ಬಿಳಿ ಮೈಬಣ್ಣದ ಹಿಟ್ಟಿನಂತೆ ಅಂಟುವ ಕೀಟ ಬಹುತೇಕ ಸಸ್ಯಗಳಲ್ಲಿ ರಸ ಹೀರುವ ಕೀಟವಾಗಿ ಬೆಳೆಗಳಿಗೆ ತೊಂದರೆ ಮಾಡುತ್ತದೆ. ತರಕಾರಿಗಳಾದ ಅಲಸಂಡೆ, ಬೆಂಡೆ, ಬದನೆ ಬೆಳೆಗಳು, ಹೂವಿನ ಗಿಡಗಳಾದ ದಾಸವಾಳ, ಗುಲಾಬಿ, ತೋಟಗಾರಿಕಾ ಬೆಳೆಗಳಾದ ಮಾವು,ಪಪ್ಪಾಯ, ಮುಸಂಬಿ, ಲಿಂಬೆ,ನೇರಳೆ, ಅನಾನಾಸು, ಪೇರಳೆ, ಸೀತಾಫಲ ಮುಂತಾದ ಬೆಳೆಗಳಿಗೆ, ಕಬ್ಬು, ಹತ್ತಿ, ಮುಂತಾದ ವಾಣಿಜ್ಯ ಬೆಳೆಗಳಿಗೆ, ಎಣ್ಣೆ ಕಾಳು ಬೆಳೆಗಳಾದ ಸೂರ್ಯಕಾಂತಿ, ನೆಲಕಡ್ಲೆ, ಸೋಯಾ ಅವರೆ, ತೊಗರಿ, ಹಿಪ್ಪು ನೇರಳೆ, ಕಾಡು ಸಸ್ಯಗಳು, ದ್ರಾಕ್ಷಿ, ಸೇಬು, ಆಲೂಗಡ್ಡೆ, ಮರಗೆಣಸು ಅಲ್ಲದೇ ಎಲ್ಲಾ ನಮೂನೆಯ ಪುಷ್ಪ ಬೆಳೆಗಳಿಗೆ (೨೦೦ ಕ್ಕೂ ಹೆಚ್ಚು ಬೆಳೆಗಳಿಗೆ ಹಾನಿ ಮಾಡುತ್ತದೆ) ಈ ಹಿಟ್ಟು ತಿಗಣೆಯ ಬಾಧೆ ಇರುತ್ತದೆ. ಹಿಟ್ಟು ತಿಗಣೆ ಬಾಧಿಸಿದ ಭಾಗದಿಂದ ಅದು ರಸ ಹೀರಿ ಘಾಸಿಗೊಳಪಡಿಸುತ್ತದೆ.
ಇದನ್ನು ಮೀಲೀ ಬಗ್ (Mealy Bug) ಎಂಬುದಾಗಿ ಕರೆಯುತ್ತಾರೆ. ಅತೀ ಸಣ್ಣ ಕೀಟ. ಈ ಕೀಟದ ಮೈ ಮೇಲೆ ಯಾವಾಗಲೂ ಬಿಳಿ ಬಣ್ಣದ ಹಿಟ್ಟಿನ ತರಹದ ಪುಡಿ ಇರುವ ಕಾರಣ ಇದಕ್ಕೆ ಹಿಟ್ಟು ತಿಗಣೆ ಎಂಬ ಹೆಸರಿಡಲಾಗಿದೆ. ಕೀಟ ಬೆಳೆದಂತೆ ಅದರಲ್ಲಿ ಈ ಬಿಳಿ ಅಂಶ ಹೆಚ್ಚುತ್ತಾ ಹೋಗುತ್ತದೆ. ಸಸ್ಯಗಳ ಕಾಯಿ, ಹೂವು, ಮೊಗ್ಗು, ಕಾಂಡಗಳಲ್ಲಿ ಕುಳಿತು ರಸ ಹೀರುತ್ತದೆ. ಕೀಟದ ಮೈ ಮೇಲಿರುವ ಬಿಳಿ ಹುಡಿ ಅದನ್ನು ರಕ್ಷಿಸುತ್ತದೆ. ಗಾಳಿ, ಪಕ್ಷಿ, ನೀರು ಮತ್ತು ಸಾಗಾಣಿಕೆ ಮೂಲಕ ವರ್ಗಾವಣೆಯಾಗುತ್ತದೆ.
ಇವು ಸಸ್ಯ ರಸದಿಂದ ದ್ರವ ಆಹಾರ ಸೇವಿಸುವವುಗಳು.ಇದು ಮೃದು ಕೀಟವಾಗಿ ಕಂಡರೂ ಸಹ ಬಲಿಷ್ಟ ಹಲ್ಲುಗಳನ್ನು ಹೊಂದಿದೆ. ಬೇಗ ಸಂತಾನಾಭಿವೃದ್ದಿಗೊಂಡು ಸಂಖ್ಯಾಭಿವೃದ್ದಿಯಾಗುತ್ತದೆ. ಇದರ ಹೆಣ್ಣು ತಿಗಣೆ ಒಮ್ಮೆ ೩೦೦ ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳನ್ನು ತಮ್ಮ ಬ…
ಮುಂದೆ ಓದಿ...