ಧೀಮಂತ ನಾಯಕ ನೇತಾಜಿಗೆ ೧೨೫ರ ಹುಟ್ಟು ಹಬ್ಬ

ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದೊಡನೆಯೇ ಎಲ್ಲರ ಮೈಯಲ್ಲೂ ವಿದ್ಯುತ್ ಸಂಚಲನವಾದಂತೆ ಆಗುತ್ತದೆ. ಭಾರತ ಮಾತೆಯ ಹೆಮ್ಮೆಯ ಪುತ್ರ ಸುಭಾಷ್ ಚಂದ್ರ ಬೋಸ್ ಹುಟ್ಟಿದ ಪುಣ್ಯ ದಿನವಾದ ಜನವರಿ ೨೩ನ್ನು ಪ್ರಸಕ್ತ ವರ್ಷದಿಂದ ‘ಪರಾಕ್ರಮ ದಿನ’ ಎಂದು ಕರೆಯಲಾಗುತ್ತದೆ. ಭಾರತೀಯರಲ್ಲಿ ಸ್ವಾತಂತ್ರ್ಯದ ಕೆಚ್ಚನ್ನು ಹುಟ್ಟುಹಾಕಿದ ಕೀರ್ತಿ ನೇತಾಜಿ ಅವರಿಗೆ ಸಲ್ಲುತ್ತದೆ.

Image

ಅರೇಬಿಯದ ಇರುಳು

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್. ರಮಾನಂದ
ಪ್ರಕಾಶಕರು
ಪ್ರತಿಭಾ ಗ್ರಂಥಮಾಲೆ, ಧಾರವಾಡ
ಪುಸ್ತಕದ ಬೆಲೆ
ರೂ. ೬.೦೦, ಮುದ್ರಣ : ೧೯೮೬

ನಾವೆಲ್ಲಾ ಸಣ್ಣವರಿರುವಾಗ ಓದುತ್ತಿದ್ದ ಪುಸ್ತಕವಿದು. ‘ಅರೇಬಿಯನ್ ನೈಟ್ಸ್' ಎಂಬ ಪುಸ್ತಕದ ಕಥೆಗಳನ್ನು ಅರೇಬಿಯದ ಇರುಳು ಎಂಬ ಹೆಸರಿನಲ್ಲಿ ಎಸ್. ರಮಾನಂದ ಇವರು ಅನುವಾದಿಸಿದ್ದಾರೆ. ಪ್ರಕಾಶಕರು ಪ್ರಸ್ತಾವನೆಯಲ್ಲಿ ಅರೇಬಿಯನ್ ನೈಟ್ಸ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಿದ್ದಾರೆ. ಈ ಪುಸ್ತಕದಲ್ಲಿ ಹಲವಾರು ಸಣ್ಣ ಹಾಗೂ ದೊಡ್ಡ ಕಥೆಗಳು ಇವೆ.

ನ್ಯಾನೋ ಕಥೆ: ಸಂಯಮ

ರೈತ ರಾಮಣ್ಣ ಸಾಲಮಾಡಿ ಎರಡು ಎಕರೆ ಗದ್ದೆಯಲ್ಲಿ ಬೇಸಾಯ ಮಾಡಿದ. ಬಿಸಿಲ ಝಳಕ್ಕೆ ಪೈರು ಒಣಗಿ, ಮಳೆಯಿಲ್ಲದೆ ನೀರಿಲ್ಲದೆ ನಾಶವಾಯಿತು.ರಾತ್ರಿ ಗದ್ದೆ ಬದಿಗೆ ಹೋದವ, ಇನ್ನು ಬದುಕಿ ಪ್ರಯೋಜನವಿಲ್ಲ, ಸಾಯುವುದೇ ಮೇಲೆಂದು ತೀರ್ಮಾನಿಸಿದ. ಒಮ್ಮೆ ಪತ್ನಿ ,ಮಕ್ಕಳು ಕಣ್ಣೆದುರು ಬಂದರು.

Image

ಸಮಾಜದ ನಡೆ ದುರಂತದ ಕಡೆ...

ಸುಮಾರು ವರ್ಷಗಳಿಂದ ಕರ್ನಾಟಕದಲ್ಲಿ ವಿವಿಧ ಪಕ್ಷಗಳು  ಅಧಿಕಾರಕ್ಕೆ ಬಂದಾಗ ಅವರು ಎದುರಿಸುವ ಬಹುದೊಡ್ಡ ಸಮಸ್ಯೆ ಜನರಿಗೆ ಹೇಗೆ ಅತ್ಯುತ್ತಮ ಸೇವೆ ಒದಗಿಸಬೇಕು ಎಂಬುದಲ್ಲ, ಬದಲಾಗಿ ಸಚಿವ ಸಂಪುಟದ ವಿಸ್ತರಣೆ ಮತ್ತು ಖಾತೆಗಳ ಹಂಚಿಕೆ.

Image

ಮೋಸ?!

ಸೂರಿ ತನ್ನ ಪ್ರಿಯತಮೆಯ ಕಾಗದದ ಬರವಿಗಾಗಿ ಕಾತುರದಿಂದ ಕಾಯುತ್ತಿದ್ದ. ವಾರಕ್ಕೆರಡಾದರೂ ಪತ್ರ ಬರೆಯುತ್ತಿದ್ದ ಲತಾ ಒಂದು ತಿಂಗಳಾದರೂ ಪತ್ರವೇಕೆ ಬರೆದಿಲ್ಲವೆಂದು ಚಿಂತಿತನಾಗಿದ್ದ. ಮನಸ್ಸಿಗೆ ಬಂದ ನಾನಾ ಕೆಟ್ಟ ಆಲೋಚನೆಗಳನ್ನು ಬಲವಂತವಾಗಿ ಬದಿಗೆ ಸರಿಸಿದ್ದ. ಅಷ್ಟರಲ್ಲಿ ಸೈಕಲ್ ಗಂಟೆ ಬಾರಿಸಿತು. 'ಪೋಸ್ಟ್' ಎಂದಿತು ಪೋಸ್ಟ್‌ಮನ್ ಧ್ವನಿ. ಸೂರಿ ಒಂದೇ ಉಸಿರಿಗೆ ಎದ್ದು ಹೊರಗೆ ಓಡಿದ. ಕಾಗದ ಅವನಿಗೇ. ಅದೂ ಲತ ಬರೆದದ್ದು.

Image

ಚಕ್ಕೋತಾ ಹಣ್ಣಿನ ಸಾಸಿವೆ

Image

ಚಕ್ಕೋತಾ ತಿರುಳಿಗೆ ಉಪ್ಪು ಮತ್ತು ಬೆಲ್ಲ ಬೆರೆಸಿ ಇಡಬೇಕು. ತೆಂಗಿನಕಾಯಿ ತುರಿಗೆ ಒಂದು ಚಮಚ ಸಾಸಿವೆ, ಒಣಮೆಣಸು ಕುಮ್ಟೆ (ಖಾರ ತುಂಬಾ ಬೇಕಾದರೆ ಎರಡು ಕಾಯಿಮೆಣಸು) ಸೇರಿಸಿ ರುಬ್ಬಿ, ತಿರುಳಿಗೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ, ಒಗ್ಗರಣೆ ತುಪ್ಪದಲ್ಲಿ ಕೊಡಬೇಕು. ರುಚಿಯಾದ ಸಾಸಿವೆ ರೆಡಿ.(ಹುಳಿ ಮತ್ತು ಒಗರು ಇರುವ ಕಾರಣ ಮೊಸರು,ಮಜ್ಜಿಗೆ ಹಾಕುವುದು ಬೇಡ)

ಬೇಕಿರುವ ಸಾಮಗ್ರಿ

ಚಕ್ಕೋತಾ ಹಣ್ಣಿನ ತಿರುಳು ೧ ಕಪ್, ತೆಂಗಿನ ಕಾಯಿ ತುರಿ ೧ ಕಪ್, ಸಾಸಿವೆ ೧ ಚಮಚ, ಒಣ ಮೆಣಸು ೩-೫, ತುಪ್ಪ, ರುಚಿಗೆ ತಕ್ಕಷ್ಟು ಬೆಲ್ಲ ಮತ್ತು ಉಪ್ಪು.

ಶಿವನ 21 ಹೆಸರುಗಳು ಮತ್ತು ಅರ್ಥ

ಸೋಮವಾರ ಶಿವನಿಗೆ ವಿಶೇಷವಾಗಿ ಪ್ರಿಯವಾದ ವಾರ. ಏಕೆಂದರೆ ಸೋಮವಾರ ‘ಸೋಮ’ ಅಂದರೆ ಚಂದ್ರನ ವಾರ. ಚಂದ್ರ ಮಹಾದೇವನ ಪರಮ ಭಕ್ತ. ಮಹಾದೇವನ ಪ್ರೀತ್ಯರ್ಥ ಆತನ ಶಿರವನ್ನು ಅಲಂಕರಿಸಿರುವನು. ಆದ್ದರಿಂದ ಮಹಾದೇವನಿಗೆ ಸೋಮಶೇಖರ, ಚಂದ್ರಮೌಳಿ, ಚಂದ್ರಶೇಖರ ಎಂಬಿತ್ಯಾದಿ ಹೆಸರುಗಳೂ ಇವೆ. ಸೋಮವಾರದಂದು ಶಿವನ ನಾಮಗಳ ಸ್ಮರಣೆ ಮಾಡಿದರೆ ವಿಶೇಷ ಪ್ರಯೋಜನವಿದೆ. 

Image