ಕೆನ್ನೀಲಿ ಬಕ ಎಂಬ ಕೊಕ್ಕರೆ...!
1 day 15 hours ago - ಬರಹಗಾರರ ಬಳಗ
ಕಳೆದ ವರ್ಷ ಬೇಸಗೆಯಲ್ಲಿ ಒಂದು ಕೌಟುಂಬಿಕ ಕಾರ್ಯಕ್ರಮ ಇದ್ದುದರಿಂದ ಊರಿಗೆ ಹೋಗಿದ್ದೆ. ಕಾರ್ಯಕ್ರಮ ನಡೆಯುವ ಹಾಲ್ ಮನೆಯಿಂದ ಎಂಟು ಕಿಲೋಮೀಟರ್ ದೂರ ಇದ್ದುದರಿಂದ ಮನೆಯವರನ್ನು ಅಲ್ಲಿಯವರೆಗೆ ತಲುಪಿಸುವ ಜವಾಬ್ದಾರಿ ನನ್ನದಾಗಿತ್ತು. ಎರಡು-ಮೂರು ಬಾರಿ ಆಕಡೆ ಈಕಡೆ ಹೋಗಿ ಬರಬೇಕಾಯಿತು. ಹೋಗುವ ದಾರಿಯಲ್ಲಿ ಒಂದು ಕೆರೆ ಕಾಣಿಸಿತು. ಸಹಜವಾಗಿ ನನ್ನ ಗಮನ ಆ ಕೆರೆಯ ಕಡೆಗೆ ಹೋಯಿತು. ಕೊನೆಯಬಾರಿ ಬರಬೇಕಾದವರು ಇನ್ನೂ ತಯಾರಾಗಲು ಸ್ವಲ್ಪ ಸಮಯ ಇದ್ದುದರಿಂದ ದಾರಿ ಮಧ್ಯೆ ಕೆರೆಯ ಹತ್ತಿರ ಕಾರನ್ನು ನಿಲ್ಲಿಸಿದೆ. ಯಾವುದಕ್ಕೂ ಇರಲಿ ಎಂದು ಬೈನಾಕುಲಾರ್ ಹಿಡಿದುಕೊಂಡೇ ಹೋಗಿದ್ದೆ. ಕಾರಿನಿಂದ ಇಳಿದರೆ ಹಕ್ಕಿಗಳು ಬೆದರಿ ಹಾರಿ ಹೋಗುವ ಸಾದ್ಯತೆ ಇದ್ದುದರಿಂದ ಅಲ್ಲೇ ಕುಳಿತು ಕೆರೆಯನ್ನು ಗಮನಿಸಲು ಪ್ರಾರಂಭಿಸಿದೆ. ಆ ವರ್ಷ ಮಳೆ ಚೆನ್ನಾಗಿ ಬಂದಿತ್ತು, ಹಾಗಾಗಿ ಕೆರೆಯಲ್ಲಿ ಇನ್ನೂ ಸಾಕಷ್ಟು ನೀರು ತುಂಬಿಕೊಂಡಿತ್ತು. ಕೆರೆಯ ಒಂದು ಬದಿಯಲ್ಲಿ ಕೆಲವು ಎಮ್ಮೆಗಳ ಹಿಂಡು ನೀರಿನಲ್ಲಿ ಮುಳುಗಿಕೊಂಡು ಮೈ ತಣಿಸಿಕೊಳ್ಳುತ್ತಿದ್ದವು. ಕೆರೆಯ ಇನ್ನೊಂದು ಬದಿಯಲ್ಲಿ ಒಂದಷ್ಟು ಮರಗಳ ನೆರಳಿತ್ತು. ಆ ಕಡೆ ಗಮನಿಸುತ್ತಾ ಹೋದಾಗ ದೊಡ್ಡಗಾತ್ರದ ಹಕ್ಕಿಯೊಂದು ಅಲ್ಲಿ ಕಾಣಿಸಿತು. ಆದರೆ ಅದರ ಬಣ್ಣ ಹೇಗಿತ್ತೆಂದರೆ ತಕ್ಷಣ ಅದನ್ನು ಗುರುತಿಸುವುದು ಸಾಧ್ಯವೇ ಇರಲಿಲ್ಲ. ಕೆಲವೊಂದು ನಾಯಿ ಮರಿಗಳು ಆಟವಾಡುತ್ತಾ ಅಲ್ಲಿಗೆ ಬಂದದ್ದರಿಂದ ಹೆದರಿ ಆ ಪಕ್ಷಿ ಅಲ್ಲಿಂದ ಹಾರಿತು. ಆಗಲೇ ಅಲ್ಲೊಂದು ಪಕ್ಷಿ ಇರುವುದು ತಿಳಿದದ್ದು. ಹಾರಿದ ಪಕ್ಷಿ ಕೊಳದ ಇನ್ನೊಂದು ಕಡೆ ಕೆಸರಿನ ಹತ್ತಿರ ಬಂದು ಇಳಿಯಿತು. ಅಲ್ಲಿ ಸ್ವಲ್ಪ ಬೆಳಕೂ ಚೆನ್ನಾಗಿದ್ದುದರಿಂದ ಹಕ್ಕಿ ಈಗ ಸರಿಯಾಗಿ ಕಾಣಿಸುತ್ತಿತ್ತು. ಭರ್ಚಿಯಂತಹ ಕೊಕ್ಕು, ಉದ್ದದ ಕಂದು ಬಣ್ಣದ ಕ… ಮುಂದೆ ಓದಿ...