ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು

ಪುಸ್ತಕದ ಲೇಖಕ/ಕವಿಯ ಹೆಸರು
ವಿನಾಯಕ ಭಟ್ಟ/ರೋಹಿತ್ ಚಕ್ರತೀರ್ಥ/ಗೀರ್ವಾಣಿ/ವೃಷಾಂಕ ಭಟ್
ಪ್ರಕಾಶಕರು
ಅಯೋಧ್ಯಾ ನಂ ೮೭೭, ೩ನೇ ಮಹಡಿ, ೧ನೇ ಇ ಮುಖ್ಯ ರಸ್ತೆ, ಗಿರಿ ನಗರ, ಬೆಂಗಳೂರು ೫೬೦೦೮೫
ಪುಸ್ತಕದ ಬೆಲೆ
ರೂ.100.00

ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು ಪುಸ್ತಕವು ಬಾಂಗ್ಲಾ ಹಿಂದುಗಳ ಮೇಲಾದ ಇಸ್ಲಾಮಿಕ್ ಕ್ರೌರ್ಯದ ಕತೆಗಳನ್ನು ಹೇಳುತ್ತದೆ. ಬೆನ್ನುಡಿಯಲ್ಲಿ ಭಾರತದ ಗೃಹ ಮಂತ್ರಿ ಅಮಿತ್ ಶಾ ಬರೆಯುತ್ತಾರೆ ೧೯೪೭ರಲ್ಲಿ ಭಾರತದ ವಿಭಜನೆ ಆಗದೇ ಇರುತ್ತಿದ್ದರೆ ಇಂದು ಸಿಎಎ ಅಗತ್ಯ ಇರುತ್ತಿರಲಿಲ್ಲ. ಅದರಲ್ಲೂ ಜಾತಿಯ ಆಧಾರದಲ್ಲಿ ದೇಶವನ್ನು ವಿಭಜಿಸಿದ್ದು ದೊಡ್ಡ ತಪ್ಪು. 

ಭಾರತೀಯ ಮುಸಲ್ಮಾನರು ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಭಾಪತಿ, ಚುನಾವಣಾ ಆಯುಕ್ತರಾದರು. ಆದರೆ ಪಾಕ್-ಬಾಂಗ್ಲಾ-ಅಫ್ಘಾನಿಸ್ಥಾನದ ಅಲ್ಪಸಂಖ್ಯಾತರು ತಮ್ಮ ಧರ್ಮ, ಜೀವ ಮತ್ತು ಮಹಿಳೆಯರ ಗೌರವದ ರಕ್ಷಣೆಗಾಗಿ ಭಾರತಕ್ಕೆ ಶರಣಾರ್ಥಿಗಳಾಗಿ ಬಂದಿದ್ದಾರೆ. ಅವರ ರಕ್ಷಣೆ ನಮ್ಮ ಜವಾಬ್ದಾರಿ. 

ಮೃತ ಸಮುದ್ರದ ಬಗ್ಗೆ ಒಂದಿಷ್ಟು…

ಏನಿದು ಮೃತ ಸಮುದ್ರ ಅಥವಾ ಡೆಡ್ ಸೀ ಎಂದು ಕೊಂಡಿರಾ? ಬಹುತೇಕ ಮಂದಿ ಈ ಸಮುದ್ರದ ಬಗ್ಗೆ ಕೇಳಿ ಇರುವಿರಿ. ಆದರೆ ಇದಕ್ಕೆ ಆ ಹೆಸರು ಹೇಗೆ ಬಂತು ಮತ್ತು ಅದರ ವಿಶೇಷತೆಗಳು ಏನೇನು ಎಂಬುದನ್ನು ತಿಳಿದುಕೊಳ್ಳೋಣ. ನಿಜಕ್ಕೂ ನೋಡಲು ಹೋದರೆ ಇದೊಂದು ಸಮುದ್ರವೇ ಅಲ್ಲ. ಇದು ಇಸ್ರೇಲ್ ಮತ್ತು ಜೋರ್ಡಾನ್ ದೇಶಗಳ ಭೂಪ್ರದೇಶಗಳಿಂದ ಆವೃತ್ತವಾದ ಒಂದು ಕೊಳ ಅಷ್ಟೇ.

Image

ಭಾರತೀಯ ಚಿತ್ರಕಲೆ - ಭಾಗ ೧

ಮಧುಬನಿ ಚಿತ್ರಕಲೆ
ಈ ಪಾರಂಪರಿಕ ಚಿತ್ರಕಲೆಯ ಮೂಲ ಬಿಹಾರದ ಮಿಥಿಲಾ ಪ್ರದೇಶ. ಮಧುಬನಿ ಜಿಲ್ಲೆಯಲ್ಲಿ ಈ ಶೈಲಿಯ ಚಿತ್ರಗಳನ್ನು ರಚಿಸುವ ಕಾರಣ ಅದೇ ಹೆಸರು ಬಂದಿದೆ.

ಪುರಾತನ ಕಾಲದಿಂದಲೂ ತಮ್ಮ ಮನೆಯ ಗೋಡೆ ಮತ್ತು ನೆಲದಲ್ಲಿ ಈ ಶೈಲಿಯ ಚಿತ್ರಗಳನ್ನು ಅಲ್ಲಿನ ಮಹಿಳೆಯರು ರಚಿಸುತ್ತಿದ್ದರು. ಅದಕ್ಕಾಗಿ ಅವರು ಬಳಸುವುದು ಅರೆದ ಅಕ್ಕಿ ಮತ್ತು ಬಣ್ಣಗಳ ಮಿಶ್ರಣದ ಅಂಟು (ಪೇಸ್ಟ್). ಅಲ್ಲಿ ಮಗುವಿನ ಜನ್ಮ, ಚೌರ (ತಲೆಗೂದಲು ಕತ್ತರಿಸುವ) ಸಮಾರಂಭ, ಹಬ್ಬಗಳು, ಉಪವಾಸ - ಈ ಸಂದರ್ಭಗಳಲ್ಲಿ ಮತ್ತು ದೇವರನ್ನು ಪೂಜಿಸಲಿಕ್ಕಾಗಿ ಮಧುಬನಿ ಚಿತ್ರಗಳನ್ನು ಬಿಡಿಸುವ ವಾಡಿಕೆ.

ಇಲ್ಲಿರುವ ಮೀನುಗಳ ಚಿತ್ರದಲ್ಲಿ ಪಾರಂಪರಿಕ ಗಾಢ ಬಣ್ಣಗಳಲ್ಲಿ ಕಪ್ಪು ಮತ್ತು ಬಿಳುಪಿನ ರೇಖೆಗಳ ವಿನ್ಯಾಸವಿದೆ.

Image

ಕ್ಷಣ ಹೊತ್ತು ಅಣಿ ಮುತ್ತು (ಭಾಗ ೭)

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್. ಷಡಾಕ್ಷರಿ
ಪ್ರಕಾಶಕರು
ರಮಣಶ್ರೀ ಪ್ರಕಾಶನ, ನಂ ೧೬, ರಾಜಾ ರಾಮ ಮೋಹನ ರಾಯ್ ರಸ್ತೆ, ಬೆಂಗಳೂರು ೫೬೦೦೨೫
ಪುಸ್ತಕದ ಬೆಲೆ
ರೂ 100.00

ಕ್ಷಣ ಹೊತ್ತು ಅಣಿ ಮುತ್ತು (ಭಾಗ ೭) ಇದು ಎಸ್ ಷಡಾಕ್ಷರಿಯವರ ಮುಂದುವರೆದ ಅಂಕಣ ಸರಣಿಯ ಪುಸ್ತಕ. ಮೊದಲು ಪ್ರಕಟವಾದ ಪುಸ್ತಕಗಳು ಜನ ಪ್ರಿಯವಾಗಿದೆ. ಈ ಪುಸ್ತಕದಲ್ಲಿನ ಬರಹಗಳು ಲೇಖಕರು ಕನ್ನಡ ಪ್ರಭ ಪತ್ರಿಕೆಯಲ್ಲಿ ದಿನಂಪ್ರತಿ ಬರೆದ ಲೇಖನಗಳ ಸಂಗ್ರಹ. ೭೫ ಸಣ್ಣ ಸಣ್ಣ ಬರಹಗಳು ಓದಿಸಿಕೊಂಡು ಹೋಗುತ್ತವೆ. ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬಲ್ಲ ಅನೇಕ ವಿಷಯಗಳನ್ನು ಲೇಖಕರು ಸಣ್ಣ ಸಣ್ಣ ಕಥೆ, ದೃಷ್ಟಾಂತಗಳ ಮುಖಾಂತರ ತಿಳಿಸಿಕೊಟ್ಟಿದ್ದಾರೆ. ಸರಾಗವಾಗಿ ಓದಿಸಿಕೊಂಡು ಹೋಗುವ ಈ ಬರಹಗಳು ನಮ್ಮ ಜೀವನಕ್ಕೆ ಮಾರ್ಗದರ್ಶಕವಾಗುವಲ್ಲಿ ಸಂಶಯವಿಲ್ಲ.

ಕೋಲಾರ: ನೀರಿಗಾಗಿ ಹಾಹಾಕಾರ

ಮಾರ್ಚ್ ೩, ೨೦೧೬ರಂದು ಬೆಂಗಳೂರಿನ ಬಳ್ಳಾರಿ ರಸ್ತೆ ರೈತ ಪ್ರತಿಭಟನಾಕಾರರ ಟ್ರಾಕ್ಟರುಗಳಿಂದ ತುಂಬಿ ಹೋಯಿತು. ವಾಹನ ಸಂಚಾರ ಸ್ಥಗಿತವಾಗಿ, ಪೊಲೀಸರು ಕೋಲಾರ ಮತ್ತು ಚಿಕ್ಕಬಳ್ಳಾಪುರದ ೧೦,೦೦೦ ರೈತ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಿದರು.

ಆ ಪ್ರತಿಭಟನೆಯ ಮುಂದುವರಿದ ಭಾಗವಾಗಿ ೧೬ ಜೂನ್ ೨೦೧೬ರಿಂದ ನಾಗರಿಕರ ನಿರಂತರ ಧರಣಿ ಆರಂಭ - ಕೋಲಾರ ನಗರದ ಕಾಲೇಜ್ ವೃತ್ತದಲ್ಲಿ - ತಮ್ಮ ಜಿಲ್ಲೆಯ ನೀರಿನ ಕೊರತೆಗೆ ಸರಕಾರ ಶಾಶ್ವತ ಪರಿಹಾರ ಒದಗಿಸಬೇಕೆಂಬ ಬೇಡಿಕೆ. ಯಾಕೆಂದರೆ, ೨೦೧೬ರಲ್ಲಿಯೂ ಕೋಲಾರದಲ್ಲಿ ಅತ್ಯಲ್ಪ ಮಳೆ. ಶೇಕಡಾ ೫೦ರಷ್ಟು ಬೆಳೆ ನಷ್ಟವಾಗಿ ರೈತರು ಕಂಗಾಲು.

Image

ನನಗೂ ಲವ್ವಾಗಿದೆ

ಪುಸ್ತಕದ ಲೇಖಕ/ಕವಿಯ ಹೆಸರು
ಕೆ.ಗಣೇಶ್ ಕೋಡೂರು
ಪ್ರಕಾಶಕರು
ಬೆನಕ ಬುಕ್ಸ್ ಬ್ಯಾಂಕ್, ಯಳಗಲ್ಲು, ಕೋಡೂರು-ಅಂಚೆ, ಹೊಸನಗರ, ಶಿವಮೊಗ್ಗ-೫೭೭೪೧೮
ಪುಸ್ತಕದ ಬೆಲೆ
ರೂ.೫೦.೦೦

ವೃತ್ತಿಯಲ್ಲಿ 'ನಿಮ್ಮೆಲ್ಲರ ಮಾನಸ' ಎಂಬ ಒಂದು ಸದಭಿರುಚಿಯ ಪತ್ರಿಕೆಯ ಸಂಪಾದಕರಾಗಿದ್ದು ಕೊಂಡು ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ ಕೆ.ಗಣೇಶ್ ಕೋಡೂರು ಇವರು. ನನಗೂ ಲವ್ವಾಗಿದೆ ಪುಸ್ತಕವು ೨೦೧೬ರಲ್ಲಿ ಮೊದಲ ಮುದ್ರಣ ಕಂಡಿದ್ದು ಯುವ ಜನಾಂಗಕ್ಕೆ ಪ್ರೀತಿಯ ಬಗ್ಗೆ ಆಪ್ತವಾಗಿ ಬರೆಯುತ್ತಾ ಹೋಗುತ್ತಾರೆ. ಸರಳವಾದ ಭಾಷೆ ಈ ಸಣ್ಣ ಪುಸ್ತಕವನ್ನು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. 

ಕೆ.ಗಣೇಶ್ ಕೋಡೂರು
ಬೆನಕ ಬುಕ್ಸ್ ಬ್ಯಾಂಕ್, ಯಳಗಲ್ಲು, ಕೋಡೂರು-ಅಂಚೆ, ಹೊಸನಗರ, ಶಿವಮೊಗ್ಗ-೫೭೭೪೧೮
ರೂ.೫೦.೦೦
 

ಅಮೂಲ್ಯ ಔಷಧಿಗಳ ಆಗರ ನುಗ್ಗೇಕಾಯಿ

ಬಹಳ ಹಿಂದೆ ಉಡುಪಿ ಜಿಲ್ಲಾ ಕೃಷಿಕರ ಸಂಘದ ಕೃಷಿ ಮಹೋತ್ಸವದ ಸಂದರ್ಭದಲ್ಲಿ ನಮ್ಮ ಹಿತ್ತಲಲ್ಲಿ ಗಿಡ ಮೂಲಿಕೆಗಳು ಕುರಿತಾಗಿ ಎಂ ದಿನೇಶ್ ನಾಯಕ್ ವಿಟ್ಲ, ಇವರು ನಮ್ಮ ಸುತ್ತಮುತ್ತ ಇರುವ, ಮಹತ್ವ ಗೊತ್ತಿಲ್ಲದ ಕೆಲವೊಂದು ಔಷಧೀಯ ಗಿಡಗಳು, ಮರಗಳು, ಮತ್ತು ಬಳ್ಳಿಗಳ ಬಗ್ಗೆ ಜನರಿಗೆ ಅರ್ಥವಾಗುವಂತೆ ಹೇಳಿದ್ದರು. ಅದರಲ್ಲಿ ಒಂದು ನುಗ್ಗೆ ಕಾಯಿ. ಇದು ನಮಗೆಲ್ಲಾ ಪರಿಚಿತ ಮರ. ಇದು ಕೇವಲ ತರಕಾರಿ ಉದ್ದೇಶಕ್ಕೆ ಮಾತ್ರ ಬಳಕೆಯಾಗುವ ಮರವಲ್ಲ. ಮನೆಯ ಹಿತ್ತಲಿನ ಒಂದು ಅಮೂಲ್ಯ ಔಷಧೀಯ ಗಿಡ.    

Image

ತೊಂದರೆ

ಬುದ್ಧಿವಂತಿಕೆಯೆ ನಮ್ಮೀ ಜಗಕೆ

ಎಂದಿಗು ದೊಡ್ಡ ತೊಂದರೆ

ದಡ್ಡರೆ ಉಳಿದರು ಲೋಕದಿ ನೆಮ್ಮದಿ

ಬುದ್ಧಿಯೆ ಮನುಜಗೆ ಬೆನ್ನ ಬರೆ

 

ಯಾಕೆ ಬೇಕಿತ್ತು ಐನ್ ಸ್ಟೈನನಿಗೆ 

ಕಾಣದ ಅಣುಗಳ ಸಹವಾಸ?

ಕಲಾಶ್ನಿಕೋವ್ ರೈಫಲು ಮಾಡಿದ

ಕೊಡಬೇಕಿತ್ತವನಿಗೆ ಸೆರೆವಾಸ

 

ಕರೆಂಟು ಇಲ್ಲದ ಲೋಕದ ನೆಮ್ಮದಿ 

ಫೆರಡೇ ಬಂದು ಕೆಡಿಸಿದನು

ಹಗಲು ದುಡಿದು ಕತ್ತಲೆಗೊಂದಾಗುವ

ದಂಪತಿಗಳನು ಬಿಡಿಸಿದನು

 

ರೈಲುಗಾಡಿ ಅಂದು ಓಡದೆ ಇದ್ದರು

ಬದುಕಿನ ಬಂಡಿ ಓಡಿತ್ತು

ಅದಕೂ ಮಿಗಿಲಾದುದೆ ಬೇಕೆಂದರೆ

ಎತ್ತಿನ ಗಾಡಿಯೆ ಸಾಕಿತ್ತು

 

ಬಸ್ಸು ಕಾರು ಎರೋಪ್ಲೇನುಗಳ

ಹೇಳಿದನೇ ಹಿಂದಿದ್ದ ಮನು

ಹಟಮಾರಿ ಪುಟ್ಟ ಮೀನು

ಬಹಳ ಹಿಂದೆ ಒಂದು ಕೊಳದಲ್ಲಿ ಪುಟ್ಟ ಮೀನೊಂದಿತ್ತು. ಒಂದು ಚೋಂದಕಪ್ಪೆ ಅದರ ಗೆಳೆಯ. ಅವರಿಬ್ಬರೂ ಯಾವಾಗಲೂ ಜೊತೆಯಾಗಿ ಈಜುತ್ತಾ, ಆಹಾರ ಹುಡುಕುತ್ತಾ ಆಟವಾಡುತ್ತಿದ್ದರು.

ಅದೊಂದು ದಿನ ಬೆಳಗ್ಗೆ ಚೋಂದಕಪ್ಪೆಯ ಬಾಲದ ಹತ್ತಿರ ಒಂದು ಜೊತೆ ಕಾಲುಗಳನ್ನು ಕಂಡು ಮೀನಿಗೆ ಅಚ್ಚರಿ. ಚೋಂದಕಪ್ಪೆಗೆ ಕಾಲುಗಳು ಯಾಕೆ ಮೂಡಿವೆ ಎಂದು ಕೇಳಿತು ಪುಟ್ಟ ಮೀನು.

"ನಾನು ಮೀನಲ್ಲ. ನಾನು ಚೋಂದಕಪ್ಪೆ ಅಂದರೆ ಮರಿಕಪ್ಪೆ. ನಾನು ದೊಡ್ಡವನಾದಾಗ ಈ ಕೊಳದಲ್ಲಿ ವಾಸ ಮಾಡೋದಿಲ್ಲ" ಎಂದು ವಿವರಿಸಿತು ಚೋಂದಕಪ್ಪೆ.

“ನೀನು ಸುಳ್ಳು ಹೇಳುತ್ತಿದ್ದಿ” ಎಂದಿತು ಪುಟ್ಟ ಮೀನು. "ನೀನೀಗ ನನ್ನ ಮಾತು ನಂಬದಿದ್ದರೆ, ಕೆಲವು ದಿನಗಳ ನಂತರ ನೀನೇ ನೋಡುವಿಯಂತೆ" ಎಂದಿತು ಚೋಂದಕಪ್ಪೆ.

Image

ಲೂಲು ಟ್ರಾವೆಲ್ಸ್

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಸಾದ್ ಶೆಣೈ ಕಾರ್ಕಳ
ಪ್ರಕಾಶಕರು
ಬಿಳಿಕಲ್ಲು ಪ್ರಕಾಶನ ಬೋರ್ಗಲ್‌ಗುಡ್ಡೆ, ನಿಟ್ಟೆ ಅಂಚೆ, ಕಾರ್ಕಳ ೫೭೪ ೧೧೦
ಪುಸ್ತಕದ ಬೆಲೆ
೧೦೦.೦೦

ಪ್ರಸಾದ್ ಶೆಣೈ ಕಾರ್ಕಳ ಇವರ ಚೊಚ್ಚಲ ಕಥಾ ಸಂಕಲನವು ಬಹಳಷ್ಟು ವಿಷಯಗಳಿಂದ ಗಮನ ಸೆಳೆಯುತ್ತದೆ. ೨೦೧೫ರಲ್ಲಿ ಪ್ರಥಮ ಮುದ್ರಣ ಕಂಡ ಈ ಕಥಾ ಸಂಕಲನದ ಮುಖಪುಟ ಮತ್ತು ಆಕಾರ ಗಮನಿಸುವಾಗ ಅತ್ಯಂತ ಆತ್ಮೀಯತೆ ಕಂಡು ಬರುತ್ತದೆ. ೧೭ ಎಕ್ಸ್‌ಪ್ರೆಸ್ ಕತೆಗಳನ್ನು ಹೊಂದಿರುವ ಈ ಪುಸ್ತಕಕ್ಕೆ ಕಥೆಗಾರ ಅಬ್ದುಲ್ ರಶೀದ್ ಇವರು ಮುನ್ನುಡಿ ಬರೆದಿದ್ದಾರೆ. ಪ್ರಸಾದ್ ಶೆಣೈ ಇವರು ತಾವು ಹುಟ್ಟಿ ಬೆಳೆದ ಪರಿಸರ, ಊರು ಇದರ ತುಂಬೆಲ್ಲಾ ಸುತ್ತಾಡಿದ್ದಾರೆ ಮತ್ತು ಕಥೆ ಓದುತ್ತಾ ಓದುತ್ತಾ ನಮ್ಮನ್ನೂ ಸುತ್ತಿಸುತ್ತಾರೆ. ಒಮ್ಮೆ ಓದಿ ನೋಡುವುದರಲ್ಲಿ ಯಾವ ಮೋಸವೂ ಇಲ್ಲ.