ನಂಬಿಕೆ, ಭಕ್ತಿ, ಸಂಸ್ಕೃತಿ, ಸಂಪ್ರದಾಯಗಳ ಹಿನ್ನೆಲೆಯಲ್ಲಿ ರಚಿತವಾಗಿರುವ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಹಬ್ಬಗಳಿಗೆ ಬಹಳ ಮಹತ್ವವಿದೆ. ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೆ ಪ್ರಾಕೃತಿಕ ಮತ್ತು ವೈಚಾರಿಕ ಅನುಭವದ ಸಾರವೂ ಅಡಗಿದೆ. ಆಚರಣೆಗಳಲ್ಲಿ ಮೌಢ್ಯ ಮತ್ತು ಶೋಷಣೆಯ ಅಂಶಗಳನ್ನು ಹೊರತುಪಡಿಸಿದರೆ ನಿಜಕ್ಕೂ ಹಬ್ಬಗಳು ನಮ್ಮ ಬದುಕಿನ ಪುನಶ್ಚೇತನದ ಶಿಬಿರಗಳಂತೆ ಕೆಲಸ ಮಾಡುತ್ತವೆ. ಆಧುನಿಕ ಬದುಕಿನ ವೇಗ ಮತ್ತು ಒತ್ತಡದ ನಡುವೆ ಹಬ್ಬಗಳನ್ನು ಮರು ವ್ಯಾಖ್ಯಾನ ಮಾಡಿ ಮತ್ತೊಮ್ಮೆ ಅದನ್ನು ಪುನರ್ ಸ್ಥಾಪಿಸಬೇಕು ಎಂದೆನಿಸುತ್ತದೆ.
ಸಂಕ್ರಾಂತಿ, ರೂಪಾಂತರಿ ವೈರಸ್ಗಳು ಮನುಷ್ಯ ಜನಾಂಗವನ್ನು ಇನ್ನಿಲ್ಲದಂತೆ ಕಾಡುತ್ತಿರುವಾಗ, ಮಾಧ್ಯಮಗಳು ಅದಕ್ಕಿಂತ ಹೆಚ್ಚು ಬಾಲಿಶ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವಾಗ, ರಾಜಕಾರಣಿಗಳು ಅದಕ್ಕೂ ಮೀರಿ ಭ್ರಷ್ಟರಾಗುತ್ತಿರುವಾಗ, ಉದ್ಯಮಿಗಳು ಎಲ್ಲವನ್ನೂ ಮೀರಿ ಹಣದಾಹಿಗಳಾಗುತ್ತಿರುವಾಗ ಸಾಮಾನ್ಯ ಜನರ ಪಾಲಿಗೆ ಬದುಕುವುದೇ ಒಂದು ಸಾಧನೆಯಾಗಿ ಜೀವ ಜೀವನದ ಆಯ್ಕೆಯ ಗೊಂದಲದಲ್ಲಿರುವಾಗ… ಹೊಸ ವರುಷ ಮೊದಲ ಹಬ್ಬ ನಮ್ಮ ಬಾಗಿಲ ಬಳಿ ನಿಂತಿದೆ.
ಈ ಸಂದರ್ಭದಲ್ಲಿ.... ಆಗಲಿ ಮನಸುಗಳ ಕ್ರಾಂತಿ, ಭಾರತೀಯತೆ - ಮಾನವೀಯತೆಯ ಕ್ರಾಂತಿ, ತೊಲಗಲಿ ಮೌಢ್ಯಗಳ ಭ್ರಾಂತಿ, ತುಡಿಯಲಿ ಸಹಜೀವಿಗಳೆಡೆಗೆ ಶಾಂತಿ, ಮುಗಿಲೆತ್ತರಕ್ಕೇರಲಿ ಚಿಂತನೆಯ ಕ್ರಾಂತಿ, ಪಾತಾಳಕ್ಕಿಳಿಯಲಿ ಕಲ್ಮಶದ ಭ್ರಾಂತಿ. ಹಬ್ಬದ ಸಂಭ್ರಮಗಳು ನಮ್ಮ ಮೈ ಮನಸ್ಸಿಗೆ ವಿಶ್ರಾಂತಿ ನೀಡಲಿ, ನಮ್ಮ ಆತ್ಮಾವಲೋಕನಕ್ಕೆ ಸಮಯಾವಕಾಶ ಕಲ್ಪಿಸಲಿ.
ಯೋಚಿಸೋಣ - ಮತ್ತೆ ಮತ್ತೆ, ಸರಿ ತಪ್ಪುಗಳ ವಿಮರ್ಶೆಗೆ ಒಳಪಡೋಣ, ಇತಿಹಾಸದ ಬೆಳಕಲ್ಲಿ ವರ್ತಮಾನದ ಕತ್ತಲನ್ನು ಓಡಿಸೋಣ, ನಮ್ಮ ನೋವು, ಯಾತನೆಗಳನ್ನು ಕಡಿಮೆ ಮಾಡಿಕೊಳ್ಳೋಣ,…
ಮುಂದೆ ಓದಿ...