ಯಾರಿಗೆ ಇಷ್ಟ ಇದೆಯೋ ಇಲ್ಲವೋ, ಒಪ್ಪಿಗೆ ಇದೆಯೋ ಇಲ್ಲವೋ, ಸಂತೋಷವೋ ಬೇಸರವೋ ಒಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಬಹುತೇಕ ಯುದ್ಧ ಪ್ರಾರಂಭವಾಗಿದೆ, ಇಡೀ ರಾತ್ರಿ ಬಾಂಬು, ಮೀಸೈಲುಗಳ ದಾಳಿ ನಡೆಯುತ್ತಿದೆ. ಇದು ಮುಂದಿನ ದಿನಗಳಲ್ಲಿ ಯಾವ ಪರಿಣಾಮ ಬೀರುತ್ತದೆ ಏನೋ ಊಹಿಸುವುದು ಕಷ್ಟ. ನಮ್ಮ ಕಾಲಘಟ್ಟದಲ್ಲಿ ಯುದ್ಧ ತಡೆಯಲು ನಮ್ಮಂತ ಸಾಮಾನ್ಯರಿಗೆ ಸಾಧ್ಯವಾಗಲಿಲ್ಲ. ಅದಕ್ಕೆ ಕ್ಷಮೆಯಾಚಿಸುತ್ತಾ…
ಇಂತಹ ಸಂದರ್ಭದಲ್ಲಿ ಭಾರತೀಯ ನಾಗರಿಕರಾದ ನಮ್ಮ ಜವಾಬ್ದಾರಿ ಬಹಳ ದೊಡ್ಡದಿದೆ. ಅದನ್ನು ನಿರ್ವಹಿಸುವ ಹೊಣೆ ನಮ್ಮ ಮೇಲಿದೆ. ಸಂವಿಧಾನದ ಪೀಠಿಕೆಯಲ್ಲಿ ಹೇಳಿರುವಂತೆ ಭಾರತೀಯರಾದ ನಾವು.....
ಈಗ ನಡೆಯುತ್ತಿರುವ ಭಾರತ - ಪಾಕಿಸ್ತಾನ ನಡುವಿನ ಯುದ್ಧದ ಎಲ್ಲಾ ಕ್ರಿಯೆ ಪ್ರಕ್ರಿಯೆ, ಸುದ್ದಿ, ಆಗುಹೋಗುಗಳ ಬಗ್ಗೆ ಸಾಧ್ಯವಾದಷ್ಟು ಗಮನಿಸುತ್ತಿರುತ್ತೇವೆ, ಭಾರತೀಯರಾದ ಇದು ನಮ್ಮ ಕರ್ತವ್ಯ. ದೇಶದ ಸುರಕ್ಷತೆಯ ಬಗ್ಗೆ ಸದಾ ಕಾಳಜಿ ವಹಿಸುತ್ತೇವೆ. ಈ ಯುದ್ಧ ಕೊನೆಗೊಳ್ಳುವವರೆಗೂ ಭಾರತೀಯರಾದ ನಾವು ಅತ್ಯಂತ ಪ್ರಾಮಾಣಿಕತೆಯಿಂದ, ಆತ್ಮಸಾಕ್ಷಿಯಾಗಿ, ಭಾರತದ ಹಿತಾಸಕ್ತಿಗಾಗಿ, ರಕ್ಷಣೆಗಾಗಿ, ಕಾಯಾ ವಾಚಾ ಮನಸಾ ಭಾರತದ ಪರವಾಗಿ ನಿಲ್ಲುತ್ತೇವೆ. ಯಾವುದೇ ರೀತಿಯ ಜಾತಿ, ಧರ್ಮ, ಭಾಷೆ, ಪಕ್ಷ, ಪ್ರದೇಶ, ವರ್ಗ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಈ ಯುದ್ಧದ ಸಂದರ್ಭದಲ್ಲಿ ವ್ಯಕ್ತಪಡಿಸುವುದಿಲ್ಲ.
ಈ ದೇಶ ಈ ಸಂದರ್ಭದಲ್ಲಿ ನಮ್ಮಿಂದ ಬಯಸುವ ಪ್ರಜಾಪ್ರಭುತ್ವೀಯವಾದ ಮತ್ತು ಮಾನವೀಯವಾದ ಯಾವುದೇ ತ್ಯಾಗ ಅಥವಾ ನಾವು ವಹಿಸಬೇಕಾದ ಪಾತ್ರವನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಲು ಸಿದ್ಧರಿದ್ದೇವೆ ಎಂದು ಪ್ರತಿಜ್ಞೆ ಕೈಗೊಳ್ಳುತ್ತೇವೆ. ಈ ಸಂದರ್ಭದಲ್ಲಿ ಮಾಧ್ಯಮಗಳಲ್ಲೇ ಆಗಲಿ, ಸಾಮಾಜಿಕ ಜಾಲತಾಣಗಳಲ್ಲೇ ಆ…
ಮುಂದೆ ಓದಿ...