ಹೋಳಿ ಮತ್ತು ಮಾನವೀಯ ಮೌಲ್ಯ
22 hours ago - Shreerama Diwana
ಇಂದು (ಮಾರ್ಚ್ ೧೩) ಇಡೀ ರಾಷ್ಟ್ರಾದ್ಯಂತ ಅದರಲ್ಲೂ ಉತ್ತರ ಭಾರತದ ಕಡೆ ಹೋಳಿ ಹಬ್ಬದ ಸಂಭ್ರಮವೋ ಸಂಭ್ರಮ. ಮುಖ್ಯವಾಗಿ ಕಾಲೇಜು ವಿದ್ಯಾರ್ಥಿಗಳ ಬಣ್ಣ ಬಣ್ಣದ ಓಕುಳಿಯಾಟ ನೋಡಲು ಚಂದ. ಇಂತಹ ಹೋಳಿ ಹಬ್ಬದ ಸಂದರ್ಭದಲ್ಲಿ ಆ ಬಣ್ಣಗಳ ಚೆಲುವಿನ ಚಿತ್ತಾರದ ನಡುವೆ ಮನುಷ್ಯ ಸಂಬಂಧಗಳ ಬೆಸೆಯುವಿಕೆಯ ಹುಡುಕಾಟ ಸಹ ಬಹಳ ಮುಖ್ಯ. ಆ ನಿಟ್ಟಿನಲ್ಲಿ ಯೋಚಿಸುತ್ತಾ....
ಪ್ರೀತಿಯೆಂಬ ಬಣ್ಣ ತುಂಬಿ
ಪ್ರೇಮವೆಂಬ ರಂಗು ಮೂಡಲಿ.
ಕರುಣೆಯೆಂಬ ಬಣ್ಣ ತುಂಬಿ
ಮಮತೆಯೆಂಬ ರಂಗು ಮೂಡಲಿ.
ನಗುವೆಂಬ ಬಣ್ಣ ತುಂಬಿ
ಸುಖವೆಂಬ ರಂಗು ಮೂಡಲಿ.
ಯೌವ್ವನವೆಂಬ ಬಣ್ಣ ತುಂಬಿ
ಸೌಂದರ್ಯವೆಂಬ ರಂಗು ಮೂಡಲಿ.
ಜ್ಞಾನವೆಂಬ ಬಣ್ಣ ತುಂಬಿ
ವಿವೇಚನೆಯ ರಂಗು ಮೂಡಲಿ.
ಮನಸ್ಸೆಂಬ ಬಣ್ಣ ತುಂಬಿ
ಮುಗ್ಧತೆಯ ರಂಗು ಮೂಡಲಿ.
ಮನದಲ್ಲಿ ಬಣ್ಣಗಳ ಓಕುಳಿಯಾಟ,
ಹೃದಯದಲ್ಲಿ ರಂಗು ರಂಗಿನ ಒಡನಾಟ,
ಆತ್ಮದಲ್ಲಿ ಕಾಮನಬಿಲ್ಲಿನ ಕನಸಿನಾಟ,
ಕಣ್ಗಳಲ್ಲಿ ಬಣ್ಣಗಳ ಚಿತ್ತಾರದ ತೀಕ್ಷ್ಣನೋಟ,
ನನ್ನೆದೆಯಾಳದಲ್ಲಿ ಹೋಳಿ ಹಬ್ಬಕ್ಕೆ ನಿಮ್ಮೆಲ್ಲರ
ಶುಭಹಾರೈಕೆಗಳದೇ ಆಟ.
***
ನಮ್ಮ ಸಮಾಜ ವ್ಯಕ್ತಿಗಳ ಸಾಮರ್ಥ್ಯವನ್ನು ( Strength ) ತುಂಬಾ ಚೆನ್ನಾಗಿ ಗುರುತಿಸುತ್ತದೆ ಮತ್ತು ಅದರಿಂದಾಗಿ ವ್ಯಕ್ತಿಗಳು ಜನಪ್ರಿಯರೂ ಆಗುತ್ತಾರೆ. ಆ ಜನಪ್ರಿಯತೆಯ ಅಲೆಯ ಮೇಲೆ ತೇಲುತ್ತಾ ಹಣ, ಅಧಿಕಾರ, ಅಂತಸ್ತುಗಳನ್ನು ಗಳಿಸುತ್ತಾರೆ. ಇದು ಒಳ್ಳೆಯ ಅಂಶ. ಆದರೆ,ಅದೇ ವ್ಯವಸ್ಥೆ ವ್ಯಕ್ತಿಗಳಲ್ಲಿ ಇರಬಹುದಾದ ದೌರ್ಬಲ್ಯಗಳಿಗೆ ( Weakness ) ತುಂಬಾ ಕೆಟ್ಟದ್ದಾಗಿ ಪ್ರತಿಕ್ರಿಯಿಸುತ್ತದೆ. (ಇಲ್ಲಿ Weakness ಎಂದರೆ ದುಶ್ಚಟಗಳು, ಹಣಕಾಸಿನ ವ್ಯಾವಹಾರಿಕ ನಡವಳಿಕೆಗಳು ಅಪರಾಧಗಳೆಂದು ಪರಿಗಣಿಸಲಾದ ಅನಾಗರಿಕ ವರ್ತನೆಯಲ್ಲ.........) ವ್ಯಕ್ತಿಗಳಲ್ಲಿ ಇರಬಹುದಾದ ಸ… ಮುಂದೆ ಓದಿ...