ಮರುಕಥನ - ರಾವಣನ ಪಾತ್ರ ಮತ್ತು ಲಕ್ಷ್ಮಣರೇಖೆ
ಒಂದು ಚಾಳಿನಲ್ಲಿ ಅನೇಕ ಸಂಸಾರಗಳಿವೆ. ಅವುಗಳಲ್ಲಿ ಒಂದರಲ್ಲಿ ವಾಸವಾಗಿರುವ ದಂಪತಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಒಂದು ಸಾಮಾಜಿಕ ಕಾರ್ಯಕ್ಕೆಂದು ವಂತಿಗೆ ಸಂಗ್ರಹಿಸಲು ಹೊರಟಾಗ ಇತರರು ನೆರವಾಗುವುದಿಲ್ಲ. ಒಳ್ಳೆಯ ಆರ್ಥಿಕ ಸ್ಥಿತಿಯಲ್ಲಿ ಇದ್ದರೂ ಕೂಡ ಬಗೆಬಗೆಯ ಆಕ್ಷೇಪಗಳನ್ನು ಒಡ್ಡುತ್ತಾರೆ, ವಾದಗಳನ್ನು ಹೂಡುತ್ತಾರೆ. ಆಗ ಈ ದಂಪತಿ ಒಂದು ಉಪಾಯ ಮಾಡುತ್ತಾರೆ; ಪರಿಚಯದ ಒಬ್ಬ ವ್ಯಕ್ತಿ ಇದ್ದಾನೆ - ನೋಡಲು ಒರಟಾಗಿ ಕ್ರೂರವಾಗಿ ಕಾಣುತ್ತಾನೆ. ಆತ ಒಳ್ಳೆಯವನೇ, ಸಭ್ಯಸ್ಥನೇ. ಆತನಿಗೆ ಇವರೆಲ್ಲರ ದೂರವಾಣಿ ಸಂಖ್ಯೆಗಳನ್ನು ಒದಗಿಸಿ, ಗೂಂಡಾ ತರಹ ಮಾತನಾಡಿ ಬೆದರಿಸಲು ಮತ್ತು ಹಣಕ್ಕೆ ಒತ್ತಾಯಿಸಲು ಒಪ್ಪಿಸುತ್ತಾರೆ, ಅದರಂತೆ ಅವನು ಮಾಡುತ್ತಾನೆ. ಈಗ ಅದೇ ಜನ ತೆಪ್ಪಗೆ ಹಣ ಕೊಡುತ್ತಾರೆ!
- Read more about ಮರುಕಥನ - ರಾವಣನ ಪಾತ್ರ ಮತ್ತು ಲಕ್ಷ್ಮಣರೇಖೆ
- Log in or register to post comments