ಶಿಲ್ಪ ವೈಭವಕ್ಕೆ ಹೆಸರಾದ ಸೇನೇಶ್ವರ ದೇವಸ್ಥಾನ
1 day 10 hours ago - ಬರಹಗಾರರ ಬಳಗ
ಬೈಂದೂರಿನ ಸೇನೇಶ್ವರ ದೇವಸ್ಥಾನ ಶಿಲ್ಪ ವೈಭವಕ್ಕೆ ಹೆಸರಾಗಿದೆ. ದೇವಸ್ಥಾನದ ಸೊಬಗು ದೂರದಿಂದ ನೋಡುವಾಗ ಗೊತ್ತೇ ಆಗುವುದಿಲ್ಲ. ಆದರೆ ಒಳಹೊಕ್ಕು ನೋಡಿದರೆ ಶಿಲ್ಪ ಕಲಾ ಕೆತ್ತನೆಯು ದೇವ ಸಭೆಯಂತೆ ಅನಾವರಣಗೊಳ್ಳುತ್ತ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಕರಾವಳಿ ಪ್ರದೇಶದ ಬೇಲೂರು ಎಂದೇ ಇತಿಹಾಸ ತಜ್ಞರಿಂದ ಗುರುತಿಸಲ್ಪಟ್ಟಿರುವ ಸೇನೇಶ್ವರ ದೇವಸ್ಥಾನ ಪ್ರಸ್ತುತ ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿದೆ. ರಾಷ್ಟೀಯ ಹೆದ್ದಾರಿಯಲ್ಲಿರುವ ಬೈಂದೂರು ಪೇಟೆಯಲ್ಲಿ ಇಳಿದು ಸ್ವಲ್ಪ ದೂರ ರಥ ಬೀದಿಯಲ್ಲಿ ಸಾಗಿದರೆ ಸೇನೇಶ್ವರ ದೇಗುಲದ ಸ್ವಾಗತ ಗೋಪುರ ನೋಡುಗರನ್ನು ಸ್ವಾಗತಿಸುತ್ತದೆ.
ಅಲ್ಲಿಂದ ಮುಂದಕ್ಕೆ ಹೋದರೆ ಮಹತೋಭಾರ ಸೇನೇಶ್ವರ ದೇವಸ್ಥಾನದ ಕಲಾ ಕುಸುರಿಯ ಮೂರ್ತಿಗಳು ಅಚ್ಚರಿ ಮೂಡಿಸುತ್ತವೆ. ಹತ್ತು ಶತಮಾನಗಳ ಹಿಂದೆ ಕಲ್ಲಿನಲ್ಲಿ ಕೆತ್ತಿದ ದೇವಳದ ಹಲವು ಮೂರ್ತಿಗಳು ಚಿತ್ತಾಕರ್ಷಕ ಅನುಭೂತಿ ನೀಡುತ್ತವೆ. ಪುರಾಣದಲ್ಲಿ ಬಿಂದು ಋಷಿ ತಪಸ್ಸು ಮಾಡಿದ ಈ ಪ್ರದೇಶ ಮುಂದೆ ಬಿಂದುಪುರವಾಗಿ ಬಳಿಕ ಬೈಂದೂರು ಆಗಿ ಮಾರ್ಪಟ್ಟಿದೆ ಎಂಬ ಉಲ್ಲೇಖವಿದೆ.
ರಾಮಾಯಣದಲ್ಲಿ ಶ್ರೀ ರಾಮಚಂದ್ರನು ವಾನರ ಸೇನೆ ಸಮೇತನಾಗಿ ಸೀತಾನ್ವೇಷಣೆಗಾಗಿ ರಾಮೇಶ್ವರಕ್ಕೆ ಹೋಗುವ ಮಾರ್ಗದಲ್ಲಿ ಬೈಂದೂರಿನ ಪ್ರದೇಶಕ್ಕೆ ಭೇಟಿ ನೀಡಿದ. ಈ ಸಂದರ್ಭದಲ್ಲಿ ವಾನರ ಸೇನೆಗೆ ಬಿಂದು ಋಷಿಗಳ ಕೋರಿಕೆಯಂತೆ ಈ ದೇವಸ್ಥಾನವನ್ನು ಬೆಳಗಾಗುವುದರೊಳಗೆ ನಿರ್ಮಿಸಿದ ಕಾರಣದಿಂದ 'ಸೇನೇಶ್ವರ' ದೇವಸ್ಥಾನ ಎಂಬ ಹೆಸರು ಬಂತು ಎಂಬ ಪೌರಾಣಿಕ ಹಿನ್ನಲೆ ಇದೆ.
ಇತಿಹಾಸ ಸಂಶೋಧಕರ ಪ್ರಕಾರ ಹನ್ನೊಂದನೆಯ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಚಕ್ರವರ್ತಿಯ ಸಾಮಂತರಾಗಿದ್ದ ಸೇನ ಅರಸರು ಈ ದೇವಾಲಯವನ್ನು ನಿರ್ಮಿಸಿದರು. ಆ ಕಾರಣದಿಂದ ಸೇನೇಶ್ವರ ಎಂಬ ಹೆಸರು ಬಂತು.… ಮುಂದೆ ಓದಿ...