ಕೃತಕ ಬುದ್ಧಿಮತ್ತೆ ಸೃಷ್ಟಿಸಿದ “ಅಮ್ಮ”
1 day 15 hours ago - addoorದಿನದಿನವೂ ಕೃತಕ ಬುದ್ಧಿಮತ್ತೆಯ ಬಗ್ಗೆ ಹೊಸಹೊಸ ಸುದ್ದಿಗಳನ್ನು ಕೇಳುತ್ತಲೇ ಇದ್ದೇವೆ. ಕೃತಕ ಬುದ್ಧಿಮತ್ತೆಯಿಂದ ಕೆಲಸ ಮಾಡುವ ರೋಬೋಟುಗಳು ಹಲವು ಕ್ಷೇತ್ರಗಳಿಗೆ ಪ್ರವೇಶಿಸಿವೆ.
ಹೋಟೆಲುಗಳಲ್ಲಿ ತಿಂಡಿ-ತಿನಿಸು ತಂದು ಕೊಡಲು; ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು - ಅಂತಹ ರೋಬೋಟುಗಳ ಬಳಕೆ ಬಗ್ಗೆ ಕೇಳಿದ್ದೇವೆ. ಮನೆಕೆಲಸಗಳಿಗಾಗಿಯೂ ರೋಬೋಟುಗಳ ಬಳಕೆ ಸುದ್ದಿಯಾಗಿದೆ. ಅದೇ ರೀತಿಯಲ್ಲಿ, ವಿಮಾನ ನಿಲ್ದಾಣಗಳಲ್ಲಿ ಧ್ವನಿವರ್ಧಕಗಳ ಮೂಲಕ ವಿಷಯ ಘೋಷಿಸಲು; ಸುದ್ದಿ ಚಾನೆಲುಗಳಲ್ಲಿ ವಾರ್ತೆಗಳನ್ನು ಓದಲು (ವಾರ್ತಾ ವಾಚಕಿಯರಾಗಿ) ಕೃತಕ ಬುದ್ಧಿಮತ್ತೆಯ ಬಲದಿಂದ ಕೆಲಸ ಮಾಡುವ “ಪರದೆಯಲ್ಲಿ ಮೂಡುವ ವ್ಯಕ್ತಿ”ಗಳನ್ನೂ ಕಂಡಿದ್ದೇವೆ.
ಇದೀಗ ಅಂತಹ “ವ್ಯಕ್ತಿ”ಗಳ ಜಗತ್ತಿಗೆ ಭಾರತದ ಪ್ರಪ್ರಥಮ ಕಾಲ್ಪನಿಕ “ಅಮ್ಮ”ನ ಪ್ರವೇಶವಾಗಿದೆ. ಆಕೆಗೆ ಕಾವ್ಯಾ ಮೆಹ್ರಾ ಎಂದು ಹೆಸರಿಡಲಾಗಿದೆ. ಇದೇನು ಕೇವಲ ಪರದೆಯ ಮೂಡುವ ಸುಂದರ ಆಕೃತಿ ಎಂದು ಭಾವಿಸಬೇಡಿ. ಆಕೆ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಒಂದು ಸುಸಜ್ಜಿತ “ವರ್ಚುವಲ್ ವ್ಯಕ್ತಿ”.
ಕಾವ್ಯಾ ಮೆಹ್ರಾ ಸಾಮಾನ್ಯ ತಾಯಿಯಲ್ಲ. ಕೃತಕ ಬುದ್ಧಿಮತ್ತೆ ವಿನ್ಯಾಸಗೊಳಿಸಿದ ಮಾಡೆಲ್. ತಾಯ್ತನದ ಎಲ್ಲ ಸಂಗತಿಗಳನ್ನೂ ಕಲಿತಿದ್ದಾಳೆ. ವಾತ್ಸಲ್ಯ ತುಂಬಿದ ತಾಯಿ ಹೋದಿರಬೇಕಾದ ಎಲ್ಲ ಸದ್ಗುಣಗಳು ಮತ್ತು ಜವಾಬ್ದಾರಿಗಳು ಆಕೆಗೆ ಚೆನ್ನಾಗಿ ಗೊತ್ತು.
“ಭಾರತದ ಮೊಟ್ಟಮೊದಲ ತಾಯಿ, ನಿಜವಾದ ಅಮ್ಮಂದಿರಿಂದ ನಡೆಸಲ್ಪಡುತ್ತಿದೆ” ಎಂಬ ಹೆಗ್ಗಳಿಕೆಯ ಕಾವ್ಯಾ ಮೆಹ್ರಾಳನ್ನು “ಕಲೆಕ್ಟಿವ್ ಆರ್ಟಿಸ್ಟ್ಸ್ ನೆಟ್-ವರ್ಕ್” ಎಂಬ ಸಂಸ್ಥೆ ಸೃಷ್ಟಿಸಿದೆ. ಆಕೆಯ ವಿವರಗಳನ್ನು ಇನ್-ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ನಿಜಜೀವನದ ತಾಯಂದಿರ ಅನುಭವಗಳನ್ನು ತಿಳಿದಿರುವ ಕಾ… ಮುಂದೆ ಓದಿ...