ಮಕರ ಸಂಕ್ರಾಂತಿ ಹಬ್ಬದ ಆಚರಣೆ - ಏನು? ಹೇಗೆ?

ಹಿಂದೂಗಳ ಹಬ್ಬವನ್ನು ಚಂದ್ರನನ್ನು ಆಧರಿಸಿದ ಪಂಚಾಂಗದ ಮೂಲಕ ಲೆಕ್ಕ ಹಾಕಲಾಗುತ್ತದೆ. ಆದರೆ ಮಕರ ಸಂಕ್ರಾಂತಿಯನ್ನು ಸೂರ್ಯನನ್ನು ಆಧರಿಸಿದ ಪಂಚಾಂಗದ ಲೆಕ್ಕಾಚಾರದ ಮೂಲಕ ನಿರ್ಧರಿಸಲಾಗುತ್ತದೆ. ಸಂಕ್ರಾಂತಿ ಎಂದರೆ ಸೌರಮಾನದ ಪರ್ವ, ಮಕರ ಮಾಸದ ಆರಂಭದ ದಿನದಂದೇ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಮಣದಿಂದ ಋತುವಿನಲ್ಲಿ ಬದಲಾವಣೆ ಆಗುತ್ತದೆ.

Image

ದ ಆಲ್ ಕೆಮಿಸ್ಟ್

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ : ಪಾಲೋ ಕೊಯೆಲ್ಹೋ ಕನ್ನಡಕ್ಕೆ: ಕಿರಣ್ ಕುಮಾರ್ ಟಿ.ಪಿ.
ಪ್ರಕಾಶಕರು
ಅನುಭವ ಪ್ರಕಾಶನ, ಅಲಿ ಅಸ್ಕರ್ ರಸ್ತೆ, ಬೆಂಗಳೂರು- ೫೬೦೦೫೨
ಪುಸ್ತಕದ ಬೆಲೆ
ರೂ. ೫೦.೦೦, ಮುದ್ರಣ : ೨೦೦೩

ಆಂಗ್ಲ ಬರಹಗಾರ ಪಾಲ್ ಕೊಯೆಲ್ಹೋ ಬರೆದ ದಿ ಆಲ್ ಕೆಮಿಸ್ಟ್ ಎಂಬ ಇಂಗ್ಲೀಷ್ ಪುಸ್ತಕದ ಮಾಹಿತಿಯನ್ನು ‘ಸಂಪದ’ದಲ್ಲಿ ಬಹಳ ಹಿಂದೆ ನೀವು ಗಮನಿಸಿರಬಹುದು. ಈ ಪುಸ್ತಕ ಅದರದ್ದೇ ಕನ್ನಡ ಅನುವಾದ. ಕನ್ನಡ ಮಾತ್ರ ಬಲ್ಲವರಿಗೆ ಅರ್ಥವಾಗುವಂತೆ ಸರಳವಾಗಿ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ ಕಿರಣ್ ಕುಮಾರ್ ಅವರು.

ಅರೇಬಿಯನ್ ನೈಟ್ಸ್ ಕಥೆ- ನಿರಕ್ಷರಿ ಶಿಕ್ಷಕ

ಅರೇಬಿಯನ್ ನೈಟ್ಸ್ ಅಥವಾ ಅರೇಬಿಯಾದ ಇರುಳು ಎಂಬ ಕಥೆಗಳು ಬಹಳ ಪ್ರಸಿದ್ಧವಾಗಿವೆ. ಪ್ರಪಂಚದ ಬಹುತೇಕ ಭಾಷೆಗಳಿಗೆ ಈ ಕಥೆಗಳು ಅನುವಾದಗೊಂಡು ಅಬಾಲವೃದ್ಧರಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಏನಿದು ಅರೇಬಿಯನ್ ನೈಟ್ಸ್ ಕಥೆಗಳು?

Image

ಹಿರಿಯರ ಕಿವಿಮಾತು

ಹಿರಿಯರ ಅನುಭವದ ಮಾತುಗಳು ಕಿರಿಯರಿಗೆ ಯಾವಾಗಲೂ ಅಪಥ್ಯವಾಗಿರುತ್ತವೆ. ಆದರೆ ಹಿರಿಯರು ಹೇಳುವ ಸಂಗತಿಗಳು ಅವರ ಅನುಭವದ ಮಾತುಗಳಾಗಿರುತ್ತದೆ. ಕೆಲವು ವಿಷಯಗಳು ಈಗಿನ ಕಾಲಕ್ಕೆ ಮೂಢನಂಬಿಕೆಯಂತೆ ಕಂಡು ಬಂದರೂ ಅದರಲ್ಲಿ ಹಲವಾರು ಸತ್ಯಗಳು ಅಡಗಿರುತ್ತದೆ. ಈ ಕಾರಣದಿಂದಲೇ ನಮ್ಮ ಹಿರಿಯರು ತಮ್ಮ ನಂತರದ ಪೀಳಿಗೆಯವರಿಗಾಗಿ ಉತ್ತಮ ಸಂಸ್ಕೃತಿ, ಆಚರಣೆಗಳನ್ನು ಅಳವಡಿಸಿಕೊಳ್ಳಲು ಹೇಳುತ್ತಾರೆ.

Image

ಅಗಲಿದ ಹಿರಿಯ ಸಂಗೀತ ನಿರ್ದೇಶಕ - ಆರ್.ರತ್ನಂ

ಮೂಲತಃ ಚೆನ್ನೈ ನವರಾಗಿದ್ದ ಸಂಗೀತ ನಿರ್ದೇಶಕ ಆರ್. ರತ್ನಂ ಅವರು ಜನವರಿ ೯, ೨೦೨೧ರಂದು ನಿಧನಹೊಂದಿದರು. ಸುಮಾರು ೯೭ ವರ್ಷ ವಯಸ್ಸಿನ ಇವರಿಗೆ ಕನ್ನಡ ಭಾಷೆ ಮತ್ತು ಸಿನೆಮಾ ರಂಗವೆಂದರೆ ಅಪಾರ ಪ್ರೀತಿ. ಸಾಯುವ ಸಮಯದಲ್ಲೂ ತಮ್ಮ ಅಂತ್ಯಕ್ರಿಯೆಯನ್ನು ಕರ್ನಾಟಕದಲ್ಲೇ ನಡೆಸಬೇಕು ಎಂದು ಹೇಳಿದ ಹಿರಿಯ ಜೀವವನ್ನು ನಾವಿಂದು ನೆನೆದು ಶೃದ್ಧಾಂಜಲಿ ಸಲ್ಲಿಸಲೇ ಬೇಕು.

Image

ಕೃಷ್ಣಾರ್ಪಣ!?

ಪುಸ್ತಕದ ಲೇಖಕ/ಕವಿಯ ಹೆಸರು
ಶ್ರೀರಾಮ ದಿವಾಣ
ಪ್ರಕಾಶಕರು
ದಿವಾಣಶ್ರೀ ಪ್ರಕಾಶನ, ಕಡೆಕಾರ್, ಉಡುಪಿ-೫೭೬೧೦೩
ಪುಸ್ತಕದ ಬೆಲೆ
ರೂ. ೪೦.೦೦, ಮುದ್ರಣ : ೨೦೦೩ ಡಿಸೆಂಬರ್

ಪತ್ರಕರ್ತ ಲೇಖಕ ಶ್ರೀರಾಮ ದಿವಾಣರ ಮೊದಲ ಪ್ರಕಟಿತ ಲೇಖನಗಳ ಸಂಗ್ರಹ ಪುಸ್ತಕ ಇದು. ‘ಬರೆದದ್ದನ್ನೆಲ್ಲ ಪ್ರಕಟಿಸಬಾರದು, ಮುದ್ರಿಸಬಾರದು. ಆದರೆ ಆಯ್ದ ಲೇಖನಗಳನ್ನಾದರೂ ಪ್ರಕಟಿಸಬಹುದಲ್ವಾ?’ ಎಂಬ ಮಾತುಗಳನ್ನು ಹೇಳಿದವರು ನೇರ ನಡೆ-ನುಡಿಯ ನಿರ್ಭೀತ ಸಾಹಿತಿ, ಬೆಂಗಳೂರಿನ ‘ಪುಸ್ತಕ ಮನೆ'ಯ ಶ್ರೀ ಹರಿಹರ ಪ್ರಿಯರು.

ಯುವ ಚೇತನ ಸ್ವಾಮಿ ವಿವೇಕಾನಂದ

ಬಾಲಕ ನರೇಂದ್ರನಾಥ ದತ್ತ ೧೨--೦೧--೧೮೬೨ ರಂದು ಶ್ರೀ ವಿಶ್ವನಾಥ ದತ್ತ, ಭುವನೇಶ್ವರಿ ದೇವಿ ದಂಪತಿಗಳಿಗೆ ಮಗನಾಗಿ ಜನಿಸಿದ. ಸಣ್ಣ ವಯಸ್ಸಿನಲ್ಲಿಯೇ ನಾಯಕತ್ವ ಗುಣ ಬಾಲಕನಲ್ಲಿ ಬಂದಿತ್ತು. ‘ಒಂದು ದಿನ ನೀನು ಏನಾಗಲು ಬಯಸುವೆ ಎಂದು ಅಪ್ಪ ಕೇಳಿದಾಗ, ಭಗವದ್ಗೀತೆ ಉಪದೇಶಿಸುವ ಭಾವಚಿತ್ರ ತೋರಿಸಿ, ಚಾಟಿ ಹಿಡಿದ ಕೃಷ್ಣನಂತಾಗುವೆ’ ಎಂದನಂತೆ.

Image