ವಿಶ್ವ ಪುಸ್ತಕ ದಿನದ ಅಂಗವಾಗಿ, ಏಪ್ರಿಲ್ 23. ಈ ದಿನದ ನೆನಪಾಗಿ ನನಗೂ ಪುಸ್ತಕ ಬರೆಯುವ ಆಸೆಯಾಗುತ್ತಿದೆ. ಬಹಳಷ್ಟು ಜನರು, ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ, ಬರೆಯುತ್ತಲು ಇದ್ದಾರೆ. ಆ ಪುಸ್ತಕಗಳ ಶೀರ್ಷಿಕೆಗಳೇ ನನಗೊಂದು ಅದ್ಭುತ, ಆಶ್ಚರ್ಯ, ಕುತೂಹಲಕರ.
ಎಂತೆಂತಹ ಹೆಸರುಗಳು, ಅದನ್ನು ಓದುತ್ತಿದ್ದರೆ ಯಾವುದೋ ಮಾಯಾ ಲೋಕದಲ್ಲಿದ್ದಂತೆ ಭಾಸವಾಗುತ್ತದೆ. ಕೆಲವರು ಕಾವ್ಯವನ್ನು, ಮತ್ತೆ ಕೆಲವರು ಕಥೆ ಕಾದಂಬರಿಗಳನ್ನು, ಇನ್ನೊಂದಷ್ಟು ಜನ ಪ್ರಬಂಧಗಳನ್ನು, ಮತ್ತೊಂದಷ್ಟು ಜನ ಅಂಕಣಗಳನ್ನು, ಮತ್ತೆ ಕೆಲವರು ವೈಚಾರಿಕ ಲೇಖನಗಳನ್ನು, ಇನ್ನು ಹಲವರು ಆತ್ಮಕಥೆಗಳನ್ನು, ಬೇರೆಯವರು ಅವರವರಿಗೆ ಅನಿಸಿದ ವಿಜ್ಞಾನ, ಕ್ರೀಡೆ, ಸಾಹಸ, ಪ್ರವಾಸ, ಕೌತುಕ, ಪತ್ತೆದಾರಿ ಹೀಗೆ ಬರೆಯುತ್ತಲೇ ಇರುತ್ತಾರೆ.
ಅದನ್ನು ಓದುತ್ತಾ ಓದುತ್ತಾ ಬೆಳೆದಿದ್ದೇನೆ. ಶಾಲೆಗಳಲ್ಲಿ ಅಂದು ಪಠ್ಯವಾಗಿದ್ದ ಪುಸ್ತಕಗಳು ಇಂದು ಬದುಕಿನ ದಾರಿ ದೀಪಗಳಾಗಿರುವುದು ಸಹ ನಿಜ. ಅಂದು ಪುಸ್ತಕದಲ್ಲಿ ಅದನ್ನು ಬರೆದವರ ಹೆಸರು ಮತ್ತು ಪರಿಚಯ ನೋಡಿ ನಾನು ಹಾಗೆಯೇ ಪುಸ್ತಕ ಬರೆಯಬೇಕು, ಅವರಂತೆ ಬದುಕಬೇಕು ಎಂದು ಕನಸು ಕಂಡವನು. ನಿದ್ದೆಯಲ್ಲೂ ಬೃಹತ್ ಕಥೆ ಕಾದಂಬರಿಗಳನ್ನು ಬರೆದು ಪ್ರಖ್ಯಾತನಾಗಿದ್ದೇನೆ ಎಂದೇ ಅನೇಕ ಸಲ ಭಾಸವಾಗಿದೆ.
ಎಲ್ಲರಂತೆ ನಾನು ಸಹ ಪುಸ್ತಕಗಳನ್ನು ಓದುತ್ತಾ ಅತ್ತಿದ್ದೇನೆ, ನಕ್ಕಿದ್ದೇನೆ, ಭಯಗೊಂಡಿದ್ದೇನೆ, ಆತ್ಮವಿಶ್ವಾಸ ಬೆಳೆಸಿಕೊಂಡಿದ್ದೇನೆ, ನಿರಾಶನಾಗಿದ್ದೇನೆ, ಅಸಹಾಯಕನಾಗಿದ್ದೇನೆ, ಸ್ಪೂರ್ತಿ ಪಡೆದಿದ್ದೇನೆ. ಅದು ಆಯಾ ಸಂದರ್ಭವನ್ನು, ಪುಸ್ತಕದ ವಿಷಯವನ್ನು ಅವಲಂಬಿಸಿರುತ್ತದೆ. ಎಷ್ಟೋ ಬಾರಿ ತೀರಾ ದು:ಖಿತನಾದಾಗ ಓದಿದ ಕೆಲವು ಆತ್ಮ ಕಥೆಗಳು ನನಗೆ ಮತ್ತೆ ಜೀವನೋತ್ಸಾಹ ನೀಡಿದೆ. ಬದುಕುವ ಉತ್ಸಾಹ ಮೂಡಿಸ…
ಮುಂದೆ ಓದಿ...