ಹಳೆ ಅಡಿಕೆ- ಹೊಸ ಅಡಿಕೆ ಬೆಲೆ ವ್ಯತ್ಯಾಸ ಯಾಕೆ?
1 day 10 hours ago - Ashwin Rao K Pಅಡಿಕೆ ಹಳೆಯದಾದರೆ ಅದಕ್ಕೆ ವಾರ್ಷಿಕ ಶೇ.೨೫ರ ಬಡ್ಡಿ ಬರುತ್ತದೆ ಎಂಬುದು ಈ ವರ್ಷದ ಧಾರಣೆಯಲ್ಲಿ ಮನವರಿಯಾಗಿದೆ. ದರ ಹೀಗೇ ಉಳಿದರೆ ಮುಂದೆ ಬೆಳೆಗಾರರು ಯಾವುದಾದರೂ ಬ್ಯಾಂಕ್ ನಲ್ಲಿ ಸಾಲ ಮಾಡಿ ಅದರ ಬಡ್ಡಿ ಕಟ್ಟಿದರೂ ಹೊಸ ಅಡಿಕೆ ಮಾರಾಟ ಮಾಡಬೇಕಾಗಿಲ್ಲ. ಹೊಸ ಅಡಿಕೆ ಮುಂದಿನ ಫಸಲು ಬರುವವರೆಗೆ ಉಳಿಸಿಕೊಂಡರೆ ಅದಕ್ಕೆ ಕಿಲೋ ಮೇಲೆ ೧೦೦ ರೂ. ಹೆಚ್ಚು ಸಿಗುತ್ತದೆ.
ಈ ತನಕ ಹಳೆ ಅಡಿಕೆಗೂ ಹೊಸ ಅಡಿಕೆಗೂ ವ್ಯತ್ಯಾಸ ರೂ. ೩೦-೪೦ ಇರುತ್ತಿತ್ತು. ಆದರೆ ಈ ವರ್ಷ ಮಾತ್ರ ಯಾರು ದಾಸ್ತಾನು ಇಟ್ಟಿದ್ದಾರೆಯೋ ಅವರಿಗೆಲ್ಲಾ ಮೀಟರ್ ಬಡ್ಡಿಯ ಲಾಭ ಸಿಕ್ಕಿದೆ. ಇದನ್ನು ಯಾವ ಅಡಿಕೆ ಬೆಳೆಗಾರನೂ ನಿರೀಕ್ಷಿಸಿರಲಿಕ್ಕಿಲ್ಲ. ಈಗ ಹಳೆ ಅಡಿಕೆಗೆ ೫೪,೫೦೦ - ೫೫,೦೦೦ ತನಕ ಏರಿತ್ತು. ಹೊಸತು ಕಳೆದ ೨-೩ ತಿಂಗಳುಗಳಿಂದ ಹೇಗಿತ್ತೋ ಹಾಗೆಯೇ ಇದೆ. ಹೊಸ ಅಡಿಕೆಯ ದರ ಏನು ಮಾಡಿದರೂ ಏರುತ್ತಿಲ್ಲ. ಸರಾಸರಿ ೩೫೦ – ಗರಿಷ್ಟ ೩೭೦ ದರ ಖಾಯಂ ಆದಂತಿದೆ. ಯಾಕೆ ಈ ವ್ಯತ್ಯಾಸ. ಹೊಸ ಅಡಿಕೆ ಬೇಡವೇ? ಜನ ಹಳೇ ಅಡಿಕೆಯನ್ನೇ ತಿನ್ನಲು ಪ್ರಾರಂಭಿಸಿದ್ದಾರೆಯೇ? ಹಾಗೇನೂ ಇಲ್ಲ. ಅದೆಲ್ಲಾ ಬೇಡಿಕೆ ಮೇಲೆ ಒಮ್ಮೊಮ್ಮೆ ಹೀಗೆ ಆಗುತ್ತದೆ.
ಹಳೆಯ (Single chole) ಅತೀ ಹಳೆಯ (Dubble chole) ಇವು ಹಣ ಉಳ್ಳವರು ತಿಂದು ಉಗುಳುವ ಚಟಕ್ಕಾಗಿ ವ್ಯಯಿಸುವ ದುಡ್ಡು. ಕೆಲವರ ಇಚ್ಚೆ (like) ಆಗಿರುತ್ತದೆ. ಸಾಮಾನ್ಯವಾಗಿ ಸಿಹಿಯನ್ನೇ ಹೆಚ್ಚು ಬಯಸುವ ಗುಜರಾತ್ ನ ಜನ (ಇವರ ಹೆಚ್ಚಿನೆಲ್ಲಾ ಅಡಿಗೆ ತಿಂಡಿ ತಿನಸು ಸಿಹಿ ಪದಾರ್ಥವೇ ಆಗಿರುತ್ತದೆ) ಇಂತಹ ಅಡಿಕೆಯನ್ನು ಹೆಚ್ಚು ಆಯ್ಕೆ ಮಾಡುತ್ತಾರೆ.
ಹಳೆ ಅಡಿಕೆಗೂ ಹೊಸತಕ್ಕೂ ಏನು ವ್ಯತ್ಯಾಸ: ಅಡಿಕೆ ಹಳೆಯದಾದಂತೆ ಅದರ ಒಳಗಿನ ತಿರುಳು ಮೃದುವಾಗುತ್ತಾ ಬರುತ್ತದೆ. ಚೊಗರಿನ ಅಂಶ ಕಡಿಮೆಯಾಗುತ್ತಾ ಬರುತ… ಮುಂದೆ ಓದಿ...