟ ಕಲಿಕೆ ಮಂತ್ರವಾಯಿತು.

ಬದುಕ ಬರಹ ಕಲಿತ ಗುಬ್ಬಿ ಗೂಡು ಕಟ್ಟಿತು

ಗೂಡಿನೊಳಗೆ ಅಂದದೆರಡು ಕವಿತೆ ಬರೆಯಿತು

ಕಾಲ ಬೆಳೆದು ದೇವನೊಲಿದು ಜೀವ ಬಳೆಯಿತು

ಪ್ರಾಸ ಛಂದ ದಂತೆ ಗುಟುಕು ಕವಿತೆ ಉಲಿಯಿತು.

ತಾಯಿ ತಂದೆ ಮರಿಗಳಿಂತು ಬದುಕುತಿದ್ದವು

ಕಾಡು ನಾಡಿನೆಲ್ಲ ಮನವು ಹರಸುತಿದ್ದವು

ಹನಿಗವನ

ಹುಡುಗಿಯರೇ

ನಗುವ ಹುಡುಗರ ನೋಡಿ

ನಂಬಬೇಡಿ

ನಗುನಗುತ್ತಲೆ

ಕಟ್ಟುವರಿವರು

ತಾಳಿ

ಬೇಡಿ ಬೇಡಿ.

ಹನಿಗವನ

ಮರಹೇಳಿತು 

ಕೊಂಬೆಗೆ ಗೂಡನಂಟಿಸಬಂದ 

ಹಕ್ಕಿಗೆ-

ಹಕ್ಕಿಯೇ ಒಂದು ಹಾಡ ಹಾಡು.

ಹಕ್ಕಿ ಹೇಳಿತು-

ಹಾಡುತ್ತೇನೆ,

ಆದರೆ, ಕಾಯಬೇಕು

ನೀನು ನನ್ನ ಗೂಡು.

 

 

 

 

ಹಂಬಲ

ಎಲ್ಲಿಹೋದವೋ ದಿನಗಳೆಲ್ಲಿ ಹೋದವೋ?

ಎಲ್ಲಿ ಹೋದವೋ ದಿನಗಳೆಲ್ಲಿಹೋದವೋ

ಇರುವೆ ಸಾಲ ಕಂಡು ಕುಣಿವ

ಗುಬ್ಬಿಗೂಡನರಸಿ ಬರುವ

ಹಸಿರ ಬಯಲ ಹಿಮದಮಣಿಯ

ಒರೆಸಿ ಹರುಷಪಡುವ ದಿನಗಳೆಲ್ಲಿ ಹೋದವೋ?

ಯಾವ ಮರದಲೆಂತ ಹಣ್ಣು 

ಯಾವ ಹಕ್ಕಿಗೆಂಥ ಬಣ್ಣ

ಯಾವ ಗಿಡಕದೆಂಥ ಹೂ

ಹಣ್ಣು ಬಣ್ಣ ಎಂದ ದಿನಗಳೆಲ್ಲಿ ಹೋದವೋ?

ಮಳೆಯ ನೀರ ಹೊನಲಿನಲಿ

ದೋಣಿಬಿಟ್ಟು ನೋಡಿ ನಲಿವ

ದುಂಬಿಗಳ ಬಾಲಕೆಲ್ಲ ಬಾಳೆನಾರ ಬಿಗಿದು  ಬಿಡುವ

ಬೇಲಿಹಾರಿ ಮರವನೇರಿ

ಕೋತಿಗೆ ಸವಾಲು ಹೋಡೆವ

ಚಿಂತೆ ಕಂತೆಯಿರದ ದಿನಗಳೆಲ್ಲಿ ಹೋದವೋ?

ಹಸುರ ಚಿಗುರ ಪೀಪಿಯೂದಿ 

ಹಕ್ಕಿದನಿಯ ಹಾಡಿದ

ಕಲ್ಲತೇದು ಬಣ್ಣ ಬಳಿದು

ರಾಮಾಯಣ ಮಾಡಿದ

“ಪದ್ಮಶ್ರೀ” ರೈತ ರಾಮ್ ಶರಣ್ ವರ್ಮಾರ ವಾರ್ಷಿಕ ಆದಾಯ ರೂ.೪೮ ಲಕ್ಷ!

“ಬಾಳೆ ರಾಜ” ಎಂದು ಪ್ರಖ್ಯಾತರಾಗಿರುವ ರಾಮ್ ಶರಣ್ ವರ್ಮಾ ೨೦೧೯ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಅವರ ಸಾಮ್ರಾಜ್ಯ ಅಂದರೆ ಬಾಳೆ ತೋಟ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಸುಮಾರು ೩೦ ಕಿಮೀ ದೂರದಲ್ಲಿ, ಬಾರಬಂಕಿ ಜಿಲ್ಲೆಯ ದೌಲತ್‍ಪುರ ಗ್ರಾಮದಲ್ಲಿದೆ.
ಅಲ್ಲಿ ಅವರ ಕುಟುಂಬದ ಹಿಂದಿನ ಮೂರು ತಲೆಮಾರುಗಳದ್ದು ಬಡತನದ ಬದುಕು. ಹತ್ತನೆಯ ತರಗತಿಯ ನಂತರ ಶಿಕ್ಷಣ ಮುಂದುವರಿಸುವ ಕನಸು ಕಂಡಿದ್ದರು ರಾಮ್ ಶರಣ್ ವರ್ಮಾ. ಆದರೆ ಕುಟುಂಬದ ಬಡತನದಿಂದಾಗಿ ಅವರೂ ಕೃಷಿಯಲ್ಲಿ ತೊಡಗಬೇಕಾಯಿತು.

Image

ದಶಾವತಾರ - ನಾನು ನೋಡಿದ ಹಳೆಯ ಸಿನಿಮಾ

ದಶಾವತಾರ ಎಂದರೆ ವಿಷ್ಣುವಿನ ಹತ್ತು ಅವತಾರಗಳು. ಈ ಬಗ್ಗೆ ಸರಿಯಾಗಿ ತಿಳಿಯಲು ಯೂಟ್ಯೂಬ್ನಲ್ಲಿ ಇರುವ ದಶಾವತಾರ ಚಲನಚಿತ್ರವನ್ನು ಇತ್ತೀಚೆಗೆ ನೋಡಿದೆ.

ಜಡ್ಜ್ ಪಾಠ ಕಲಿತರು

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.

ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.

Image