ಅನುಕಂಪದ ಜೊತೆ ಅವಕಾಶವನ್ನೂ ನೀಡಿ, ಸಹಾನುಭೂತಿಯ ಜೊತೆ ಸದಾಶಯವೂ ಇರಲಿ, ಕರುಣೆಯ ಜೊತೆ ಸಹಕಾರವೂ ಇರಲಿ. ವಿಶ್ವ ಅಂಗವಿಕಲರ ದಿನ ಡಿಸೆಂಬರ್ 3 ( International Day of Disabled Persons )
2024 ರ ಘೋಷಣೆ...." ಸಮಗ್ರ ಮತ್ತು ಸುಸ್ತಿರ ಅಭಿವೃದ್ಧಿಗಾಗಿ ವಿಕಲಚೇತನ ವ್ಯಕ್ತಿಗಳಲ್ಲಿ ನಾಯಕತ್ವಕ್ಕೆ ಉತ್ತೇಜನ" ( Amplifying the leadership of disabled people for an inclusive and sustainable future) ಅಂಗವಿಕಲರು, ಅಂಗ ವೈಕಲ್ಯರು, ಅಂಗ ಊನರು, ವಿಕಲ ಚೇತನರು, ವಿಕಲಾಂಗ ಚೇತನರು, ದಿವ್ಯಾಂಗಿಗಳು, ವಿಶಿಷ್ಟ ಚೇತನರು, ವಿಶೇಷ ಚೇತನರರು, ಕುರುಡರು, ಕುಂಟರು, ಕಿವುಡರು, ಮೂಗರು, ಎಳವರು. ಒಟ್ಟಿನಲ್ಲಿ ಮನುಷ್ಯ ದೇಹ ಸಹಜತೆಯಲ್ಲದ ಕೆಲವು ಕೊರತೆಗಳನ್ನು ಹೊಂದಿರುವವರನ್ನು ಹೀಗೆ ಕರೆಯಲಾಗುತ್ತದೆ. ಅಂಗವಿಕಲರನ್ನು ಈಗ ದಿವ್ಯಾಂಗ ಚೇತನರು ಎಂದು ಗೌರವಪೂರ್ವಕವಾಗಿ ಕರೆಯಲಾಗುತ್ತದೆ.
ನನ್ನ ಆತ್ಮೀಯ ಗೆಳೆಯರು ಕರೆ ಮಾಡಿ ನೆನಪಿಸಿದರು ಮತ್ತು ಈ ಬಗ್ಗೆ ಮಾತನಾಡಿದರು. ಅಂಗವಿಕಲತೆ ಮತ್ತು ಅದರ ನೋವಿನ ಅಸಹಾಯಕತೆಯ ಬಗೆಗೆ ಮಾತನಾಡಿದರು ಎಂದು ನೀವು ಭಾವಿಸಿರಬಹುದು. ಇಲ್ಲ. ಅವರು ಸಹಜ ಮನುಷ್ಯರಿಗಿಂತ ಹೆಚ್ಚು ಆತ್ಮವಿಶ್ವಾಸ ಮತ್ತು ಜೀವನೋತ್ಸಾಹದಿಂದ ಮಾತನಾಡಿದರು. ಅದಕ್ಕಿಂತ ಹೆಚ್ಚಾಗಿ ಈ ವ್ಯವಸ್ಥೆಯ ಭ್ರಷ್ಟತೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ನನಗೆ ಕೆಲವರು ಕೇಳುತ್ತಾರೆ. ಕೆಟ್ಟದ್ದನ್ನು ಹೆಚ್ಚಾಗಿ ಬರೆಯುವಿರಿ ಒಳ್ಳೆಯದು ಇಲ್ಲವೇ, ಅದರ ಬಗ್ಗೆಯೂ ಬರೆಯಿರಿ.
ಒಳ್ಳೆಯದು ಇತ್ತು, ಇದೆ, ಇರುತ್ತದೆ. ಅದಕ್ಕೆ ನನ್ನ ಅವಶ್ಯಕತೆ ಇಲ್ಲ. ಒಳ್ಳೆಯದು ಯಾರಿಗೂ ತೊಂದರೆ ಕೊಡುವುದಿಲ್ಲ. ಅದು ಹಾಗೆಯೇ ಇರಲಿ ಮತ್ತು ಮುಂದುವರಿಯಲಿ. ಸಮಸ್ಯೆ ಇರುವುದು ಕೆಟ್ಟದ್ದರಲ್ಲಿ. ಆದ್ದರಿಂದ ಅ…
ಮುಂದೆ ಓದಿ...