ಬಾಳಿಗೊಂದು ಚಿಂತನೆ - 20

ನದಿಯನ್ನು ನಾವೆಯ ಮೂಲಕ ದಾಟಿಸಿದ ಅಂಬಿಗನಿಗೆ ನಾವು ಶುಲ್ಕವನ್ನು ಕೊಡುತ್ತೇವೆ. ಅದು ಅವನ ಜೀವನಕ್ಕಾಗಿರುವ ಉದ್ಯೋಗವಾಗಿದೆ. ಇಲ್ಲಿ *ಸದ್ಗುರು*ಎನಿಸಿಕೊಂಡವರು ತಾವು ಭವಸಾಗರವನ್ನು ದಾಟಿದ ಮೇಲೆ, ಮತ್ತೊಬ್ಬರನ್ನು ದಾಟಿಸಲು ಏನನ್ನೂ ಅಪೇಕ್ಷೆ ಪಡಲಾರರು.*ಪರೋಪಕಾರಾಯ ಬಲಂ ಮನಃ*ಎಂಬಂತೆ ಅವರ ಉದ್ದೇಶ ಪರೋಪಕಾರ ಮಾತ್ರ.

Image

‘ನಿಂದನೆ’ ಬದಲಾಗಿ ‘ಸ್ಪಂದನೆ’ ಇರಲಿ

ಒಮ್ಮೆ ಒಬ್ಬಾತ ಮೂರು ದಿನಗಳ ಕಾಲ ಕಷ್ಟಪಟ್ಟು ಒಂದು ಅದ್ಭುತವಾದ ಚಿತ್ರಕಲೆಯನ್ನು ರಚಿಸಿದ. ಆ ಚಿತ್ರಕಲೆ ಹೇಗಿದೆ ಎಂದು ಜನಗಳ ಅಭಿಪ್ರಾಯ ತಿಳಿಯಬೇಕೆಂದು ಆಸೆಪಟ್ಟ.  ನಾಲ್ಕು ರಸ್ತೆ ಸೇರುವ ವೃತ್ತದಲ್ಲಿ ಅದನ್ನು ಪ್ರದರ್ಶನ ಮಾಡಿದ. ಅದರ ಕೆಳಗೆ ಹೀಗೊಂದು ಸಾಲನ್ನು ಬರೆದಿದ್ದ "ನಾನು ಮೊದಲ ಬಾರಿ ಬರೆದ ಚಿತ್ರಕಲೆ ಇದು. ಇದರಲ್ಲಿ  ಲೋಪಗಳು ನಿಮಗೆ ಕಾಣಿಸಬಹುದು.

Image

ನಮ್ಮ ಹೆಮ್ಮೆಯ ಭಾರತ (ಭಾಗ 39 - 40)

೩೯.ಜಗತ್ತಿನ ಆಹಾರ ಮತ್ತು ತರಕಾರಿ ವಹಿವಾಟಿನಲ್ಲಿ ಭಾರತದ ಪ್ರಧಾನ ಪಾತ್ರ
ಭಾರತದಲ್ಲಿ ವಿಭಿನ್ನ ಭೌಗೋಳಿಕ ಮತ್ತು ಹವಾಮಾನ ವಲಯಗಳು ಇರುವ ಕಾರಣ ಇಲ್ಲಿ ಉತ್ಪಾದನೆಯಾಗುವ ಹಣ್ಣು ಮತ್ತು ತರಕಾರಿಗಳ ವೈವಿಧ್ಯತೆ ಬೆರಗು ಹುಟ್ಟುಸುತ್ತದೆ. ಹಣ್ಣು ಉತ್ಪಾದನೆಯಲ್ಲಿ ಭಾರತಕ್ಕೆ ಜಗತ್ತಿನಲ್ಲೇ ಪ್ರಥಮ ಸ್ಥಾನ - ಜಗತ್ತಿನ ಒಟ್ಟು ಹಣ್ಣು ಉತ್ಪಾದನೆಯಲ್ಲಿ ಭಾರತದ ಪಾಲು ಶೇ.೮.

ತರಕಾರಿ ಉತ್ಪಾದನೆಯಲ್ಲಿ ಭಾರತಕ್ಕೆ ಜಗತ್ತಿನಲ್ಲಿ ಚೀನಾದ ನಂತರ ಎರಡನೇ ಸ್ಥಾನ - ಜಗತ್ತಿನ ಒಟ್ಟು ಉತ್ಪಾದನೆಯಲ್ಲಿ ಭಾರತದ ಪಾಲು ಶೇಕಡಾ ೧೫.

Image

ಭೂಮಿಯ ಒಳಗೆ, 2000 ಅಡಿಗಳ ಕೆಳಗೆ..!

ನಾನು ಈಗಾಗಲೇ ಬಸ್ಸಿನಲ್ಲಿ, ವಿಮಾನದಲ್ಲಿ, ಹಡಗಿನಲ್ಲಿ, ಎತ್ತು ಕುದುರೆ ಗಾಡಿಯಲ್ಲಿ, ರೈಲಿನಲ್ಲಿ, ಕಾಲ್ನಡಿಗೆಯಲ್ಲಿ, ಸಮುದ್ರದ ಒಳಗಿನ ಯುರೋ ರೈಲಿನಲ್ಲಿ  ಪ್ರಯಾಣ ಮಾಡಿದ್ದೇನೆ. ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯಲ್ಲಿ ಇದೇ ಮೊದಲ ಬಾರಿಗೆ ಭೂಮಿಯ ಒಳಗೆ 2000 ಅಡಿಗಳ ಕೆಳಕ್ಕೆ ಇಳಿದೆ. ಭಯ ಆತಂಕದ ನಡುವೆ ಒಂದು ರೋಚಕ ಅನುಭವ ದೊರೆಯಿತು.

Image

ಕರಾವಳಿ ಕರ್ನಾಟಕದ ಅಭಿವೃದ್ಧಿಯ ಹರಿಕಾರ - ಉಳ್ಳಾಲ ಶ್ರೀನಿವಾಸ ಮಲ್ಯ

ಉಳ್ಳಾಲ ಶ್ರೀನಿವಾಸ ಮಲ್ಯರನ್ನು ಇಂದಿನ ರಾಜಕಾರಣಿಗಳು ಮರೆತು ಬಹಳವೇ ಸಮಯವಾಗಿದೆ. ಆದರೆ ಸರ್ವಕಾಲಕ್ಕೂ ಸಲ್ಲುವ ದೂರದೃಷ್ಟಿಯುಳ್ಳ ರಾಜಕಾರಣಿಯಾಗಿದ್ದ ಶ್ರೀನಿವಾಸ ಮಲ್ಯರವರು ಕರಾವಳಿ ಕರ್ನಾಟಕದ ಅಭಿವೃದ್ಧಿಯ ಹರಿಕಾರ ಎಂದು ನಾವು ಹೆಮ್ಮೆಯಿಂದ ಹೇಳಬಹುದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಶ್ರೀ ರಾಜೇಂದ್ರ ಭಟ್ ಇವರು ಉಳ್ಳಾಲ ಶ್ರೀನಿವಾಸ ಮಲ್ಯರ ಕುರಿತಾಗಿ ಬರೆದ ಲೇಖನವನ್ನು ಸಂಗ್ರಹಿಸಿರುವೆ.

Image

ತುಳುನಾಡಿನ ಸ್ಥಳನಾಮಾಧ್ಯಯನ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ರಘುಪತಿ ಕೆಮ್ತೂರು (ಆರ್. ಕೆ. ಮಣಿಪಾಲ್)
ಪ್ರಕಾಶಕರು
ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಚರಿತ್ರೆ ಮತ್ತು ಪುರಾತತ್ವ ಶಾಸ್ತ್ರ ವಿಭಾಗ, ಶಿರ್ವ
ಪುಸ್ತಕದ ಬೆಲೆ
ರೂ. 400.00, ಮುದ್ರಣ: 2017

*ಡಾ. ರಘುಪತಿ ಕೆಮ್ತೂರು (ಆರ್.ಕೆ. ಮಣಿಪಾಲ್) ಅವರ "ತುಳುನಾಡಿನ ಸ್ಥಳನಾಮಾಧ್ಯಯನ"*

ರಾಷ್ಟ್ರೀಯ ರೈತರ ದಿನ

ಇಂದು ‘ರಾಷ್ಟ್ರೀಯ ರೈತರ ದಿನ’, ರೈತರು ನಮಗೆಲ್ಲರಿಗೂ ಅನ್ನ ನೀಡುವ,ನಮ್ಮ ಹಸಿವನ್ನು ನೀಗಿಸುವ ಮಹಾನ್ ವ್ಯಕ್ತಿಗಳು ಮತ್ತು ಶಕ್ತಿಗಳು ಎನ್ನಬಹುದು. ಹೊಟ್ಟೆ ಹಸಿವು ಎಲ್ಲರಿಗೂ ಇದೆ. ಬಡವ ಶ್ರೀಮಂತ ಎನ್ನುವ ತಾರತಮ್ಯವಿಲ್ಲ. ಹೊಟ್ಟೆ ತುಂಬಲು ಚಿನ್ನದಿಂದ ಸಾಧ್ಯವಿಲ್ಲ, ಅನ್ನವೇ ಆಗಬೇಕಷ್ಟೆ.

Image