ಬೆಳೆಗಳಿಗೆ ಸಾವಯವ ಗೊಬ್ಬರ ಹಾಕುವುದು ಹೇಗೆ?

ಯಾವುದೇ ಬೆಳೆಯು ಸಂಮೃದ್ಧವಾಗಿ ಬೆಳೆಯಲು ಸರಿಯಾದ ಗೊಬ್ಬರ ಅವಶ್ಯಕ. ಬೆಳೆಗಳಿಗೆ ಸಾವಯವ ಗೊಬ್ಬರಗಳನ್ನು ಸರಿಯಾದ ವಿಧಾನದಲ್ಲಿ ಹಾಕಿದರೆ ಮಾತ್ರ ಅದರ ಫಲಿತಾಂಶ ಹೆಚ್ಚು. ಮನುಷ್ಯ ಎಷ್ಟೇ ಉತ್ತಮ ಆಹಾರ ಸೇವನೆ ಮಾಡಿದರೂ ಸಹ, ಅದು ಸರಿಯಾಗಿ ಜೀರ್ಣ ಆಗಬೇಕಿದ್ದರೆ ಅದರ ಜೊತೆಗೆ ತೇವಾಂಶ ( ನೀರು) ಅಗತ್ಯ. ಅದೇ ರೀತಿಯಲ್ಲಿ ಸಾವಯವ ಗೊಬ್ಬರಗಳನ್ನು ಬಳಸುವಾಗ ಕೆಲವು ಮಾನದಂಡಗಳ ಪ್ರಕಾರ ಅದನ್ನು ಹಾಕಬೇಕು.

Image

ಶಿಕ್ಷಕ ವೃತ್ತಿಯ ರಸನಿಮಿಷ!

ನಾನೊಂದು ಗುಡ್ಡಗಾಡು ಪ್ರದೇಶದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ಮಾಡುವ ಸಂದರ್ಭ. ವಾರ್ಷಿಕೋತ್ಸವ ತಯಾರಿ ನಡೆಯುತ್ತಿತ್ತು, ಆಗೆಲ್ಲಾ ರಾತ್ರಿಯಿಂದ ಬೆಳಗಿನವರೆಗೆ ಹಳ್ಳಿ ಶಾಲೆಗಳಲ್ಲಿ ಮನೋರಂಜನೆ ಪ್ರದರ್ಶನವಿರುತಿತ್ತು. ನಮ್ಮ ಶಾಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು, ನಾನು ಇಬ್ಬರೇ. ವಾರ್ಷಿಕೋತ್ಸವದ ಮುನ್ನಾ ದಿನ ಶಾಲೆಯಿಂದ ಹೊರಡುವಾಗ ಸಂಜೆ ಏಳು ಗಂಟೆಯಾಗಿತ್ತು.

Image

ವರಂಗದ ಕೆರೆ ಬಸದಿ

ಕೊರೋನಾ ಕಾಲದಲ್ಲಿ ಮನೆಯಿಂದ ಹೊರಗೆ ಹೋಗದೇ ಇದ್ದ ನನ್ನ ಗೆಳೆಯ ಶರತ್ ಕೊನೆಗೂ ಬೆಂಗಳೂರು ಬಿಟ್ಟು ತಮ್ಮ ಊರಾದ ಕಾರ್ಕಳಕ್ಕೆ ಬರಲು ಮನಸ್ಸು ಮಾಡಿದರು. ಕೆಲಸ ಹೇಗೂ ಆನ್ ಲೈನ್ ನಲ್ಲೇ ಮಾಡಬಹುದಾದುದರಿಂದ, ಮಗಳಿಗೂ ಶಾಲೆ ಇಲ್ಲದೇ ಮನೆಯಲ್ಲೇ ಇದ್ದು ಬೋರ್ ಆದುದರಿಂದ ತಮ್ಮ ಊರಿಗೆ ಪ್ರಯಾಣ ಬೆಳೆಸಿದರು.

Image

ಖೋಟಾ ನೋಟು ರಹಸ್ಯಗಳು

ಪುಸ್ತಕದ ಲೇಖಕ/ಕವಿಯ ಹೆಸರು
ರವಿಚಂದ್ರನ್
ಪ್ರಕಾಶಕರು
ಸರ್ವ್ ಇಂಡಿಯಾ ಭಾರತ್ ಆರ್ಟ್ಸ್ ಅಸೋಸಿಯೇಷನ್ (ರಿ.) ಹೆಬ್ಬಾಳ, ಬೆಂಗಳೂರು- ೫೬೦೦೨೪
ಪುಸ್ತಕದ ಬೆಲೆ
ರೂ. ೧೭೯.೦೦, ಮುದ್ರಣ: ೨೦೦೨

ಖೋಟಾ ನೋಟು ರಹಸ್ಯಗಳು ಎಂಬ ಈ ಪುಸ್ತಕವು ಹಳೆಯ ಪುಸ್ತಕವಾದುದರಿಂದ ಹಲವಾರು ವಿಷಯಗಳು ಸ್ವಲ್ಪ ಮಟ್ಟಿಗೆ ಈಗಿನ ಸಮಯಕ್ಕೆ ಸರಿಹೊಂದಲಾರವು. ಆದರೂ ಆಗಿನ ಸಮಯದಲ್ಲಿ ನೋಟುಗಳ ವಿಷಯ ತಿಳಿದುಕೊಳ್ಳಲು ಅನುಕೂಲಕರವಾದ ಸಂಗತಿಗಳನ್ನು ಈ ಪುಸ್ತಕ ಒಳಗೊಂಡಿದೆ.

ಗ್ರಹಣ…!

ನಮಗೆ ಖಾಯಿಲೆಯಾದಾಗ ಸಾಮಾನ್ಯವಾಗಿ ನಾವು ಹೋಗುವುದು ಡಾಕ್ಟರ್ ಬಳಿಗೆ, ನಮ್ಮ ಮನೆಯಲ್ಲಿ ಕಳ್ಳತನ ದರೋಡೆ ಆದಾಗ ಅಥವಾ ನಮಗೆ ಬೆದರಿಕೆ ಉಂಟಾದಾಗ ನಾವು ಸಂಪರ್ಕಿಸುವುದು ಪೋಲಿಸರನ್ನು.... ನಮಗೆ ಯಾವುದೇ ರೀತಿಯ ಅನ್ಯಾಯವಾದರೆ ನಾವು ನ್ಯಾಯಾಲಯದಲ್ಲಿ ನ್ಯಾಯ ಕೇಳುತ್ತೇವೆ...

Image

ಅಂಧರ ಬಾಳಿನ ಬೆಳಕಾದ ಲೂಯಿ ಬ್ರೈಲ್

ಮಾನವನ ಪ್ರತಿಯೊಂದು ಅಂಗಾಂಗವೂ ಅತ್ಯಮೂಲ್ಯ. ಯಾವುದಕ್ಕೂ ಬೆಲೆಕಟ್ಟಲಾಗದು. ಅದರಲ್ಲೂ ಕಣ್ಣುಗಳು ನಮ್ಮ ದೇಹದ ಅತ್ಯಂತ ಪ್ರಮುಖ ಅಂಗ. ಈ ಸುಂದರ ಪ್ರಪಂಚವನ್ನು ನೋಡಲು ನಮಗೆ ಸಹಾಯ ಮಾಡುವುದೇ ಕಣ್ಣುಗಳು. ಆದರೆ ದುರಾದೃಷ್ಟವಶಾತ್ ಪ್ರಪಂಚದಲ್ಲಿ ಲಕ್ಷಾಂತರ ಮಂದಿ ಹುಟ್ಟುವಾಗಲೇ ಅಂಧರಾಗಿ ಜನಿಸುತ್ತಾರೆ. ಕೆಲವರು ನಂತರದ ದಿನಗಳಲ್ಲಿ ವಿವಿಧ ಕಾರಣಗಳಿಂದ ತಮ್ಮ ದೃಷ್ಟಿಯನ್ನು ಕಳೆದುಕೊಂಡು ಬಿಡುತ್ತಾರೆ.

Image