ಸಾಗರ ಸಂಪನ್ಮೂಲಗಳನ್ನು ಮಾಲಿನ್ಯದಿಂದ ರಕ್ಷಿಸೋಣ ಬನ್ನಿ!!
ಜೂನ್ ೮ ವಿಶ್ವ ಸಾಗರ ದಿನ. ವಿಶ್ವ ಪರಿಸರ (ಜೂನ್ ೫)ದಿನ ಕಳೆದು ಮೂರೇ ದಿನಕ್ಕೆ ವಿಶ್ವ ಸಾಗರ ದಿನ. ಇದು ಒಂದಕ್ಕೊಂದು ಸಂಬಂಧಿತ ದಿನಗಳೇ. ಸಾಗರ ಅಥವಾ ಸಮುದ್ರ ದಿನವನ್ನು ೨೦೦೮ ಡಿಸೆಂಬರ್ ೫ರಂದು ವಿಶ್ವ ಸಂಸ್ಥೆಯು ಅಂಗೀಕರಿಸಿತು. ಸಮುದ್ರ ನಮ್ಮ ಭೂಮಿಯ ಶ್ವಾಸಕೋಶದ ರೀತಿ ಕೆಲಸ ಮಾಡುತ್ತವೆ. ಸಾಗರದಲ್ಲಿರುವ ಅಸಂಖ್ಯಾತ ಹವಳದ ಬಂಡೆಗಳು ಮತ್ತು ಲಕ್ಷಾಂತರ ಸಮುದ್ರ ಸಸ್ಯಗಳು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಇದರಿಂದ ಭೂಮಿಯ ಮೇಲೆ ಆಮ್ಲಜನಕ ಪ್ರಮಾಣ ಸರಿತೂಗಿಸಲ್ಪಡುತ್ತದೆ. ಇಲ್ಲವಾದಲ್ಲಿ ನಮಗೆ ಉಸಿರಾಡಲು ಆಮ್ಲಜನಕದ ಕೊರತೆ ಉಂಟಾಗುತ್ತಿತ್ತು.
- Read more about ಸಾಗರ ಸಂಪನ್ಮೂಲಗಳನ್ನು ಮಾಲಿನ್ಯದಿಂದ ರಕ್ಷಿಸೋಣ ಬನ್ನಿ!!
- Log in or register to post comments